Advertisement

ನಮ್ಮ ದೇಶವೀಗ ಆರೋಗ್ಯಯುತ

10:38 PM Nov 25, 2021 | Team Udayavani |

1947 ಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲೀಗ ಆರೋಗ್ಯವಂತರು ಹೆಚ್ಚು, ಹಾಗೆಯೇ ಆರೋಗ್ಯಕ್ಕೆ ಸಂಬಂಧಿಸಿದ ಸೌಕರ್ಯಗಳೂ ಹೆಚ್ಚಾಗಿವೆ. ಆಗ‌ ಆರೋಗ್ಯ ವ್ಯವಸ್ಥೆಯೂ ಸರಿಯಾಗಿರಲಿಲ್ಲ. ಜತೆಗೆ ಕಡಿಮೆ ಆದಾಯ, ಹೆಚ್ಚಿನ ಜನಸಂಖ್ಯೆ ಮತ್ತು ಕಡಿಮೆ ಜೀವಿತಾವಧಿಯ ಸಮಸ್ಯೆಯೂ ಇತ್ತು.

Advertisement

ಶಿಶು ಮರಣ ದರ :

1950ರಲ್ಲಿ ಪ್ರತೀ ಸಾವಿರ ಜನನಗಳಾದರೆ ಅದರಲ್ಲಿ 181 ಕೂಸುಗಳು ಮರಣಹೊಂದುತ್ತಿದ್ದವು. ಈ ದರ ಈಗ 32ಕ್ಕೆ ಇಳಿದಿದೆ. ಅದೇ ಪಾಕಿಸ್ಥಾನದಲ್ಲಿ ಆಗ ಪ್ರತೀ ಸಾವಿರ ಜನನಕ್ಕೆ 250 ಶಿಶುಗಳು ಸಾವನ್ನಪ್ಪುತ್ತಿದ್ದರೆ, ಈಗ 61 ಶಿಶುಗಳು ಮರಣಹೊಂದುತ್ತಿವೆ. ಈ ವಿಚಾರದಲ್ಲೂ ಭಾರತ ಹೆಚ್ಚಿನ ಪ್ರಗತಿ ಕಂಡಿದೆ.

ಜನನ ಪ್ರಮಾಣ ಕಡಿಮೆ,ಜನಸಂಖ್ಯೆಯೂ ಇಳಿಕೆ :

1950ರಲ್ಲಿ ಭಾರತದ ಜನನ ಪ್ರಮಾಣ, ಪ್ರತೀ ಮಹಿಳೆಗೆ 5.9 ಇದ್ದರೆ, ಈಗ 2.2 ಇದೆ. ಆಗಲೇ ಇಂಗ್ಲೆಂಡ್‌ನಲ್ಲಿ 2.2 ಮತ್ತು ಅಮೆರಿಕದಲ್ಲಿ 3.3 ಇತ್ತು. ಸದ್ಯ ಭಾರತದ ಜನನ ಪ್ರಮಾಣ ಏಷ್ಯಾದ ದೇಶಗಳಲ್ಲೇ ಅತೀ ಕಡಿಮೆ ಇದೆ.

Advertisement

ಜೀವಿತಾವಧಿ ದುಪ್ಪಟ್ಟು : 

1950ಕ್ಕೆ ಹೋಲಿಕೆ ಮಾಡಿದರೆ ಭಾರತದ ಜೀವಿತಾವಧಿ ಪ್ರಮಾಣ ದುಪ್ಪಟ್ಟಾಗಿದೆ. ಅಂದರೆ ಆಗ ಭಾರತದ ಜೀವಿತಾವಧಿ 37 ವರ್ಷ ಮಾತ್ರ ಇತ್ತು. ಈಗ ಅದು 69ಕ್ಕೆ ಏರಿಕೆಯಾಗಿದೆ. ಚೀನದಲ್ಲಿ ಆಗ 44 ವರ್ಷಗಳಿದ್ದರೆ, ಈಗ 77ಕ್ಕೆ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next