Advertisement

ಆರೋಗ್ಯ ಸಿಬ್ಬಂದಿಗೆ ಪ್ರಶಂಸೆ ಪತ್ರ

07:11 PM Jul 16, 2021 | Team Udayavani |

ದೊಡ್ಡಬಳ್ಳಾಪುರ: ಕೋವಿಡ್‌-19 3ನೇಅಲೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿರಾಜ್ಯದಲ್ಲಿಯೇ ಮೊದಲ ಬಾರಿಗೆ ಜಾರಿಗೊಳಿಸಲಾದ ಮಕ್ಕಳ ತಜ್ಞರ ನಡೆ ಹಳ್ಳಿಯಮಕ್ಕಳ ಕಡೆಗೆ ಕಾರ್ಯಕ್ರಮ 28 ದಿನಗಳನಂತರ ಸಮಾರೋಪಗೊಂಡಿತು.ತಂಡದಲ್ಲಿ ಭಾಗಿಯಾದ ವೈದ್ಯಕೀಯತಂಡದ ಸಿಬ್ಬಂದಿಗೆ ಶಾಸಕ ಟಿ.ವೆಂಕಟರಮಣಯ್ಯ ಪ್ರಶಂಸೆ ಪತ್ರ ವಿತರಿಸಿದರು.

Advertisement

ಪೌಷ್ಟಿಕಾಂಶದ ಅರಿವು: ತಹಶೀಲ್ದಾರ್‌ಟಿ.ಎಸ್‌.ಶಿವರಾಜ್‌ ಮಾತನಾಡಿ, ಕೋವಿಡ್‌ ಹಿನ್ನೆಲೆ ರಾಜ್ಯದಲ್ಲಿ ಪ್ರಥಮ ಬಾರಿಗೆಜಾರಿ ಮಾಡಲಾಗಿದ್ದ ಮಕ್ಕಳ ತಜ್ಞರ ನಡೆಹಳ್ಳಿಯ ಮಕ್ಕಳ ಕಡೆಗೆ ಕಾರ್ಯಕ್ರಮಯಶಸ್ವಿಯಾಗಿ ನೆರವೇ ರಿದೆ. ವೈದ್ಯರ ಈತಂಡ ತಾಲೂಕಿನ ಗ್ರಾಮ ಗಳಿಗೆ ತೆರಳಿಗೆ31233 ಮಕ್ಕಳನ್ನು ತಪಾ ಸಣೆ ನಡೆಸಿದ್ದು,ಅಪೌಷ್ಟಿಕ ಮಕ್ಕಳನ್ನು ಗುರುತಿಸಿ, ಪೌಷ್ಟಿಕ ಆಹಾರದ ಕಿಟ್‌ ವಿತರಿಸಿದೆ.

ಕೋವಿಡ್‌ಸಂದರ್ಭ ನಮಗೆ ಜೀವ ನದ ವಾಸ್ತವತೆಯ ಅರಿವು ಮೂಡಿಸಿದೆ ಎಂದರು.ಕೋವಿಡ್‌ ನಿರ್ವಹಣೆಯಲ್ಲಿ ಶಾಸಕರಸಹಕಾರ ಮಾರ್ಗದರ್ಶನಾಪರವಾಗಿದ್ದು,ಯೋಜನೆಯಲ್ಲಿ ಪಾಲ್ಗೊಂಡ ಎÇÉಾಸಿಬ್ಬಂದಿಗಳ ಪಾತ್ರ ಪ್ರಶಂಸನೀಯಎಂದರು. ಶಾಸಕ ಟಿ.ವೆಂಕಟರಮಣಯ್ಯಮಾತನಾಡಿ, ತಾಲೂಕಿನಲ್ಲಿ ಮಕ್ಕಳತಪಾಸಣೆ ಮಾಡಿ ಅವರ ಸ್ಥಿತಿಗತಿ ಬಗ್ಗೆವರದಿ ನೀಡಿದ್ದರಿಂದ ಮುಂದಿನ ಕ್ರಮವಹಿಸಲು ಅನುಕೂಲವಾಗಲಿದೆ.

ಗುರುತಿಸಲಾದ ಅಪೌಷ್ಟಿಕ ಮಕ್ಕಳನ್ನು ಸ್ಥಳೀಯಆರೋಗ್ಯ ಕೇಂದ್ರಗಳು, ಅಂಗನವಾಡಿಕೇಂದ್ರಗಳ ಮೂಲಕ ಪಾಲನೆ ಮಾಡಬೇಕಿದೆ. ಅಲ್ಲದೆ ಹೃದಯ ಸಂಬಂಧಿ,ಕಿಡ್ನಿಸಂಬಂಧಿತ ಹಾಗೂ ಇತರೆ ಕಾಯಿಲೆಗಳಹೆಚ್ಚಿನ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆಕೊಡಿಸಲು ಬೆಂಗಳೂರಿನ ಆಸ್ಪತ್ರೆಗಳಿಂದವಿಶೇಷ ತಜ್ಞರ ಶಿಬಿರ ಆಯೋಜಿಸಿ,ವೈದ್ಯರು, ಸಿಬ್ಬಂದಿ ಯಾವುದೇ ಆತಂಕಕ್ಕೆಒಳಗಾಗದೆ ನಿರ್ಭಯವಾಗಿ ಕೆಲಸಮಾಡುವಂತೆ ಸಲಹೆ ನೀಡಿದರು. ಈವೇಳೆ ತಾಲೂಕು ಆರೋಗ್ಯಾಧಿಕಾರಿಡಾ.ಪರಮೇಶ್ವರ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next