ಕೋವಿಡ್ ಸೋಂಕು ತಡೆಗಟ್ಟುವಲ್ಲಿ ಆಶಾ ಕಾರ್ಯಕರ್ತೆಯರ ಶ್ರಮ ದೊಡ್ಡದು. ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳವರೆಗೂ ಮನೆ ಮನೆಗೆ ತೆರಳಿ ಮಾಹಿತಿ ಪಡೆದು
ಅದನ್ನು ಸರ್ಕಾರಕ್ಕೆ ಒದಗಿಸುವಂತಹ ಕೆಲಸ ಮಾಡುತ್ತಿದ್ದಾರೆ. ಅವರ ಆರೋಗ್ಯ ರಕ್ಷಣೆಯೂ ಮುಖ್ಯವಾಗಿರುವುದರಿಂದ ಕೋವಿಡ್ ಸೋಂಕಿನ ತಪಾಸಣೆಯನ್ನುಮಾಡಲಾಗುತ್ತಿದೆ. 14 ದಿನಗಳಿಗೊಮ್ಮೆ ಅವರನ್ನು ಪರೀಕ್ಷೆಗೆ ಒಳಪಡಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವುದಾಗಿ ತಿಳಿಸಿದರು. ಡಾ| ಎಂ.ಬಿ.ಪಿ.ಎಂ ರವಿಕುಮಾರ್, ಬಿ.ಪಿ. ರಾಜು, ಲ್ಯಾಬ್ ಟೆಕ್ನಿಶಿಯನ್ ರೂಪಾ, ಸಣ್ಣಪ್ಪ, ನೀಲಮ್ಮ ಇದ್ದರು.
Advertisement