Advertisement

Heat Waves: ಕರಾಚಿಯಲ್ಲಿ ಬಿಸಿ ಹವೆಗೆ 4 ದಿನದಲ್ಲಿ 450 ಸಾವು

10:15 PM Jun 26, 2024 | Team Udayavani |

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಹೆಚ್ಚಿದ ಉಷ್ಣ ಮಾರುತದಿಂದ ಕಳೆದ 4 ದಿನಗಳಲ್ಲಿ 450 ಜನ ಅಸುನೀಗಿದ್ದಾರೆ ಎಂದು ಎನ್‌ ಜಿಒ ಈಧಿ ಸಂಸ್ಥೆ ತಿಳಿಸಿದೆ.

Advertisement

ಕರಾಚಿಯಲ್ಲಿ ಕಳೆದ 3 ದಿನಗಳಿಂದ ನಿರಂತರವಾಗಿ 40 ಡಿ.ಸೆ. ತಾಪಮಾನವಿದ್ದು, ಸಮುದ್ರ ತೀರದಲ್ಲಿ ಬಿಸಿ ಹವೆ ಹೆಚ್ಚಳವಾಗಿದೆ.

ನಮ್ಮಲ್ಲಿ 4 ಶವಾಗಾರವಿದ್ದು ಈವರೆಗೆ 427 ಮೃತದೇಹಗಳನ್ನು ಸ್ವೀಕರಿಸಿದ್ದೇವೆ. ಉಳಿದ 23 ಮೃತದೇಹಗಳು ಸರ್ಕಾರಿ ಆಸ್ಪತ್ರೆಯಲ್ಲಿವೆ. ಮೃತಪಟ್ಟವರಲ್ಲಿ ಬಹುತೇಕರು ಬಡವರಾಗಿದ್ದು, ದಿನವಿಡೀ ಬಿಸಿಲಿನ ಶಾಖಕ್ಕೆ ತುತ್ತಾಗಿದ್ದಾರೆ ಎಂದು ಈಧಿ ಸಂಸ್ಥೆಯ ಮುಖ್ಯಸ್ಥ ಫೈಸಲ್‌ ಈಧಿ ತಿಳಿಸಿದ್ದಾರೆ.

ಇದನ್ನೂ ಓದಿ: ನಮಗೆ ನ್ಯಾಯ ಸಿಗುವ ಭರವಸೆಯಿದೆ.. ದರ್ಶನ್ ಬಗ್ಗೆ ಮೌನ ಮುರಿದ ಪತ್ನಿ ವಿಜಯಲಕ್ಷ್ಮೀ

Advertisement

Udayavani is now on Telegram. Click here to join our channel and stay updated with the latest news.

Next