Advertisement

ಬೆಟ್ಟಂಪಾಡಿ ;  ಭಾರಿ ಮಳೆಗೆ ನಿಡ್ಪಳ್ಳಿ- ರೆಂಜ ಸಂಪರ್ಕ ಕಡಿತ, ತ್ರಿಶಂಕು ಸ್ಥಿತಿಯಲ್ಲಿ ಜನತೆ

03:21 PM Jun 30, 2022 | Team Udayavani |

ಬೆಟ್ಟಂಪಾಡಿ; ನಿಡ್ಪಳ್ಳಿಯಿಂದ ರೆಂಜ ಬೆಟ್ಟಂಪಾಡಿ ಸಂಪರ್ಕಿಸಲು ಇದ್ದ ಏಕೈಕ ಬದಲಿ ರಸ್ತೆಯಾದ ದೇವಸ್ಯದಲ್ಲಿ ವಿಪರೀತ ಮಳೆಯಿಂದಾಗಿ ನೀರು ತುಂಬಿ ವಾಹನ ಸವಾರರಿಗೆ ಅಡಚಣೆ ಉಂಟಾದ ಕಾರಣ ನಿಡ್ಪಳ್ಳಿಯಿಂದ ಬೆಟ್ಟಂಪಾಡಿ ಸಂಪರ್ಕ ಕಡಿತ ಗೊಂಡಿದೆ.

Advertisement

ಚಿಲ್ಲೆಡ್ ಮುಳುಗು ಸೇತುವೆ ಮುಳುಗಿದ್ದು ವಾಹನ ಸವಾರರು ಬದಲಿ ರಸ್ತೆ ಮೂಲಕ ಸಂಚರಿಸುತ್ತಿದ್ದಾರೆ. ಕೂಟೇಲು ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಿದ ನಂತರ ಮುಡ್ಪಿನಡ್ಕ ಬೆಟ್ಟಂಪಾಡಿ ರಸ್ತೆ ಸಂಪರ್ಕ ಕಡಿತ ಗೊಳಿಸಲಾಗಿತ್ತು. ಈ ಭಾಗದ ಜನರಿಗೆ ಬೆಟ್ಟಂಪಾಡಿ ಸಂಪರ್ಕಕ್ಕೆ ಇದ್ದ ಏಕೈಕ ರಸ್ತೆ ಈ ದೇವಸ್ಯ ರಸ್ತೆಯಲ್ಲಿ ಒಂದು ತೋಡು ಇದ್ದು ಅದರಲ್ಲಿ ಈಗ ನೀರು ಯಥೇಚ್ಛವಾಗಿ ಬರುತ್ತಿದೆ. ಇಲ್ಲಿ ಮಳೆಗಾಲದಲ್ಲಿ ತೋಡು, ಬೇಸಿಗೆ ಕಾಲದಲ್ಲಿ ರೋಡು ಆಗಿದ್ದು ಈಗ ಮಳೆ ಜೋರಾಗಿ ಬರುವುದರಿಂದ ಸಂಚಾರಕ್ಕೆ ಆಗುತ್ತಿಲ್ಲ. ಆದುದರಿಂದ ವಿದ್ಯಾರ್ಥಿಗಳು, ದಿನಂಪ್ರತಿ ಕೆಲಸ ವ್ಯವಹಾರಗಳಿಗೆ ಹೋಗುವ ಜನರು ಇಲ್ಲಿ ಸಂಚರಿಸಲು ತೊಂದರೆಯಾಗಿದೆ. ಅಲ್ಲದೆ ಎಂಪೆಕಲ್ಲು ಬೆಟ್ಟಂಪಾಡಿ ಸಂಪರ್ಕ ರಸ್ತೆಯಲ್ಲಿ ಕೂಡ ಈಗ ಸಂಚಾರ ಸ್ಥಗಿತಗೊಂಡ ಕಾರಣ ಈ ಭಾಗದ ಜನರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

ಭಾರಿ ಮಳೆಗೆ ಸಂಪೂರ್ಣ ಮುಳುಗಡೆಯಾದ ಕೂಟೇಲು ಪರಿಸರ
ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಜೂ.30 ರಂದು ನಿಡ್ಪಳ್ಳಿ ಗ್ರಾಮದ ಕೂಟೇಲು ಪರಿಸರ ಸಂಪೂರ್ಣ ನೀರಿನಿಂದ ಮುಳುಗಡೆಯಾಗಿದ್ದು ಜನರು ಆತಂಕಗೊಂಡಿದ್ದಾರೆ.

ಕೂಟೇಲು ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು ಸೇತುವೆಗೆ ಕಾಂಕ್ರೀಟ್ ಹಾಕಲು ಹಲಗೆ ಮತ್ತು ಕಬ್ಬಿಣ ಜೋಡಿಸಲು ಅಡಿಗೆ ಕಂಬ ಹಾಕಿದ್ದು ನೀರು ಹರಿಯಲು ಅವಕಾಶ ಇಲ್ಲದಿರುವುದರಿಂದ ಪಕ್ಕದ ತೋಟಗಳಿಗೆ ನುಗ್ಗಿ ಇಡೀ ಪರಿಸರ ನೀರಿನಿಂದ ಅವೃತವಾಗಿದೆ.ಅಲ್ಲದೆ ಅಲ್ಲಿ ರಾಶಿ ಹಾಕಿದ ಮಣ್ಣು ತೆಗೆಯದೆ ಇರುವುದರಿಂದಲೂ ತೋಟಗಳಿಗೆ ನೀರು ನುಗ್ಗಲು ಕಾರಣ ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.

Advertisement

ಇದನ್ನೂ ಓದಿ : ಚಿಕ್ಕೋಡಿ: ರೈತರ ಆರ್ಥಿಕ ಮಟ್ಟ ಸುಧಾರಿಸಲು ಬಿಡಿಸಿಸಿ ಬ್ಯಾಂಕ್ ಪಾತ್ರ ಮುಖ್ಯ: ರಮೇಶ ಕತ್ತಿ

ಕೂಟೇಲು ಪರಿಸರದ ಸುಮಾರು ಆರು ಜನರ ತೋಟ ಕೆಂಪು ನೀರಿನಿಂದ ತುಂಬಿದ್ದು ಮಳೆ ಈಗೆಯೇ ಮುಂದುವರಿದರೆ ಅಡಿಕೆ, ತೆಂಗು, ಕಾಳುಮೆಣಸು ಕೃಷಿ ನಾಶವಾಗುವ ಸಂಭವ ಇದೆ ಎಂದು ಅತಂಕದಲ್ಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next