ಕಾಪು: ಸೋಮವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಮಜೂರು ಗ್ರಾಮದ ಮಜೂರು – ಕರಂದಾಡಿ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ತುಂಡಾಗಿವೆ.
Advertisement
ಮರ ಬಿದ್ದು ಎರಡು ವಿದ್ಯುತ್ ಕಂಬಗಳು ತುಂಡಾಗಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದ್ದು ರಾತ್ರಿಯಿಡೀ ಜನರು ಕತ್ತಲಿನಲ್ಲೇ ಸಮಯ ಕಳೆಯುವಂತಾಗಿದೆ.
ರಸ್ತೆಗೆ ಅಡ್ಡವಾಗಿ ಮರ ಬಿದ್ದು ಸಂಚಾರಕ್ಕೂ ತೊಂದರೆಯುಂಟಾಗಿದ್ದು ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬಂದಿಗಳು ಮತ್ತು ಸ್ಥಳೀಯರು ಮರ ತೆರವು ಕಾರ್ಯಾಚರಣೆಯ ನಡೆಸಿದ್ದಾರೆ.
Related Articles
ವಿದ್ಯುತ್ ತಂತಿ ಜೋಡಣಾ ಕಾರ್ಯ ನಡೆಯುತ್ತಿದ್ದು ಮಧ್ಯಾಹ್ನದೊಳಗೆ ವಿದ್ಯುತ್ ಪೂರೈಕೆಯಾಗುವ ನಿರೀಕ್ಷೆಯಿದೆ.
Advertisement