Advertisement

ಆರೋಗ್ಯದ ಗುಟ್ಟು- ಸಂತೋಷವಾಗಿ ಇದ್ದುಬಿಡಿ

10:06 PM Aug 13, 2019 | mahesh |

ಸಂತೋಷವಾಗಿರುವುದಕ್ಕೆ ನಾವು ಹುಟ್ಟಿದವರು ಮತ್ತು ಅದು ಪ್ರತಿಯೊಬ್ಬರ ಹಕ್ಕು ಎನ್ನುವ “ಸಂತೋಷವಾಗಿ ಇದ್ದುಬಿಡಿ’ ಸಂತೋಷವಾಗಿ ಯಾಕಿರಬೇಕು ಮತ್ತು ಸಂತೊಷವಾಗಿರಲು ಏನು ಮಾಡಬೇಕು ಎನ್ನುವುದನ್ನು ತಿಳಿಸುತ್ತದೆ. ಈ ಪುಸ್ತಕವನ್ನು ಬರೆದವರು ಡಾ| ರಂಗನಾಥ.ಎಂ. ಇವರು ವೃತ್ತಿಯಲ್ಲಿ ವೈದ್ಯರು. ಇವರು ಮೂರು ಪುಸ್ತಕಗಳನ್ನು ಬರೆದಿದ್ದಾರೆ. “ಡಾಕ್ಟರಿಂದ ದೂರ ಇರಿ, ಬಿಂದಾಸ್‌ ಸಂತೋಷ ಮತ್ತು ಸಂತೋಷವಾಗಿ ಇದ್ದು ಬಿಡಿ’ ಈ ಮೂರು ಪುಸ್ತಕಗಳು ಸಂತೋಷ ಮತ್ತು ಆರೊಗ್ಯಗಳ ಕುರಿತು ತಿಳಿಸುತ್ತದೆ.

Advertisement

ಘಟನೆ: 1
ಇವರು ಸಂತೋಷ ಎನ್ನುವುದಕ್ಕೆ ವ್ಯಾಖ್ಯಾನ ನೀಡುತ್ತಾರೆ. ತಮ್ಮ ಜತೆಯಲ್ಲಿರುವ ನಾಲ್ಕು ಜನರ ಮನಸ್ಸನ್ನು ಮುಟ್ಟಿ ಅವರ ಸಂತೋಷ, ದುಃಖಗಳನ್ನು ತಾನು ಅನುಭವಿಸುವ ಸಾನುರಾಗದ (ಎಂಪತಿ) ಸಾಮರ್ಥ್ಯ ಕೆಲವರಿಗೆ ಇರುತ್ತದೆ. ಆ ಎಮೋಷನಲ್‌, ಸೋಶಿಯಲ್‌ ಸಂಬಂಧವೇ ಸಂತೋಷ ಎನ್ನುತ್ತಾರೆ.

ಘಟನೆ: 2
ಸಂತೋಷದ ಕೃಷಿ ಹೇಗೆ ಮಾಡುವುದು ? ಎನ್ನುವ ಅಧ್ಯಾಯದಲ್ಲಿ ಲೇಖಕರು ನಮ್ಮ ಭಾವನೆಗಳನ್ನು ಸರಿಯಾದ ಕ್ರಮದಲ್ಲಿ ನಿಭಾಯಿಸಿಕೊಂಡು ಹೋಗಬೇಕು ಎನ್ನುತ್ತಾರೆ. ಜತೆಗೆ ಬರೀ ನಗುವನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಆಳವಿರುವುದಿಲ್ಲ. ಮನಸ್ಸನ್ನು ಹಂಚಿಕೊಳ್ಳಬೇಕು ಎನ್ನುತ್ತಾರೆ.

ಘಟನೆ: 3
ಮೆದುಳಿನಲ್ಲಿ ಹೊಸ ನರಕೋಶಗಳು ಬೆಳೆಯುತ್ತಾ ಇರುವಷ್ಟು ದಿನ ನಾವು ತರುಣರಾಗಿರುತ್ತೇವೆ. ಆಗ ಸಂತೋಷವಾಗಿಯೂ ಇರುತ್ತೇವೆ. ಆದರೆ ಜೀವಪೋಷಣೆಗೆ ವ್ಯತಿರಿಕ್ತವಾದ ಏಕತಾನತೆಯಿಂದ ಜಡ್ಡುಗಟ್ಟಿ ಹೋದರೆ ಬೆಳವಣಿಗೆ ನಿಂತು ಮುಪ್ಪು ಬರುತ್ತದೆ ಎನ್ನುತ್ತಾರೆ.

ನಾಲ್ಕು ವಯೋಲಿನ್‌ಗಳು ಬೇರೆ ಬೇರೆ ಶೃತಿಯಲ್ಲಿ ಹಾಡುಗಳನ್ನು ನುಡಿಸಿದರೆ ಅವು ಎಷ್ಟೇ ಶುದ್ಧ ಸಂಗೀತವಾದರೂ ನಾಲ್ಕೂ ಒಟ್ಟಿಗೆ ಮಿಕ್ಸ್‌ ಆದಾಗ ಕರ್ಕಶ ಶಬ್ದಗಳಾಗುತ್ತವೆ. ಆದರೆ ನೂರು ವಯೋಲಿನ್‌ಗಳು ಒಂದೇ ಶ್ರುತಿಯಲ್ಲಿ ಒಂದೇ ಹಾಡು ನುಡಿಸಿದರೆ ರೋಮಾಂಚನದ ಅನುಭವವಾಗುತ್ತದೆ. ಆಗ ಗಲಾಟೆ ಅನಿಸುವುದಿಲ್ಲ. ಅದು ನಮ್ಮ ಮೆದುಳಿಗೂ ಅನ್ವಯವಾಗುತ್ತದೆ ಎನ್ನುವುದನ್ನು ಪುಸ್ತಕದುದ್ದಕ್ಕೂ ಹೇಳುತ್ತಾ ಹೋಗುತ್ತಾರೆ.

Advertisement

ಸಂತೋಷ ಎಂದರೆ ಏನು?
ಸಂತೋಷದಿಂದ ಹೇಗೆ ಆರೋಗ್ಯವನ್ನು ಪಡೆಯಬಹುದು ಎನ್ನುವುದನ್ನು ತಿಳಿಸುವ ಸಂತೋಷವಾಗಿ ಇದ್ದುಬಿಡಿ ಪುಸ್ತಕವನ್ನು ಸ್ವಲ್ಪ ಹಾಸ್ಯ ಸೇರಿಸಿ ಬರೆದಿದ್ದಾರೆ. ಇದರಿಂದ ಪುಸ್ತಕವು ಓದುಗರನ್ನು ಓದಿಸುತ್ತಾ ಹೋಗುತ್ತದೆ.

- ರಂಜಿನಿ ಮಿತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next