ಬೆಂಗಳೂರು: ಯೋಗಾಭ್ಯಾಸದಿಂದ ಮನುಷ್ಯ ಸದಾ ಆರೋಗ್ಯಯುತ ಜೀವನ ನಡೆಸಬಹುದಾಗಿದೆ ಎಂದು ಪ್ರಶಾಂತಿ ಕುಟೀರಂನ ನಾಗೇಂದ್ರ ಗುರೂಜಿ ತಿಳಿಸಿದ್ದಾರೆ.
ಸ್ವಾಮಿ ವಿವೇಕಾನಂದ ಅನುಸಂಧಾನ ಸಂಸ್ಥಾನ (ಎಸ್. ವ್ಯಾಸ) ಸ್ವಾಯತ್ತ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗ ಮಾಡುವುದರಿಂದ ಆರೋಗ್ಯವಂತರಾಗುವ ಜತೆಗೆ ಸಂತೃಪ್ತಿಯ ಜೀವನ ನಡೆಸಬಹುದು ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಭೋಪಾಲ್‌ನಿಂದ ಆಗಮಿಸಿದ್ದ ಸಾಧ್ವಿ ಸನ್ಯಾಸಿನಿ ಮಾತನಾಡಿ, ಯೋಗಾಭ್ಯಾಸದಿಂದ ಪ್ರತಿಯೊಬ್ಬರೂ ಚಿರಯುವಕರಾಗುತ್ತಾರೆ. ಜತೆಗೆ ವಯಸ್ಸಿನ ಹಂಗಿಲ್ಲದೆ ಪ್ರತಿಯೊಬ್ಬರೂ ಉತ್ಸಾಹ ಹಾಗೂ ಆರೋಗ್ಯವಂತರಾಗಿರಬಹುದು ಎಂದರು.
ಕಾರ್ಯಕ್ರಮದಲ್ಲಿ ಪ್ರಶಾಂತಿ ಕುಟೀರಂನ ದೀದಿ ನಾಗರತ್ನ, ರಘರಾಮ್, ಲೇಖಕಿ ವೈ.ಕೆ.ಸಂಧ್ಯಾ ಶರ್ಮ, ನೃತ್ಯ ಕಲಾವಿದೆ ಸಿ.ಎಸ್.ವೀಣಾ ಹಾಗೂ ಚಿಕ್ಕ ಹೆಜ್ಜಾಜಿ ಮಹದೇವ್ ಸೇರಿ ಪ್ರಮುಖ ಭಾಗವಹಿಸಿದ್ದರು.
ಸಭಾ ಕಾರ್ಯಕ್ರಮದ ನಂತರ ಕರ್ಮಯೋಗ, ಭಕ್ತಿ ಯೋಗ ಮತ್ತು ಜ್ಞಾನಯೋಗಗಳ ನೆಲೆಯ ಮೂರು ಘಟ್ಟಗಳನ್ನು ಕಲಾವಿದೆ ವೀಣಾ ಶೇಷಾದ್ರಿ ಅವರು ಕೃಷ್ಣ ಕಥಾನಕದ ಮೂಲಕ ಭಕ್ತಿಪೂರಿತ ಭರತನಾಟ್ಯ ನೃತ್ಯಾರ್ಪಣೆ ಸಲ್ಲಿಸಿದರು. ನಾಗೇಂದ್ರ ಗೂರೂಜಿ ಯೋಗಾಭ್ಯಾಸ ಹೇಳಿಕೊಟ್ಟರು.