Advertisement

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಭಾರಿ ವಾಹನ ಸಂಚಾರ ನಿಷೇಧ

11:30 AM Jul 16, 2022 | Team Udayavani |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯಬ್ಬರ ಮುಂದುವರಿದಿದ್ದು, ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ ಭಾರಿ ವಾಹನ ಸಂಚಾರವನ್ನ ನಿಷೇಧಿಸಲಾಗಿದೆ.

Advertisement

ಕಳೆದೆರಡು ವಾರದಿಂದ ಹೆಚ್ಚಿನ ಮಳೆ ಸುರಿಯುತ್ತಿದ್ದು, ರಸ್ತೆಗಳಲ್ಲಿ ಭೂಕುಸಿತ, ಸೇತುವೆಗಳಿಗೆ ಹಾನಿಯಾಗಿ ಚರಂಡಿ/ಮೋರಿಗಳು ತುಂಬಿ ಹರಿಯುತ್ತಿದ್ದು, ಹಾಗೂ ದೊಡ್ಡ ಗಾತ್ರದ ಮರಗಳು ಉರುಳಿ ರಸ್ತೆ ಹಾನಿಯಾಗಿದೆ. ಈ ಸಮಯದಲ್ಲಿ ಭಾರೀ ವಾಹನಗಳು ಅಧಿಕ ಭಾರವನ್ನು ಹೊತ್ತುಕೊಂಡು ರಸ್ತೆಗಳಲ್ಲಿ ಸಂಚರಿಸಿದರೆ ಸೇತುವೆಗಳಿಗೆ ಇನ್ನಷ್ಟು ಹಾನಿಯಾಗಬಹುದು. ಹೀಗಾಗಿ ಜಿಲ್ಲೆಯಾದ್ಯಂತ 12,000 ಕೆಜಿ ಮೇಲ್ಪಟ್ಟ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಜಿಲ್ಲಧಿಕಾರಿ ಕೆ.ಎನ್.ರಮೇಶ್ ಆದೇಶಿಸಿದ್ದಾರೆ.

ಇದನ್ನೂ ಓದಿ:ಮುಂಬರುವ ಚುನಾವಣೆಯಲ್ಲಿ ರಾಜಕೀಯ ತ್ಯಜಿಸ್ತೇನೆ…ಆದರೆ… ಉದ್ಧವ್ ಗೆ ಏಕನಾಥ ಶಿಂಧೆ ಸವಾಲೇನು?

ದತ್ತಾತ್ರೇಯ ಬಾಬಾ ಬುಡನ್ ದರ್ಗಾ, ಸೀತಾಳಯ್ಯನಗಿರಿ, ಮುಳ್ಳಯನಗಿರಿ, ಮಾಣಿಕ್ಯದಾರ, ಗಾಳಿಕೆರೆ, ದಬ್ ದಬೆ ಫಾಲ್ಸ್ ಹಾಗೂ ಇತರೆ ಗಿರಿ ಪ್ರದೇಶಗಳಲ್ಲಿ ಭಾರೀ ಮಳೆಯ ಕಾರಣದಿಂದ ಕೈಮರ ಚೆಕ್ ಪೋಸ್ಟ್ ನಿಂದ ಹಾಗೂ ಕೆಮ್ಮಣ್ಣು ಗುಂಡಿ ಕ್ರಾಸ್ ನಿಂದ ಬಾಬಾ ಬುಡನ್ ದರ್ಗಾ ಮಾರ್ಗದಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next