Advertisement

ಶಿಕ್ಷಣ ಸಂಸ್ಥೆಗಳಲ್ಲಿ ಆರೋಗ್ಯಕರ ಸ್ಪರ್ಧೆ ಅಗತ್ಯ: ಡಾ|ಡಿ. ವೀರೇಂದ್ರ ಹೆಗ್ಗಡೆ

11:31 PM Jul 23, 2022 | Team Udayavani |

ಧಾರವಾಡ: ಉನ್ನತ ಶ್ರೇಣಿ ಮತ್ತು ರೇಟಿಂಗ್‌ಗಳಲ್ಲಿ ಸಂಸ್ಥೆಗಳು ಯಾವಾಗಲೂ ಅತ್ಯುತ್ತಮವಾಗಿರಲು ಸಾಧ್ಯವಿಲ್ಲ. ಹೀಗಾಗಿ ಶಿಕ್ಷಣ ಸಂಸ್ಥೆಯಲ್ಲಿ ಅಭಿವೃದ್ಧಿ ವಿಷಯದಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು ಎಂದು ಎಸ್‌ಡಿಎಂ ವಿಶ್ವವಿದ್ಯಾನಿಲಯದ ಕುಲಪತಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಇಲ್ಲಿನ ಸತ್ತೂರಿನ ಎಸ್‌ಡಿಎಂ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಎಸ್‌ಡಿಎಂ ವಿದ್ಯಾಸಂಸ್ಯೆಯ ಮುಖ್ಯಸ್ಥರ ಎರಡು ದಿನಗಳ ವಾರ್ಷಿಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಸ್ಪಾರ್ಟಾ ಗ್ರೂಪ್‌ ಅಧ್ಯಕ್ಷ ಗುರುರಾಜ ದೇಶಪಾಂಡೆ, ಐಐಟಿ ಧಾರವಾಡದ ನಿರ್ದೇಶಕ ಪ್ರೊ| ಪಿ. ಶೇಷು ಮತ್ತು ಎಸ್‌ಡಿಎಂ ವಿವಿ ಉಪಕುಲಪತಿ ಡಾ| ನಿರಂಜನ ಕುಮಾರ್‌ ಮಾತನಾಡಿದರು. ಬೆಂಗಳೂರಿನ ಎಸ್‌ಡಿಎಂ ಎಜುಕೇಶನಲ್‌ ಸೊಸೈಟಿ ಉಪಾಧ್ಯಕ್ಷ ಡಿ. ಸುರೇಂದ್ರಕುಮಾರ್‌, ಎಸ್‌ಡಿಎಂ ಎಜುಕೇಶನಲ್‌ ಸೊಸೈಟಿ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್‌, ಡಾ| ಸತೀಶಚಂದ್ರ ಎಸ್‌. ಮೊದಲಾದವರು ಉಪಸ್ಥಿತರಿದ್ದರು.

ಸಹ ಉಪಕುಲಪತಿ ವಿ. ಜೀವಂಧರ್‌ ಕುಮಾರ್‌ ಸ್ವಾಗತಿಸಿದರು. ಉಪ ಕುಲಸಚಿವ ಪ್ರೊ| ಕ್ಲೆಮೆಂಟ್‌ ಚೆಲ್ಲಿ ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next