ಮಂಡ್ಯ: ಇಬ್ಬರು ಮಕ್ಕಳನ್ನು ನೇಣಿಗೆ ಹಾಕಿ ಬಳಿಕ ತಾಯಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಂಡವಪುರ ತಾಲೂಕಿನ ಮೇಲುಕೋಟೆ ಬಳಿಯ ಕುಪ್ಪಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷ್ಣೇಗೌಡ ಪತ್ನಿ ನಿವೇದಿತಾ(26), ಮಕ್ಕಳಾದ ಗಾನವಿ(6) ಹಾಗೂ ಉಲ್ಲಾಸ್ (4) ಮೃತಪಟ್ಟವರು.
ನಿವೇದಿತಾ ಕುಪ್ಪಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಧ್ಯಕ್ಷೆಯಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮೊದಲು ತನ್ನ ಇಬ್ಬರು ಮಕ್ಕಳನ್ನು ಮನೆಯ ಮರದ ರೆಂಬೆಗೆ ನೇಣು ಹಾಕಿ ನಂತರ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ನಲ್ಲಹಳ್ಳಿಯ ನಿವೇದಿತಾರನ್ನು ಕಳೆದ 7 ವರ್ಷಗಳ ಹಿಂದೆ ಕುಪ್ಪಳ್ಳಿ ಗ್ರಾಮದ ಕೃಷ್ಣೇಗೌಡ ಎಂಬುವವರ ಜೊತೆ ಮದುವೆ ಮಾಡಲಾಗಿತ್ತು. ಗಂಡ ಹೆಂಡತಿ ಇಬ್ಬರ ಮಧ್ಯೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೂ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ.
Related Articles
ಇದನ್ನೂ ಓದಿ: ವಿಜಯಪುರ ಟೆಕ್ಕಿಗಳಿಂದ HIV ಸೋಂಕಿತರಿಗೆ ಆ್ಯಪ್ ಶೋಧ: ರಾಜ್ಯದ 4.75ಲಕ್ಷ ಸೋಂಕಿತರಿಗೆ ಅನುಕೂಲ
ನಿವೇದಿತಾ ಕುಟುಂಬಸ್ಥರು ಯಾವುದೇ ದೂರು ದಾಖಲಿಸಿಲ್ಲ. ಸ್ಥಳಕ್ಕೆ ಎಸ್ಪಿ ಕೆ.ಪರಶುರಾಮ, ಡಿವೈಎಸ್ಪಿ ಅರುಣ್ ನಾಗೇಗೌಡ, ಮೇಲುಕೋಟೆ ಠಾಣೆ ಇನ್ಸ್ ಪೆಕ್ಟರ್ ಗಣೇಶ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರೇ ಆತ್ಮಹತ್ಯೆ ಮಾಡಿಕೊಂಡ ನಿವೇದಿತಾ ವಿರುದ್ಧ ಮಕ್ಕಳನ್ನು ಕೊಂದ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು, ಆತ್ಮಹತ್ಯೆಗೆ ಕಾರಣ ಏನು ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ನಿವಾರ್ ಬೆನ್ನಲ್ಲೇ ‘ಬುರೆವಿ’ ಚಂಡಮಾರುತ ಭೀತಿ: ಕೇರಳದ 4ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ