Advertisement

ಹುಬ್ಬಳ್ಳಿ: ಬಿರುಗಾಳಿ ಮಳೆಗೆ ಮರ ಬಿದ್ದು ಓರ್ವ ಸಾವು, ಇಬ್ಬರಿಗೆ ಗಾಯ

10:09 PM May 04, 2022 | Team Udayavani |

ಹುಬ್ಬಳ್ಳಿ: ನಗರದಲ್ಲಿ ಬುಧವಾರ ಸಂಜೆ ಬಿರುಗಾಳಿ ಸಮೇತ ಸುರಿದ ಮಳೆಗೆ ಓರ್ವ ಸಾವನ್ನಪ್ಪಿ ಇನ್ನಿಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.

Advertisement

ಇಲ್ಲಿನ ದೇಸಾಯಿ ವೃತ್ತದಲ್ಲಿ ಚಲಿಸುತ್ತಿದ್ದ ಆಟೋ ರೀಕ್ಷಾ ಹಾಗೂ ಕಾರಿನ ಮೇಲೆ ಮರ ಉರುಳಿ ಬಿದ್ದಿದ್ದು, ಇದರಿಂದಾಗಿ ಆಟೋ ರಿಕ್ಷಾದಲ್ಲಿದ್ದ ಮೂವರು ಗಾಯಗೊಂಡಿದ್ದರು. ಮೂವರನ್ನು ರಕ್ಷಿಸಿ ಕಿಮ್ಸ್ ಗೆ ಕಳುಹಿಸಲಾಗಿತ್ತು. ಆದರೆ ಪ್ರಯಾಣಿಕ ರಾಬಿನ್ ಮೋರಿಸ್ ಎನ್ನುವರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರಿಂದ ಅಸುನೀಗಿದ್ದಾರೆ.

ಗಾಯಗೊಂಡಿರುವ ಆಟೋ ಚಾಲಕ ಹಾಗೂ ಮತ್ತೋರ್ವ ಪ್ರಯಾಣಿಕನಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next