Advertisement

ಆರೋಗ್ಯ ಯೋಜನೆ ಶೀಘ್ರ ಜಾರಿ

08:20 AM Feb 17, 2018 | Team Udayavani |

ಫೆಬ್ರವರಿ ತಿಂಗಳಲ್ಲಿ “ಆರೋಗ್ಯ ಕರ್ನಾಟಕ ಯೋಜನೆ’ (ಯೂನಿ ವರ್ಸಲ್‌ ಹೆಲ್ತ್‌ ಕವರೇಜ್‌) ಪ್ರಾರಂಭಿಸಲಾಗುವುದು. ಈ ವರ್ಷದ ಅಂತ್ಯದೊಳಗೆ ರಾಜ್ಯದಾದ್ಯಂತ ಈ ಯೋಜನೆ ಜಾರಿಗೆ ತರಲಾಗುವುದೆಂದು ಸಿಎಂ ಪ್ರಕಟಿಸಿದ್ದಾರೆ. 

Advertisement

ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಮುಂದಿನ 7  ವರ್ಷಗಳಲ್ಲಿ ಉಪ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ಹೊಸದಾಗಿ 9 ಸಾವಿರ ಆರೋಗ್ಯ ಮತ್ತು ಸೌಖ್ಯ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಈ ಹಣಕಾಸು ವರ್ಷದಲ್ಲಿ 571 ಕೇಂದ್ರ ತೆರೆಯುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ.

ಖಾಸಗಿ ವೈದ್ಯಕೀಯ ಕಾಯ್ದೆ ಅನುಷ್ಠಾನದ ಮೇಲ್ವಿಚಾರಣೆಗಾಗಿ ” ರಾಜ್ಯ ಆರೋಗ್ಯ ಪರಿಷತ್ತು’ ನ್ನು ಸ್ಥಾಪಿಸಲಾಗುತ್ತದೆ. ಎಲ್ಲಾ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳನ್ನು ಎನ್‌ಬಿಎಚ್‌ ಅಡಿಯಲ್ಲಿ ಪ್ರಮಾಣಿಕರಿಸಲಾಗುತ್ತದೆ. ಸಾರ್ವಜ ನಿಕ ಹೊಣೆಗಾರಿಕೆ ಹೆಚ್ಚಿಸುವುದರ ಬಗ್ಗೆ ಒಲವು ವ್ಯಕ್ತಪಡಿಸಲಾಗಿದೆ.

ಮಾನಸಿಕ‌ ಆರೈಕೆ ಯೋಜನೆ
ಮಾನಸಿಕ ಆರೋಗ್ಯದಿಂದ ಬಳಲುವವರಿಗೆ ಮಾನಸಿಕ ಆರೋಗ್ಯ ಆರೈಕೆ ಕಾರ್ಯಕ್ರಮ ಪುನರ್‌ರಚನೆ ಮಾಡಲಾಗುತ್ತದೆ. ಆರೋಗ್ಯ ಅಧಿನಿಯಮ 2017 ರ ಪ್ರಕಾರ ಈ ಯೋಜನೆ ಕೈಗೊಳ್ಳಲು ಬಜೆಟ್‌ನಲ್ಲಿ ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next