Advertisement

Health – Dance: ನೃತ್ಯದಿಂದ ಆರೋಗ್ಯ

05:47 PM Sep 10, 2024 | Team Udayavani |

ಸಂಗೀತ, ನೃತ್ಯ, ಶಿಲ್ಪಕಲೆ, ಚಿತ್ರಕಲೆಗಳನ್ನು ನಮ್ಮ ಹಿರಿಯರು ಗಂಧರ್ವ ವಿದ್ಯೆಗಳೆಂದು ಭಾವಿಸಿದ್ದರು. ಇಂದ್ರನ ಆಸ್ಥಾನದಲ್ಲಿದ್ದ ಪ್ರಸಿದ್ಧ ನರ್ತಕಿಯರಾದ ಊರ್ವಶ್ರೀ, ರಂಬೆ, ಮೇನಕೆ, ತಿಲೋತ್ತಮ ನಾಟ್ಯ ಪ್ರವೀಣೆಯರಾಗಿದ್ದರು. ಜತೆಗೆ ಇವರು ಅಪ್ಸರೆಯರು ಕೂಡ.

Advertisement

ಭರತನಾಟ್ಯ ಪ್ರೌಢಿಮೆಯನ್ನು ಕುರಿತು ಜಕ್ಕನ ಕವಿ ಅದ್ಭುತವಾಗಿ ವರ್ಣಿಸುತ್ತಲೇ, ನಾಟ್ಯಶಾಸ್ತ್ರದ ಎಷ್ಟೋ ರಹಸ್ಯಗಳನ್ನು ಕೂಡ ತನ್ನ ಗ್ರಂಥದಲ್ಲಿ ಬರೆದಿದ್ದಾನೆ. ಸಾಹಿತ್ಯದ ಭಾವಕ್ಕೆ ಸರಿ ತೂಗುವಂತಹ ಹಸ್ತಮುದ್ರಿಕೆಗಳನ್ನು ಊರ್ವಶಿ ನಯನಾನಂದಕರವಾಗಿ ಅಂದು ಪ್ರದರ್ಶಿಸಿದಳೆಂದು, ನಾಟ್ಯದ ಸೂಕ್ತ ಭಾವ ಭಂಗಿಗಳು, ತಾಳ ವೈವಿಧ್ಯವನ್ನು ತನ್ನ ಕಾಲಿನ ಅಂದುಗೆಗಳ ಧ್ವನಿಗೆ ಸಮನ್ವಯಿಸುತ್ತಾ ತನ್ನ ನಾಟ್ಯವನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದಳಂತೆ, ತಾಳ, ನೃತ್ಯ, ಭಂಗಿಗಳಿಗೆ ಪ್ರಾಣಾಧಾರವಾದ ಆಂಗಿಕ ಅಭಿನಯ, ನೇತ್ರವಿಲಾಸ, ಪಾದ ವಿನ್ಯಾಸಗಳಿಗಿರುವ ಪ್ರಾಧಾನ್ಯತೆಯನ್ನು ತನ್ನ ಗ್ರಂಥದಲ್ಲಿ ಅರ್ವಶಿಯ ನಾಟ್ಯದ ಮೂಲಕ ಜಕ್ಕನ ಕವಿ ತಿಳಿಸಿದ್ದಾನೆ.

ನಮ್ಮ ದೇವಾಲಯಗಳಲ್ಲಿ ನಾಟ್ಯವನ್ನು ಬಿಂಬಿಸುವ ಅನೇಕ ಕಲಾಕೃತಿಗಳನ್ನು ಶಿಲ್ಪಿಗಳು ಕೆತ್ತಿದಿಟ್ಟಿದ್ದಾರೆ. ನಮ್ಮ ಬೇಲೂರು- ಹಳೆಬೀಡು ದೇವಸ್ಥಾನಗಳಲ್ಲಿಯಂತೂ ನಾಟ್ಯರಾಣಿ ಶಾಂತಲಾದೇವಿಯ ನೃತ್ಯದ ಅನೇಕ ಭಾವಭಂಗಿಗಳನ್ನೇ ಶಿಲ್ಪಿಗಳು ಕೆತ್ತಿದಿಟ್ಟಿದ್ದಾರೆ.

content-img

ಭರತಮುನಿಯೇ ಭರತ ನಾಟ್ಯವನ್ನು ಪ್ರಚುರಪಡಿಸಿದ ಗುರು. ನಾಟ್ಯವು ಮನುಷ್ಯನ ಮನಸ್ಸನ್ನು ಎಷ್ಟೋ ಸಂತೋಷಗೊಳಿಸುತ್ತದೆ. ಅವನಿಗಿರುವ ತಾತ್ಕಾಲಿಕ ದುಃಖಗಳನ್ನೂ ಮರೆಸುತ್ತದೆ. ಇನ್ನು ಸಂಗೀತವನ್ನಂತೂ “ಶಿಶುìಪೇತ್ರಿ, ಪಶುìವೇತ್ರಿ, ವೇತ್ತಿ¤ಗಾನರ ಸಂಘಣೆ’ ಎಂದಿದ್ದಾರೆ ಎಂದರೆ ಸಂಗೀತದಲ್ಲಿನ ಮಾಧುರ್ಯವನ್ನು ಶಿಶುಗಳು, ಪಶುಗಳೂ ಅಲ್ಲದೆ ಸರ್ವಗಳೂ ಸಂಗೀತಕ್ಕೆ ತಲೆದೂಗುತ್ತವೆ ಎಂದು ಇದರ ಅರ್ಥ.

Advertisement

ನಮ್ಮ ದೇಶದಲ್ಲಿ ಶಾಸ್ತ್ರೀಯ ನೃತ್ಯಗಳ ಜತೆಗೆ ಜಾನಪದ ನಾಟ್ಯರೂಪಗಳೂ ಪ್ರಚುರ ಪಡೆದಿವೆ. ಸಾಧಾರಣ ವ್ಯಾಯಾಮಗಳಿಗೆ ಹೋಲಿಸಿದರೆ ನೃತ್ಯದ ಅಭ್ಯಾಸದಿಂದ ಮೆದುಳಿನಲ್ಲಿಯ ‘ಹಿಪ್ಪೋಕ್ಷಾಂಪಸ್‌’ ಭಾಗವು ಚೆನ್ನಾಗಿ ಅಭಿವೃದ್ಧಿಯಾಗಿ ಮುಪ್ಪನ್ನು ಮುಂದೂಡುತ್ತದೆಯಂತೆ. ಇದರ ಜತೆಗೆ ನಾಟ್ಯದಿಂದ ದೇಹ, ದೇಹದ ಎಲ್ಲ ಅಂಗಾಂಗಗಳು ದೃಢವಾಗಿ, ಆರೋಗ್ಯಕರವಾಗಿರುತ್ತವೆಯೆಂದು ಅವರು ಹೇಳುತ್ತಾರೆ. ಮುಪ್ಪನ್ನು ಮುಂದೂಡುವುದಕ್ಕಿಂತ ಸಂತೋಷದ ಕೆಲಸ ಬದುಕಿನಲ್ಲಿ ಯಾವುದಿರುತ್ತದೆ ಹೇಳಿ? ಸುಂದರವಾದ, ದೃಢವಾದ, ಆರೋಗ್ಯಕರವಾದ ದೇಹ ಯಾರಿಗೆ, ತಾನೇ ಬೇಡ? ಹಾಗಾಗಿ ಪ್ರತಿಯೊಬ್ಬರೂ ಯಾವುದಾದರೂ ಒಂದು ರೀತಿಯ ನಾಟ್ಯವನ್ನು ಕಲಿತು ಆರೋಗ್ಯಕರವಾಗಿರುವುದು ಬಹಳ ಒಳ್ಳೆಯದೆಂದು ತಜ್ಞರ ಅಭಿಪ್ರಾಯ.

-  ಸೌಮ್ಯಾ ಕಾಗಲ್‌

ಬಸವೇಶ್ವರ ಕಲಾ ಮಹಾವಿದ್ಯಾಲಯ

ಬಾಗಲಕೋಟೆ

Advertisement

Udayavani is now on Telegram. Click here to join our channel and stay updated with the latest news.