Advertisement
ಜನರು ಕುರುಡರ ಬಗ್ಗೆ ಕನಿಕರ, ಸಹಾನುಭೂತಿಯನ್ನು ತೋರುತ್ತಾರೆ, ಆದರೆ ಕಿವುಡರ ಬಗ್ಗೆ ಅವರ ನಡವಳಿಕೆ ತದ್ವಿರುದ್ಧವಾಗಿರುತ್ತದೆ. ಕಿವುಡರು ನಿಂದೆ, ಹೀಯಾಳಿಕೆಗಳಿಗೆ ಒಳಗಾಗುವುದೇ ಹೆಚ್ಚು. ಕಿವುಡ ವ್ಯಕ್ತಿಯು ಕುಟುಂಬ ಮತ್ತು ಗೆಳೆಯ/ಗೆಳತಿಯರಿಂದ ದೂರವಾಗಿ ಏಕಾಂಗಿಯಾಗುತ್ತಾನೆ ಹಾಗೂ ಅವರ ಸಹಾನುಭೂತಿ ರಹಿತ ನಡವಳಿಕೆಯಿಂದಾಗಿ ಆತ ಅಥವಾ ಆಕೆ ಖನ್ನತೆಗೊಳಗಾಗುತ್ತಾರೆ. ಇದರಿಂದಾಗಿ ಆಕೆ/ ಆತನಿಗೆ ಮಾನಸಿಕ ಆಪ್ತಸಮಾಲೋಚನೆ ಅಗತ್ಯವಾಗುತ್ತದೆ.
Related Articles
Advertisement
ಭಾರತವು ಇತ್ತೀಚೆಗೆ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಹಕ್ಕುಗಳ ಕುರಿತಾದ ಒಪ್ಪಂದವೊಂದಕ್ಕೆ ವಿಶ್ವಸಂಸ್ಥೆಯ ಜತೆಗೆ ಸಹಿ ಮಾಡಿದೆ ಮತ್ತು ಅದನ್ನು ಅನುಮೋದಿಸಿದೆ. ಆದರೆ ಕಿವುಡವನ್ನು ತಡೆಯುವ ಉತ್ತಮ ಉದ್ದೇಶ ಮತ್ತು ಗುರಿಯ ಹೊರತಾಗಿಯೂ ಭಾರತದಲ್ಲಿ ಈ ಸಮಸ್ಯೆಯುಳ್ಳವರಿಗೆ ಸೇವೆಗಳು ಮತ್ತು ಸೌಕರ್ಯಗಳ ಕೊರತೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಭಾರತವು ಕಿವುಡು ತಡೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (ಎನ್‌ಪಿಪಿಸಿಡಿ)ಯನ್ನು ಆರಂಭಿಸಿದೆ.
ಈ ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಸೇವಾ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಇದು ಭಾರತದಲ್ಲಿ ಕಿವುಡುತನ ಮತ್ತು ಶ್ರವಣ ಶಕ್ತಿ ವೈಕಲ್ಯದ ಹೊರೆಯನ್ನು ಬೇರು ಮಟ್ಟದಿಂದಲೇ ಕಡಿಮೆಗೊಳಿಸುವ ಗುರಿಯನ್ನು ಹೊಂದಿದೆ.
ಕಿವುಡು: ಪ್ರಮುಖ ಕಾರಣಗಳುಭಾರತದಲ್ಲಿ ಕಿವುಡತನ, ಶ್ರವಣ ಶಕ್ತಿ ನಷ್ಟ ಮತ್ತು ಕಿವಿಯ ಕಾಯಿಲೆಗಳಿಗೆ ಪ್ರಧಾನ ಕಾರಣಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಮೂಲಕ ಪಟ್ಟಿ ಮಾಡಲಾಗಿದೆ. ಶ್ರವಣ ಶಕ್ತಿ ವೈಕಲ್ಯಕ್ಕೆ ಕಾರಣಗಳನ್ನು ಸ್ಥೂಲವಾಗಿ ಎರಡು ವಿಭಾಗಳಾಗಿ ವರ್ಗೀಕರಿಸಬಹುದಾಗಿದೆ. ಒಂದನೆಯದು ಶಬ್ದ ವಾಹಕತ್ವಕ್ಕೆ ಸಂಬಂಧಿಸಿದ್ದು (ಕಂಡಕ್ಟಿವ್- ಕಿವಿಯ ಹೊರಭಾಗ ಅಥವಾ ಮಧ್ಯಕಿವಿಯಲ್ಲಿ ಉಂಟಾಗಿ ಶಬ್ದದ ಸಂವಹನಕ್ಕೆ ಅಡೆತಡೆ ಒಡ್ಡುವ ಸಮಸ್ಯೆಗಳು). ಎರಡನೆಯದು ಸೆನ್ಸೊನ್ಯೂರಲ್ (ಒಳಗಿವಿಯ ಸಮಸ್ಯೆಗಳು ಅಥವಾ ನರಹಾನಿ ಉಂಟಾಗಿ ಶಬ್ದವು ಮಿದುಳಿಗೆ ರವಾನೆಯಾಗುವುದಕ್ಕೆ ಅಡೆತಡೆ ಉಂಟಾಗುವುದು). ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ ಕಿವಿ ಗುಗ್ಗೆ (ಇಯರ್ ವ್ಯಾಕ್ಸ್)ಯು ಗುಣಪಡಿಸಬಹುದಾದ ಶ್ರವಣ ಶಕ್ತಿ ನಷ್ಟಕ್ಕೆ ಬಹು ಸಾಮಾನ್ಯ (ಶೇ.15.9)ವಾದ ಕಾರಣವಾಗಿದೆ. ವಯಸ್ಸಾಗುವುದು ಮತ್ತು ಪ್ರಿಸಿºಕ್ಯುಸಿಸ್ ಅನಂತರದ ಸ್ಥಾನ (ಶೇ.10.3) ಸ್ಥಾನದಲ್ಲಿದೆ. ದೀರ್ಘಕಾಲಿಕ ಸಪ್ಯುರೇಟಿವ್ ಒಟಿಟಿಸ್ ಮೀಡಿಯ (ಶೇ.5.2) ಮತ್ತು ಗಂಭೀರ ಒಟಿಟಿಸ್ ಮೀಡಿಯ (ಶೇ.3) ಶ್ರವಣ ಶಕ್ತಿ ನಷ್ಟವುಂಟಾಗಲು ಇನ್ನಿತರ ಕಾರಣಗಳಾಗಿವೆ. ಪ್ರತೀ ವರ್ಷ ಸೆಪ್ಟಂಬರ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಕಿವುಡರ ಸಪ್ತಾಹವನ್ನು ಆಚರಿಸಲಾಗುತ್ತದೆ. ಜತೆಗೆ, ಭಾರತದಲ್ಲಿ ಸೆಪ್ಟಂಬರ್ 26ನ್ನು “ಕಿವುಡರ ದಿನ’ವನ್ನಾಗಿ ಆಚರಿಸಲಾಗುತ್ತದೆ. ಡಾ| ಪಾಂಡುರಂಗ ಕಾಮತ್,
ಕನ್ಸಲ್ಟಂಟ್ ಇಎನ್‌ಟಿ,
ಕೆಎಂಸಿ ಆಸ್ಪತ್ರೆ, ಮಂಗಳೂರು