Advertisement

ಬಹುಕೋಟಿ ವಂಚನೆ ಕೇಸ್: ನಟಿ ಜಾಕ್ವೆಲಿನ್ ವಿಚಾರಣೆ ಒಂದು ವಾರಕ್ಕೆ ಮುಂದೂಡಿಕೆ

03:27 PM Dec 12, 2022 | Team Udayavani |

ನವದೆಹಲಿ : ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ‘ಕಾನ್ ಮ್ಯಾನ್’ ಸುಕೇಶ್ ಚಂದ್ರಶೇಖರ್ ವಿರುದ್ಧದ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಯನ್ನು ದೆಹಲಿ ನ್ಯಾಯಾಲಯವು ಸೋಮವಾರ ಒಂದು ವಾರಕ್ಕೆ ಮುಂದೂಡಿದೆ.

Advertisement

ಜಾಕ್ವೆಲಿನ್ ಪರ ವಾದ ಮಂಡಿಸಿದ ವಕೀಲರು, ಜಾರಿ ನಿರ್ದೇಶನಾಲಯದಿಂದ (ಇಡಿ) ಚಾರ್ಜ್ ಶೀಟ್ ಮತ್ತು ಇತರ ದಾಖಲೆಗಳ ಸಂಪೂರ್ಣ ನಕಲು ಪ್ರತಿಗಳು ಆಕೆಗೆ ಇನ್ನೂ ಬಂದಿಲ್ಲ ಎಂದು ಹೇಳಿದ ನಂತರ ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲಿಕ್ ಅವರು ಪ್ರಕರಣವನ್ನು ಡಿಸೆಂಬರ್ 20 ಕ್ಕೆ ಮುಂದೂಡಿದರು.

ಜಾಕ್ವೆಲಿನ್ ಅವರು ಸಂಕ್ಷಿಪ್ತ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ನವೆಂಬರ್ 15 ರಂದು ನ್ಯಾಯಾಲಯವು ನಟಿಗೆ ಸಾಮಾನ್ಯ ಜಾಮೀನು ನೀಡಿತ್ತು. ಪ್ರಕರಣದಲ್ಲಿ ಆಕೆಯನ್ನು ಬಂಧಿಸಿಲ್ಲ.

ಇದು ಆಗಸ್ಟ್ 31 ರಂದು ಜಾರಿ ನಿರ್ದೇಶನಾಲಯ ಸಲ್ಲಿಸಿದ ಪೂರಕ ಚಾರ್ಜ್ ಶೀಟ್ ಅನ್ನು ಗಮನದಲ್ಲಿಟ್ಟುಕೊಂಡು ಜಾಕ್ವೆಲಿನ್ ಅವರನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೇಳಿತ್ತು. ತನಿಖೆಗೆ ಸಂಬಂಧಿಸಿದಂತೆ ಇಡಿ ಹಲವು ಬಾರಿ ಸಮನ್ಸ್ ಪಡೆದಿದ್ದ ಜಾಕ್ವೆಲಿನ್ ಅವರನ್ನು ಪೂರಕ ಚಾರ್ಜ್ ಶೀಟ್‌ನಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next