Advertisement

ಯೋಗದಿಂದ ಆರೋಗ್ಯ ವೃದ್ಧಿ: ರಮೇಶ್‌

09:47 AM Jan 21, 2019 | Team Udayavani |

ಬಳ್ಳಾರಿ: ಭಾರತದಲ್ಲಿ ಹುಟ್ಟಿದ ಯೋಗ, ಇಂದು ಇಡೀ ವಿಶ್ವ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಕೆಲವೇ ವರ್ಷಗಳಲ್ಲಿ ಯೋಗದಿಂದ ವಿಶ್ವಶಾಂತಿ ಸ್ಥಾಪಿಸಬಲ್ಲದು. ಯೋಗದಿಂದ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಬಲಿಜ ಸಂಘದ ಕಾರ್ಯದರ್ಶಿ ಕೆ.ರಮೇಶ್‌ ಬುಜ್ಜಿ ಹೇಳಿದರು.

Advertisement

ನಗರದ ಬಲಿಜ ಸಮಾಜದ ಕಲ್ಯಾಣ ಮಂಟಪದಲ್ಲಿ ಬಲಿಜ ಸಂಘ, ಪತಂಜಲಿ ಯೋಗ ಸಮಿತಿ ಜಿಲ್ಲಾ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಒಂದು ವಾರದ ಉಚಿತ ಯೋಗ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಸನಗಳು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ಸಹಕಾರಿಯಾಗುತ್ತದೆ ಎಂದರು.

ಪತಂಜಲಿ ಯೋಗ ಸಂಯೋಜಕ ಇಸ್ವಿ ಪಂಪಾಪತಿ ಮಾತನಾಡಿ, ಇಂದಿನ ಜಿವನ ಶೈಲಿಯಲ್ಲಿ ಆಹಾರ ಪದ್ಧತಿಯಲ್ಲಿ ಅಧಿಕ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳು ಸಿಂಪಡಿಸಿದ ಆಹಾರವನ್ನು ಸೇವಿಸುವ ಮೂಲಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ನಿತ್ಯ ಯೋಗಾಭ್ಯಾಸ, ಸಿರಿಧಾನ್ಯಗಳನ್ನು ಸೇವಿಸುವುದರಿಂದ ರೋಗಮುಕ್ತ ಸಮಾಜವನ್ನು ನಿರ್ಮಿಸಬಹುದಾಗಿದೆ ಎಂದು ತಿಳಿಸಿದರು.

ಬಳಿಕ ನಡೆದ ಯೋಗ ಶಿಬಿರವನ್ನು ಯೋಗ ಶಿಕ್ಷಕ ವೀರೇಶ ನಡೆಸಿಕೊಟ್ಟರು. ಸಂಘದ ದಿವಾಕರ, ಶಂಕರ, ವೆಂಕಟೇಶ, ರಾಮಾಂಜನೇಯಲು, ರಘುಬಾಬು, ಜಿಲ್ಲಾ ಪತಂಜಲಿ ಯೋಗ ಸಮಿತಿ ಪದಾಧಿಕಾರಿಗಳಾದ ಅಶೋಕ ದಿನ್ನಿ, ಚಂದ್ರೆಗೌಡ, ಗೋವಿಂದ, ಪ್ರಕಾಶ್‌, ಹೇಮಂತ್‌, ಹನುಮಂತಪ್ಪ ಸೇರಿದಂತೆ ನೂರಾರು ಶಿಬಿರಾರ್ಥಿಗಳು ಇದ್ದರು. ಉಪನ್ಯಾಸಕ ಚಿದಾನಂದ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next