ಮಂಡ್ಯ: ಕಳೆದ ರಾತ್ರಿ ಸುರಿದ ಮಳೆಗೆ ಆಲೆಮನೆ ಕುಸಿದುಬಿದ್ದು ಮೇಕೆ ಮರಿ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಶ್ಯಾದನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಾವಯವ ಕೃಷಿಕ ಸಿ.ಚಲುವರಾಜು ಅವರಿಗೆ ಸೇರಿದ ಆಲೆಮನೆಯಾಗಿದ್ದು, ಕುಸಿತದಿಂದ ಕಲ್ನರ್ ಶೀಟ್ ಗಳು, ಜಂತಿಗಳು ಸೇರಿದಂತೆ ಇತರೆ ವಸ್ತುಗಳು ಹಾನಿಗೊಳಗಾಗಿದ್ದು ಸುಮಾರು 1.5ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ.
ಆಲೆಮನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಒಂದು ವೇಳೆ ಆಲೆಮನೆ ಆರಂಭವಾಗಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು ಎಂದು ಆಲೆಮನೆ ಮಾಲೀಕ ಚಲುವರಾಜು ತಿಳಿಸಿದ್ದಾರೆ.
ಇದನ್ನೂ ಓದಿ:ಕಟ್ಟಡ ನಿರ್ಮಾಣ ಮಾಡಿದರೂ ಹಣ ನೀಡದ ಗ್ರಾಪಂ
ಪ್ರಸಕ್ತ ವರ್ಷ ಆಲೆಮನೆಗಳು ಸರಿಯಾಗಿ ನಡೆಯದೆ, ಜತೆಗೆ ಕಳೆದ ಒಂದು ತಿಂಗಳಿನಿಂದಲೂ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಲೆಮನೆ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರಗಳು ಆಲೆಮನೆಗೆ ಉತ್ತೇಜನ ನೀಡುವ ಮೂಲಕ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಚಲುವರಾಜು ಒತ್ತಾಯಿಸಿದ್ದಾರೆ.