Advertisement
ಮೊದಲ ಹಂತದಲ್ಲಿ 10 ಪ್ರಮುಖ ಆಸ್ಪತ್ರೆಗಳಲ್ಲಿ ಯೋಜನೆ ಜಾರಿಯಾಗಲಿದೆ. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಪಿಎಂಎಸ್‌ಎಸ್‌ವೈ ಆಸ್ಪತ್ರೆ, ವಿಕ್ಟೋರಿಯಾ ಕ್ಯಾಂಪಸ್, ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ. ಯೋಜನೆ ಬಗ್ಗೆ ಒಂದಿಷ್ಟು ವಿವರ ಹೀಗಿದೆ.
ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ, ರಾಜೀವ್ ಆರೋಗ್ಯ ಭಾಗ್ಯ, ಹಿರಿಯ ನಾಗರಿಕರಿಗೆ ಆರ್‌ಎಸ್‌ಬಿವೈ ಯೊಜನೆ ಒಳಗೊಂಡಂತೆ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ, ಇಂದಿರಾ ಸುರಕ್ಷತಾ ಯೋಜನೆ. ಸಂಬಂಧಿತ ವೈದ್ಯಕೀಯ ಹಾಜರಾತಿ ನಿಯಮಗಳಿಗೆ ತಿದ್ದುಪಡಿ ತರುವಾಯ ಕರ್ನಾಟಕ ಶಾಸಕಾಂಗ ಸದಸ್ಯರು, ಸರ್ಕಾರಿ ನೌಕರರು ಹಾಗೂ ಪೊಲೀಸ್ ಸಿಬ್ಬಂದಿಗಿರುವ ಇತರೆ ಯೋಜನೆ ಹೊಸ ಯೋಜನೆಯಡಿ ಸೇರ್ಪಡೆ. ಯಶಸ್ವಿನಿ ಯೋಜನೆಯಡಿ ಕುಟುಂಬದ ಒಬ್ಬರಿಗೆ 2 ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚ ಸೌಲಭ್ಯವಿದ್ದು, ಇದು ಮೇ 31ಕ್ಕೆ ಮುಕ್ತಾಯವಾಗಲಿದ್ದು, ಅಲ್ಲಿಯವರೆಗೆ ಮಾತ್ರ ಮುಂದುವರಿಯಲಿದೆ. ಫಲಾನುಭವಿ ವಿಂಗಡಣೆ
ಅರ್ಹತಾ ರೋಗಿ: ರಾಜ್ಯದಲ್ಲಿ ವಾಸವಾಗಿರುವ ಹಾಗೂ “2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ’ ಪ್ರಕಾರ ಅರ್ಹತಾ ಕುಟುಂಬಕ್ಕೆ ಸೇರಿರುವ ರೋಗಿಗಳು (ಬಿಪಿಎಲ್ ಕುಟುಂಬ)
ಸಾಮಾನ್ಯ ರೋಗಿ: ರಾಜ್ಯದಲ್ಲಿ ವಾಸವಾಗಿರುವ ಹಾಗೂ “2013ರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ’ ಪ್ರಕಾರ ಅರ್ಹತಾ ಕಾರ್ಡ್ ಕಾರ್ಡ್ ಇಲ್ಲದವರು
Related Articles
ಅರ್ಹತಾ ರೋಗಿಗಳಿಗೆ ಸರ್ಕಾರಿ ಆರೋಗ್ಯ ಸಂಸ್ಥೆಗಳು ಹಾಗೂ ರೆಫರಲ್ ಮೂಲಕ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ. ಸಾಮಾನ್ಯ ರೋಗಿಗಳಿಗೆ ಸಹ- ಪಾವತಿ ಆಧಾರದ ಮೇಲೆ ಚಿಕಿತ್ಸೆ
Advertisement
ಯಾವ ಸಮಸ್ಯೆಗಳಿಗೆ ಚಿಕಿತ್ಸೆಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆ: ತಾಯಿ ಮತ್ತು ಮಕ್ಕಳ ಆರೋಗ್ಯ, ಜ್ವರ, ಕೆಮ್ಮು, ವಾಂತಿ ಸೇರಿದಂತೆ ಪ್ರಾಥಮಿಕ ಹಂತದ ಆರೋಗ್ಯ ಸೇವೆ. ಹೆರಿಗೆ, ಡೆಂಗೆ, ಮಲೇರಿಯಾ, ಮೂಳೆ ಮುರಿತ, ಸಾಮಾನ್ಯ ಶಸ್ತ್ರಚಿಕಿತ್ಸೆ ಸೇರಿದಂತೆ ನಿಗದಿತ ದ್ವಿತೀಯ ಹಂತದ ಚಿಕಿತ್ಸೆ
ಹೃದ್ರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡದ ಸಮಸ್ಯೆ ಸೇರಿದಂತೆ ನಿಗದಿತ ತೃತೀಯ ಹಂತದ ಆರೋಗ್ಯ ಸೇವೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲದಿದ್ದರೆ ನೋಂದಾಯಿತ ನೆಟ್‌ಕವರ್ಕ್ ಆಸ್ಪತ್ರೆಗಳಿಗೆ ಶಿಫಾರಸು. ರೋಗಿಯು ನೋಂದಾಯಿತ ಆಸ್ಪತ್ರೆಯ ಪಟ್ಟಿಯಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಯೋಜನೆ ವ್ಯಾಪ್ತಿಗೆ ಒಳಪಡದವರು
ಕಾರ್ಮಿಕರ ರಾಜ್ಯ ವಿಮಾ ಯೋಜನೆಯಡಿ ರಕ್ಷಣೆಯಿರುವವರು. ಉದ್ಯೋಗದಾತರಿಂದ ಆರೋಗ್ಯ ಭರವಸೆ ಅಥವಾ ಆರೋಗ್ಯ ವಿಮೆ ಯೋಜನೆಗಳ ರಕ್ಷಣೆ ಪಡೆದವರು. ಖಾಸಗಿ ಆರೋಗ್ಯ ವಿಮಾ ಪಾಲಿಸಿಗಳನ್ನು ಸ್ವಯಂ ಮಾಡಿಸಿಕೊಂಡವರು. ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆಯಡಿ ರಕ್ಷಣೆ ಪಡೆದವರು. ರಾಜ್ಯ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಿ) ನಿಯಮಗಳಿಗೆ ತಿದ್ದುಪಡಿ ತರುವವರೆಗೆ ರಾಜ್ಯ ಸರ್ಕಾರಿ ಸಿಬ್ಬಂದಿಗೆ ಅನ್ವಯಿಸದು. ಕರ್ನಾಟಕ ವಿಧಾನಸಭಾ (ಸದಸ್ಯರ ವೈದ್ಯಕೀಯ ಹಾಜರಿ) ನಿಯಮಗಳಿಗೆ ತಿದ್ದುಪಡಿ ತರುವವರೆಗೆ ರಾಜ್ಯ ವಿಧಾನಸಭೆ ಸದಸ್ಯರಿಗೆ ಅನ್ವಯಿಸದು. ಚಿಕಿತ್ಸಾ ವೆಚ್ಚ ಮಿತಿ
ನಿಗದಿತ ದ್ವಿತೀಯ ಹಂತದ ಚಿಕಿತ್ಸೆಗೆ ಐದು ಸದಸ್ಯರ ಒಂದು ಕುಟುಂಬಕ್ಕೆ ವರ್ಷಕ್ಕೆ 30,000 ರೂ.ವರೆಗಿನ ಚಿಕಿತ್ಸಾ ಸೌಲಭ್ಯವಿದೆ. ನಿಗದಿತ ತೃತೀಯ ಹಂತದ ಚಿಕಿತ್ಸೆಗಳಿಗೆ ಪ್ಯಾಕೇಜ್ ಆಧಾರದ ಮೇಲೆ ಐದು ಜನರ ಒಂದು ಕುಟುಂಬಕ್ಕೆ ವರ್ಷಕ್ಕೆ 1.50 ಲಕ್ಷ ರೂ. ಮುಗಿದರೆ ತುರ್ತು ಚಿಕಿತ್ಸೆ ಹಾಗೂ ಹೆಚ್ಚುವರಿಯಾಗಿ 50,000 ರೂ. ಚಿಕಿತ್ಸೆ. ಸಾಮಾನ್ಯ ರೋಗಿಗಳಿಗೆ ಸಹ- ಪಾವತಿ ಆಧಾರದ ಮೇಲೆ ಚಿಕಿತ್ಸೆ. ಪ್ಯಾಕೇಜ್ ದರಗಳ ವೆಚ್ಚ ಅಥವಾ ಚಿಕಿತ್ಸೆಯ ನೈಜ ವೆಚ್ಚಗಳ ಪೈಕಿ ಯಾವುದು ಕಡಿಮೆಯಿರುವುದೋ ಅದರ ಶೇ.30ರಷ್ಟನ್ನು ಸರ್ಕಾರ ಮರುಪಾವತಿ ಮಾಡಲಿದೆ. ಉಳಿದ ಶೇ. 70ರಷ್ಟನ್ನು ರೋಗಿ ಭರಿಸಬೇಕು. ನೋಂದಣಿ ಹೇಗೆ?
ಆಯ್ದ ಸರ್ಕಾರಿ ಆಸ್ಪತ್ರೆಗಳಲ್ಲಿ ನೋಂದಣಿ. ಆಧಾರ್ ಕಡ್ಡಾಯ. ಪಡಿತರ ಚೀಟಿ ಆಧಾರದಡಿ ನೋಂದಣಿ. ಇ- ಕೆವೈಸಿ ಮೂಲಕ ನೋಂದಣಿ ಪ್ರಕ್ರಿಯೆ. ಕೆಲ ನಿಮಿಷಗಳಲ್ಲೇ ಎಆರ್‌ಕೆಐಡಿ ಸಂಖ್ಯೆಯೊಂದಿಗೆ ಹೆಲ್ತ್ ಕಾರ್ಡ್ ಸಿಗಲಿದೆ. ಯೋಜನೆಯ ಸೌಲಭ್ಯ ಪಡೆಯಬೇಕಾದರೆ ಇತರೆ ವಿಮಾ ಯೋಜನೆ ಹೊಂದಿಲ್ಲವೆಂದು ಸ್ವಯಂ ದೃಢೀಕರಣ ನೀಡಬೇಕು. ಕಾರ್ಡ್ ಪಡೆದ ಬಳಿಕ 10 ರೂ. ನೋಂದಣಿ ಶುಲ್ಕ ಪಾವತಿಸಬೇಕು. ಬಿಪಿಎಲ್ ಕಾರ್ಡ್‌ದಾರರು ಅರ್ಹತಾ ರೋಗಿ ಎಂದು ಪರಿಗಣನೆ. ಪಡಿತರ ಕಾರ್ಡ್ ಇಲ್ಲದವರು ಸಾಮಾನ್ಯ ರೋಗಿ ಎಂದು ಪರಿಗಣನೆ. ಕಾರ್ಡ್ ಕಳೆದು ಹೋದರೆ ಮರುಮುದ್ರಣಕ್ಕೆ ಅವಕಾಶ. 20 ರೂ. ಶುಲ್ಕ. ಪ್ರತಿ ಬಾರಿ ಆಸ್ಪತ್ರೆಗೆ ಹೋದಾಗ ಕಾರ್ಡ್ ಕೊಂಡೊಯ್ಯಬೇಕು.