Advertisement

ಔಷಧ ಅಂಗಡಿಗಳ ಬಂದ್‌ ಬಿಸಿ

01:26 PM May 31, 2017 | Team Udayavani |

ದಾವಣಗೆರೆ: ಕೇಂದ್ರ ಸರ್ಕಾರದ ಆನ್‌ಲೈನ್‌ ಔಷಧ ಮಾರಾಟದ ನೀತಿ ಖಂಡಿಸಿ ಅಖೀಲ ಭಾರತ ಔಷಧ ವ್ಯಾಪಾರಿಗಳ ಸಂಘದ ಕರೆಯ ಮೇರೆಗೆ ಜಿಲ್ಲಾ ಕೇಂದ್ರ ದಾವಣಗೆರೆಯಲ್ಲಿ ಮಂಗಳವಾರ ಆನ್‌ಲೈನ್‌ ಔಷಧ ಅಂಗಡಿಗಳು ಬಂದ್‌ ಆಗಿದ್ದವು. 

Advertisement

ವೈದ್ಯರು ಬರೆದುಕೊಡುವ ಪ್ರಿಸ್ಕಿಷÒನ್‌, ಗ್ರಾಹಕರಿಗೆ ಕೊಡುವಂತಹ ಔಷಧ… ಪ್ರತಿಯೊಂದನ್ನು ಆನ್‌ ಲೈನ್‌ನಲ್ಲಿ ದಾಖಲಿಸಬೇಕು ಎಂಬ ಕೇಂದ್ರದ ನೀತಿ ಖಂಡಿಸಿ ಅಂಗಡಿ ಬಂದ್‌ ಮಾಡುವ ಪ್ರತಿಭಟನೆ ವ್ಯಕ್ತಪಡಿಸಿದರು. 

ಔಷಧ ಅಂಗಡಿಗಳು ಬಂದ್‌ ಮಾಡಿರುವ ಬಗ್ಗೆ ಮಾಹಿತಿ ಇಲ್ಲದ ಅನೇಕರು ಔಷಧಕ್ಕಾಗಿ ಅಲೆದಾಡುವಂತಾಯಿತು. ಔಷಧ ಅಂಗಡಿಗಳು ಬಂದ್‌ನಿಂದಾಗಿ ಸದಾ ಗಿಜಿಗುಡುತ್ತಿದ್ದ ಜಿಲ್ಲಾ ಆಸ್ಪತ್ರೆ ರಸ್ತೆ, ಪಿ.ಜೆ. ಬಡಾವಣೆಯ ಅನೇಕ ರಸ್ತೆಯಲ್ಲಿ ಜನ ಸಂದಣಿ ಇರಲಿಲ್ಲ. 

ಆಸ್ಪತ್ರೆ ಆವರಣದಲ್ಲಿರುವ ಔಷಧ ಅಂಗಡಿಗಳಿಗೆ ಬಂದ್‌ ನಿಂದ ವಿನಾಯತಿ ನೀಡಿದ್ದರಿಂದ ಅಲ್ಲಿ ಹೆಚ್ಚಿನ ಜನರು ಕಂಡು ಬಂದರು. ತಮಗೆ ಬೇಕಾದ ಔಷಧ ತೆಗೆದುಕೊಂಡು ಹೋಗುವುದಕ್ಕೆ ಕಾದರು. ಆಸ್ಪತ್ರೆ ಆವರಣದಲ್ಲಿನ ಅಂಗಡಿಗಳಿಗೆ ವಿನಾಯತಿ ನೀಡಿದ್ದು ಜನರ ತೊಂದರೆ ತಪ್ಪಿಸಲು ನೆರವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next