Advertisement

ಶೈಕ್ಷಣಿಕ ಪ್ರಗತಿಗೆ ಆರೋಗ್ಯ ಮುಖ್ಯ

07:44 PM Feb 15, 2021 | Team Udayavani |

ಮಂಡ್ಯ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಆರೋಗ್ಯ ಮುಖ್ಯ. ಆರೋಗ್ಯವಂತರಾಗಿ ಇರಬೇಕಾದರೆ ಮಕ್ಕಳು ವಿದ್ಯೆಯ ಜತೆಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿ ಮಕ್ಕಳು ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಬೇಕು ಎಂದು ಸಮ್ಮೇಳನಾಧ್ಯಕ್ಷೆ ಕು.ಎಂ.ಎಸ್‌.ಅನನ್ಯ ಕಂಠಿ ತಿಳಿಸಿದರು.

Advertisement

ನಗರದ ಗಾಂಧಿ ಭವನದಲ್ಲಿ ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರ, ಕರ್ನಾ ಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡ, ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ನಡೆದ 11ನೇ ಮಕ್ಕಳ ರಾಷ್ಟ್ರೀಯ ಸಾಂಸ್ಕೃತಿಕ ಸಮ್ಮೇಳನದ ಸಮ್ಮೇ ಳನಾಧ್ಯಕ್ಷೆಯಾಗಿ ಮಾತ ನಾಡಿದರು.

ಸಾಂಸ್ಕೃತಿಕ ಕಲೆ ಪ್ರತಿಬಿಂಬ: ಸಾಂಸ್ಕೃತಿಕ ಕಾರ್ಯಕ್ರಮಗಳು ರಾಜ ಮಹಾರಾಜರಕಾಲದಿಂದಲೂ ನಡೆದುಕೊಂಡು ಬಂದಿವೆ. ಇವು ನಿನ್ನೆ ಮೊನ್ನೆಯದ್ದಲ್ಲ. ಕೇವಲ ನೃತ್ಯ, ಜನಪದ ಗೀತೆಗಳಷ್ಟೇ ಅಲ್ಲದೆ, ಪೂಜಾ ಕುಣಿತ, ವೀರಗಾಸೆ, ಬೀಸೋ ಕಲ್ಲಿನ ಪದಗಳು, ಲಾವಣಿಗಳು ಎಲ್ಲವೂ ನಮ್ಮ ಸಾಂಸ್ಕೃತಿಕ ಕಲೆಯನ್ನು ಪ್ರತಿಬಿಂಬಿ ಸುತ್ತವೆ ಎಂದರು.

ಇಂತಹದ್ದೊಂದು ಐತಿಹಾಸಿಕ ಸಮ್ಮೇಳನಕ್ಕೆ ಆಯ್ಕೆ ಮಾಡಿರುವುದು ನನ್ನ ಮಹಾ ಭಾಗ್ಯ. ಈ ಮೂಲಕ ಮಕ್ಕಳಿಗಾಗಿ ಉತ್ತಮ ಕಾರ್ಯಕ್ರಮ ಆಯೋಜಿಸಿ, ಮಕ್ಕಳ ಪ್ರತಿಭೆ ಯನ್ನು ಪ್ರದರ್ಶಿಸಲು ಉತ್ತಮಅವಕಾಶವನ್ನು ಇಂಥ ವೇದಿಕೆಗಳು ಕಲ್ಪಿಸಿಕೊಡುತ್ತವೆ ಎಂದು ಹೇಳಿದರು.

ಸಮ್ಮೇಳನದಿಂದ ಎಲ್ಲರಿಗೂ ಸಂಭ್ರಮ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ ಸಮ್ಮೇಳನ ಎಲ್ಲರಿಗೂ ಸಂಭ್ರಮವಾಗಿದೆ. ಸಮ್ಮೇಳನಾಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿ, ಇಂತಹ ಉನ್ನತ ಹುದ್ದೆಯನ್ನು ‌ಅಲಂಕರಿಸಲು ಅವಕಾಶ ಮಾಡಿಕೊಟ್ಟ ರಾಷ್ಟ್ರೀಯ ಮಕ್ಕಳ ಪ್ರತಿಭಾ ಕೇಂದ್ರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Advertisement

ಧರ್ಮದರ್ಶಿ ವಿ.ಎಸ್‌.ಕೃಷ್ಣ, ರಾ.ಮ. ಪ್ರ.ಕೇಂದ್ರದ ರಾಷ್ಟ್ರಾಧ್ಯಕ್ಷೆ ಡಾ.ಸ್ವಾತಿ ಪಿ. ಭಾರದ್ವಾಜ್‌, ಜಿಪಂ ಮಾಜಿ ಅಧ್ಯಕ್ಷ ರೇಶ್‌ ಕಂಠಿ, ನಗರಸಭಾ ಮಾಜಿ ಸದಸ್ಯ ಕೆ.ಎನ್‌. ದೀಪಕ್‌, ಹಿರಿಯವಕೀಲ ಮುದ್ದುರಾಜು, ಸಾಹಿತಿ ಎಚ್‌.ಸಿ.ಚಿಕ್ಕಾಚಾರ್ಯ ಸೇರಿದಂತೆ ಮತ್ತಿತರರಿದ್ದರು. ನಂತರ ಮಕ್ಕಳು ತಮ್ಮ ಕಲಾ ಪ್ರತಿಭೆ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next