ಮಂಗಳೂರು/ಸುಬ್ರಹ್ಮಣ್ಯ/ ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ವೇಳೆಗೆ ಉತ್ತಮ ಮಳೆ ಸುರಿದಿದೆ.
ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ, ಕಡಬ, ಕೊಂಬಾರು ಪರಿಸರದಲ್ಲಿ, ಬೆಳ್ತಂಗಡಿ ತಾಲೂಕಿನ ಉಜಿರೆ, ಕಡಿರುದ್ಯಾವರ ಸೇರಿದಂತೆ ಸುತ್ತಮುತ್ತ ಒಂದು ತಾಸು ಧಾರಾಕಾರ ಮಳೆಯಾಗಿದೆ.
ಸುಬ್ರಹ್ಮಣ್ಯ ಪರಿಸರದಲ್ಲಿ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಇದ್ದು, ಮಧ್ಯಾಹ್ನ ವೇಳೆಗೆ ಸಾಧಾರಣ ಮಳೆಯಾಗಿದ್ದು, ಸಾಯಂಕಾಲ ಧಾರಾಕಾರ ಮಳೆಯಾಯಿತು. ರವಿವಾರ ರಾತ್ರಿಯೂ ಭಾರೀ ಮಳೆಯಾಗಿತ್ತು. ಷಷ್ಠಿ ಮಹೋತ್ಸವದ ಹಿನ್ನೆಲೆಯಲ್ಲಿ ಕುಕ್ಕೆ ಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು ಅವರ ಭಕ್ತಿಗೆ ಮಳೆಯ ಸಿಂಚನವಾಯಿತು.
ಉಳಿದಂತೆ ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ, ಉಡುಪಿ ಜಿಲ್ಲೆಯ ಕೆಲವೆಡೆ ಅಲ್ಲಲ್ಲಿ ಮಳೆ ಸುರಿದಿದೆ.
ಮಳೆಯ ನಡುವೆಯೂ ಬಿಸಿಲ ಧಗೆ ಮುಂದುವರಿದಿದ್ದು, ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 28.1 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
Related Articles
ಎರಡು ದಿನಗಳಿಂದ ಚಳಿಯ ತೀವ್ರತೆಯೂ ಕಡಿಮೆಯಾಗಿದೆ. ಕರಾವಳಿಯ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ
ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ; ರಾರಾಜಿಸುತ್ತಿರುವ ಬ್ಯಾನರ್, ಬಂಟಿಂಗ್ಸ್