Advertisement

Health; ಜೀವರಕ್ಷಕ ವ್ಯವಸ್ಥೆ ತೆಗೆಯಲು ಕುಟುಂಬದ ಒಪ್ಪಿಗೆ ಕಡ್ಡಾಯ

02:03 AM Sep 30, 2024 | Team Udayavani |

ಹೊಸದಿಲ್ಲಿ: ಸಾವು ಖಚಿತವಾದ ಕಾಯಿ ಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಜೀವ ರಕ್ಷಕ ವ್ಯವಸ್ಥೆಯನ್ನು ತೆಗೆಯಲು ಅನುಮತಿ ನೀಡುವ ಕಾನೂನಿಗೆ ಕರ ಡನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಇದಕ್ಕಾಗಿ ಅವರ ಕುಟುಂಬ ಸ್ಥರ ಅನುಮತಿ ಕಡ್ಡಾಯ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

Advertisement

ತೀವ್ರ ನಿಗಾ ಘಟಕದಲ್ಲಿರುವ ಬಹಳಷ್ಟು ರೋಗಿಗಳು ಸಾವು ಖಚಿತವಾದ ಕಾಯಿ ಲೆ ಗಳಿಂದ ಬಳಲುತ್ತಿದ್ದಾರೆ. ಇವರಿಗೆ ಜೀವ ರಕ್ಷಕ ವ್ಯವಸ್ಥೆಯ ಮೂಲಕ ಯಾವುದೇ ಉಪಯೋಗಗಳು ಆಗುವು ದಿಲ್ಲ. ಇಂತಹ ಸಮಯದಲ್ಲಿ ಜೀವರಕ್ಷಕ ವ್ಯವಸ್ಥೆ ಅವರಿಗೆ ಹೊರೆಯಾಗಿ ಪರಿಣಮಿ ಸಲಿದೆ. ಅಲ್ಲದೆ ಅವರ ಕುಟುಂಬಕ್ಕೆ ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚಿನ ಸಮಸ್ಯೆ ಉಂಟುಮಾಡಲಿದೆ ಎಂದು ಕರಡು ನಿಯಮದಲ್ಲಿ ಹೇಳಲಾಗಿದೆ.

ವಾಸಿಯಾಗದ ಕಾಯಿಲೆ, ಮೆದುಳು ನಿಷ್ಕ್ರಿಯ ವಾದಂತಹ ರೋಗಿಗಳಿಗೆ ಜೀವ ರಕ್ಷಕ ವ್ಯವಸ್ಥೆ ತೆಗೆಯಲು ಈ ಕಾನೂನು ಅನುಮತಿ ನೀಡುತ್ತದೆ. ಇದನ್ನು ವೈದ್ಯರು ದೃಡಪಡಿಸಬೇಕಿದೆ ಎಂದು ಹೇಳಲಾ ಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಗಳನ್ನು ಸಲ್ಲಿಕೆ ಮಾಡಲು ಅ.20 ಕೊನೆ ದಿನವಾಗಿದ್ದು, ಬಳಿಕ ಸಚಿವಾಲಯದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next