ಕಾಪು: ಭಾರತ್ ಬ್ಯಾಂಕ್ ವಿಲೇಪಾರ್ಲೆ ಪೂರ್ವ ಶಾಖೆಯ ಉಪಪ್ರಬಂಧಕ, ಮುಂಬಯಿ ಬಿಲ್ಲವರ ಅಸೋಸಿಯೇಶನ್ ಸದಸ್ಯ ಸುಧಾಕರ್ ಟಿ. ಅಂಚನ್ (52) ಸಂಬಂಧಿಕರ ಮದುವೆಗೆ ಆಗಮಿಸಿ, ಮುಂಬಯಿಗೆ ತೆರಳುತ್ತಿದ್ದ ವೇಳೆ ರೈಲ್ವೇ ನಿಲ್ದಾಣದಲ್ಲಿ ಹೃದಯಾಘಾತಕ್ಕೊಳಗಾಗಿ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಮೃತರು ತಾಯಿ, ಪತ್ನಿ, ಮತ್ತು ಪುತ್ರನನ್ನು ಅಗಲಿದ್ದಾರೆ.
ಮದುವೆಗೆ ಊರಿಗೆ ಬಂದಿದ್ದು, ಮದುವೆ ಮುಗಿಸಿ ಮುಂಬಯಿಗೆ ಹಿಂದಿರುಗುತ್ತಿದ್ದ ವೇಳೆ ಥಾಣೆಯಲ್ಲಿ ರೈಲಿನಿಂದ ಇಳಿಯುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಮೂಲತಃ ಕಟಪಾಡಿಯವರಾಗಿರುವ ಅವರು ಮುಂಬಯಿಯಲ್ಲಿ ನೆಲೆಸಿದ್ದು ಭಾರತ್ ಬ್ಯಾಂಕ್ ಉದ್ಯೋಗಿಯಾಗಿ, ಬಿಲ್ಲವ ಸಮಾಜದ ಸಂಘಟನೆಯ ಪ್ರಮುಖರಾಗಿ ಗುರುತಿಸಲ್ಪಟ್ಟಿದ್ದರು. ನಿಧನಕ್ಕೆ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಸಹಿತ ಹಲವು ಮಂದಿ ಗಣ್ಯರು ಸಂತಾಪ ಸೂಚಿಸಿದ್ದಾರೆ.