Advertisement

ಚುನಾವಣಾ ಬಹಿಷ್ಕಾರದ ಬಿಸಿ : ಚೇಲಾವರಕ್ಕೆ ತಹಶೀಲ್ದಾರ್‌ ಭೇಟಿ

11:53 PM Mar 25, 2019 | sudhir |

ಮಡಿಕೇರಿ :ಚುನಾವಣೆ ಸಮೀಪಿಸುತ್ತಿರುವಂತೆಯೇ ಮೂಲ‌ ಸಮಸ್ಯೆಗಳನ್ನು ಎದುರಿಸುತ್ತಿರುವ ಗ್ರಾಮಗಳ ಮತದಾರರು ಚುನಾವಣೆ ಬಹಿಷ್ಕರಿಸುವ ಬೆದರಿಕೆವೊಡ್ಡುವ ಮೂಲಕ ಅಭಿವೃದ್ಧಿ ಕಾರ್ಯಗಳು ಈ ನೆಪದಲ್ಲಾದರು ನಡೆಯಲಿ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

Advertisement

ಮೂಲ ಸಮಸ್ಯೆಗಳ ಕುರಿತು ಗಮನ ಸೆಳೆದಿದ್ದ ಚೇಲಾವರ ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡ ಮಡಿಕೇರಿ ತಹಶೀಲ್ದಾರ್‌ ನಟೇಶ್‌ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಮಸ್ಯೆಗಳ ಬಗ್ಗೆ ಸಮಾಲೋಚಿಸಿ ಪರಿಹಾರದ ಭರವಸೆ ನೀಡಿದರು. ಗ್ರಾಮಸ್ಥ ಪಟ್ಟೇಚರುವಂಡ ಸುಬ್ಬಯ್ಯ ಮಾತನಾಡಿ ಚೇಲವಾರ-ಪತ್ತೇಟಿ ರಸ್ತೆ ದುರಸ್ತಿ ಕಾಣದೆ 20 ವರ್ಷಗಳೇ ಕಳೆದಿದೆ. ರಸ್ತೆ ಅಭಿವೃದ್ಧಿಮಾಡುತ್ತಿಲ್ಲ. ವಿದ್ಯುತ್‌ ಪೂರೈಕೆಯೂ ಸಮರ್ಪಕವಾಗಿಲ್ಲ, ಕುಡಿಯುವ ನೀರಿನ ಸಮಸ್ಯೆ ಮಿತಿ ಮೀರಿದೆ ಎಂದು ಆರೋಪಿಸಿದರು.

ಮತ್ತೂಬ್ಬ ಗ್ರಾಮಸ್ಥ ತಿಲಕ್‌ ಮಾತನಾಡಿ ಗ್ರಾಮದಲ್ಲಿ ಸಮಾರು 800 ಮತದಾರರಿದ್ದು, 400 ಕ್ಕಿಂತ ಅಧಿಕ ಕುಟುಂಬಗಳಿವೆ. ಗ್ರಾ.ಪಂ, ತಾ.ಪಂ, ಜಿ.ಪಂ ಪ್ರತ್ರಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾಮದ ಸಮಸ್ಯೆಗಳಿಗೆ ಇಲ್ಲಿಯವರೆಗೆ ಸೂಕ್ತ ಸ್ಪಂದನೆ ನೀಡಿಲ್ಲ ಎಂದು ಆರೋಪಿಸಿದರು.

ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು, ಇದನ್ನು ಚಲಾಯಿಸುವಂತೆ ಮನವೊಲಿಸಿದರು. ಸಮಸ್ಯೆಗಳ ಪರಿಹಾರಕ್ಕೆ ಇದು ಸೂಕ್ತ ಸಮಯವಲ್ಲ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಇಲಾಖೆಯ ಮಟ್ಟದಲ್ಲಿ ಸಭೆ ಕರೆಯುವುದು ಅಸಾಧ್ಯವಾಗಿದೆ. ಚುನಾವಣೆ ಮುಗಿದ ನಂತರ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗಳ ಸಮಗ್ರ ವರದಿಯನ್ನು ಸಿದ್ಧಪಡಿಸಿ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ತಹಶೀಲ್ದಾರರುಭರವಸೆ ನೀಡಿದರು. ಚೇಲಾವರ ಯುವಕ ಸಂಘದ ಅಧ್ಯಕ್ಷ ಜೈನೀರ ತನು, ನಾಪೋಕ್ಲು ಹೋಬಳಿಯ ಕಂದಾಯ ಪರಿವೀಕ್ಷಕ ಡಿ.ರಾಮಯ್ಯ, ಗ್ರಾಮ ಲೆಕ್ಕಾಧಿಕಾರಿ ಸ್ವಾತಿ, ಗ್ರಾಮ ಸಹಾಯಕ ಕೆ.ಎಂ.ರಾಜ, ನರಿಯಂದಡ ಗ್ರಾ.ಪಂ ಉಪಾಧ್ಯಕ್ಷ ರತೀಶ್‌ ಕುಮಾರ್‌ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next