ತುಮಕೂರು: ಐದು ವರ್ಷದ ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ಸಿದ್ಧಾರ್ಥ ಅಡ್ವಾನ್ಸ್ ಹಾರ್ಟ್ ಸೆಂಟರ್ ಮತ್ತೂಂದು ಮಹತ್ವದ ಮೈಲಿಗಲ್ಲನ್ನು ಮುಟ್ಟಿದೆ.
ಕಳೆದ ತಿಂಗಳು ಓಪನ್ ಹಾರ್ಟ್ ಸರ್ಜರಿ ಮಾಡಿ ಸಫಲವಾಗಿದ್ದ ವೈದ್ಯರ ತಂಡ, ಈಗ ಮಕ್ಕಳ ಹೃದಯ ರೋಗ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮೂಲಕ ಸೂಕ್ಷ್ಮ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗ ಬಹುದೆಂಬುದನ್ನು ಸಾಭೀತುಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಚಿಲ್ಲೂರ್ ಗ್ರಾಮದ ಕೃಷಿಕ ಹಾಗೂ ನಾಲ್ಕು ವರ್ಷ ಎಂಟು ತಿಂಗಳ ಮಗುವಿಗೆ ನಡೆಸಲಾದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಸಿದ್ಧಾರ್ಥ ಅಡ್ವಾನ್ಸ್ ಹಾರ್ಟ್ ಸೆಂಟರ್‌ನ ಮೇಲ್ವಿಚಾರಕ ಡಾ.ತಮೀಮ್ ಅಹಮದ್, ಡಾ.ನವೀನ್, ಡಾ.ಸುರೇಶ್, ಡಾ.ನಾಗಾರ್ಜುನ, ವಿವೇಕ್, ಜಾನ್, ಡಾ.ನಿಖೀತ ನೇತೃತ್ವದ ತಂಡ ಮಗುವಿಗೆ ಶಸ್ತ್ರಚಿಕಿತ್ಸೆಯನ್ನು ಮಾಡುವಲ್ಲಿ ಸಫಲವಾಗಿದೆ ಎಂದು ವಿಭಾಗದ ಸಿಇಒ ಡಾ.ಪ್ರಭಾಕರ್ ತಿಳಿಸಿದ್ದಾರೆ.
ಸೊಲ್ಲಾಪುರ ಮತ್ತು ಬೆಂಗಳೂರಿನಲ್ಲಿ ತಪಾಸಣೆಗೊಳ ಗಾಗಿದ್ದ ಮಗುವಿಗೆ ಓಪನ್ ಹಾರ್ಟ್ ಸರ್ಜರಿ ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದರು. ಆರ್ಥಿಕ ಮುಗ್ಗಟ್ಟು ಮತ್ತು ಕೊರೊನಾ ಹಿನ್ನೆಲೆ ಪೋಷಕರು ಚಿಂತಕ್ರಾಂತರಾಗಿದ್ದರು. ಆಗ ಮಾಧ್ಯಮದಿಂದ ಸಿಕ್ಕ ಮಾಹಿತಿ ಆಧರಿಸಿ ವಾರದ ಹಿಂದೆ ಸಿದ್ಧಾರ್ಥ ಹಾರ್ಟ್ ಸೆಂಟರ್‌ಗೆ ತಪಾಸಣೆಗೆ ಬಂದಿದ್ದರು. ರಾಜ್ಯದ ಬೇರೆ ಕಡೆಗಳಲ್ಲಿ ನೀಡಲಾಗಿದ್ದ ತಪಾಸಣೆ ವಿವರ ಪಡೆದ ವೈದ್ಯರ ತಂಡ, ಓಪನ್ ಹಾರ್ಟ್ ಸರ್ಜರಿ ಬದಲಾಗಿ ಪಿಡಿಎ ಡಿವೈಸ್ ಕ್ಲೋಸರ್ ಚಿಕಿತ್ಸೆ (ಕಾಂಜೆನೈಟಲ್) ಮೂಲಕ ಗುಣಪಡಿಸಲಾಗಿದೆ. ಇದರಿಂದ ಮಗುವಿನ ಬೆಳವಣಿಗೆ ಉತ್ತಮವಾಗಲಿದೆ.
ಮಗು ಹುಟ್ಟುವ ಸಂದರ್ಭದಲ್ಲಿ ಹೃದಯಕ್ಕೆ ಹೊಂದಿಗೊಂಡಿರುವ ನರವೊಂದು ಮುಚ್ಚಿಕೊಳ್ಳ ಬೇಕು. ಅದು ಮುಚ್ಚಿಕೊಳ್ಳದಿದರೆ ರಕ್ತದ ಹರಿವಿಕೆ ಯಲ್ಲಿ ಒತ್ತಡ ಉಂಟಾಗಿ ಶ್ವಾಸಕೋಸಕ್ಕೆತೊಂದರೆ ಯಾಗುತ್ತಿತ್ತು. ಓಪನ್ ಹಾರ್ಟ್ ಸರ್ಜರಿಗೆಬದ ಲಾಗಿ ಆಧುನಿಕ ಉಪಕರಣದ ಮೂಲಕ ಓಪನ್ ಆಗಿದ್ದ ನರವನ್ನು ಶಸ್ತ್ರಚಿಕಿತ್ಸೆ ಮೂಲಕ ಮುಚ್ಚಿ ರೋಗ ಗುಣಪಡಿಸಲಾಗಿದೆ ಎಂದು ಡಾ.ತಮೀಮ್ ಅಹಮದ್ ಹೇಳಿದ್ದಾರೆ.