Advertisement
ವರದಿಗಳ ಪ್ರಕಾರ ಶುಕ್ರವಾರ ಮೃತಪಟ್ಟವರ ಪೈಕಿ 17 ಮಂದಿ ಉತ್ತರಪ್ರದೇಶ ದವರು. ಬಿಹಾರದಲ್ಲಿ 14, ಒಡಿಶಾದಲ್ಲಿ 5 ಮತ್ತು ಝಾರ್ಖಂಡ್‌ನಲ್ಲಿ 4 ಸಾವು ವರದಿಯಾಗಿವೆ. ಅಲ್ಲದೆ 1,300ಕ್ಕೂ ಅಧಿಕ ಮಂದಿ ಸೌರಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಿರು ಬಿಸಿಲಿನ ನಡುವೆಯೂ ಅಯೋಧ್ಯೆಯ ರಾಮನ ದರ್ಶನಕ್ಕೆ ಬರುತ್ತಿರುವ ಭಕ್ತರಿಗಾಗಿ ದೇಗುಲ ಆಡಳಿತ ಮಂಡಳಿ ವಿಶೇಷ ಆತಿಥ್ಯ ಒದಗಿಸಲು ಮುಂದಾಗಿದೆ. ಇದರ ಭಾಗವಾಗಿ 500 ಮಂದಿ ವಿಶ್ರಮಿಸಬಲ್ಲ ಕೇಂದ್ರ ಸ್ಥಾಪಿಸಿರುವುದಾಗಿ ತಿಳಿಸಿದೆ. ಕೂಲರ್‌ಗಳನ್ನು ಅಳವಡಿಸಲಾಗಿದ್ದು ಒಆರ್‌ಎಸ್ ಕೂಡ ಒದಗಿಸಲಾಗುತ್ತಿದೆ.
Related Articles
ದೇಶಾದ್ಯಂತ ಬಿಸಿಲ ಬೇಗೆಗೆ ಜನರು ತತ್ತರಿಸುತ್ತಿದ್ದರೂ ಆಡಳಿತವು ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಈ ಹಿನ್ನೆಲೆ ಯಲ್ಲಿ ಸೌರಾಘಾತವು ರಾಷ್ಟ್ರೀಯ ತುರ್ತುಸ್ಥಿತಿ ಎಂಬುದಾಗಿ ಘೋಷಿಸಿ ಎಂದು ರಾಜಸ್ಥಾನ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ.
Advertisement