Advertisement
ಚಿಕಿತ್ಸಾ ಗುಣಗಳು:ನೆಗಡಿ ಮತ್ತು ಫೂ ಶಮನಕಾರಿ: ನಿಂಬೆ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಇದು ಸೋಂಕು ತಗುಲದಂತೆ ನೋಡಿಕೊಳ್ಳುತ್ತದೆ ಮತ್ತು ನೆಗಡಿಯಿಂದ ನಮ್ಮನ್ನು ರಕ್ಷಿಸುತ್ತದೆ.
Related Articles
Advertisement
ಸಮತೋಲನ ಕಾಪಾಡುತ್ತದೆ: ನಿಂಬೆ ಹಣ್ಣು ಆಮ್ಲಿàಯವಾಗಿದ್ದು, ಅದು ದೇಹದ ಪಚನ ಕ್ರಿಯೆಯಲ್ಲಿ ಪಾತ್ರವಹಿಸುತ್ತದೆ. ದೇಹದ ವಿವಿಧ ದ್ರವಗಳ ಮೆಲೆ ಪ್ರತ್ಯಾಮ್ಲಿàಯ ಪರಿಣಾಮವನ್ನು ಉಂಟು ಮಾಡುತ್ತದೆ.
ಅಲರ್ಜಿಯಿಂದ ಮುಕ್ತಿ: ನಿಂಬೆ ಹಣ್ಣು ಅಲರ್ಜಿಯನ್ನು ದೂರಗೊಳಿಸುವ ಶಕ್ತಿಯನ್ನು ಹೊಂದಿದೆ.
ನರಸಂಬಂಧಿ ರೋಗ ಮುಕ್ತಿ: ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಅತಿಯಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಮಿದುಳಿಗೆ ಸಂಬಂಧಿಸಿದ ದೋಷಗಳನ್ನು ಕಡಿಮೆಗೊಳಿಸಿ ಉತ್ತಮ ಆರೋಗ್ಯವನ್ನು ನೀಡುತ್ತದೆ.
ಕಣ್ಣಿನ ವ್ಯಾಧಿಗಳು: ನಿಂಬೆ ಹಣ್ಣಿನಲ್ಲಿರುವ ರುಟಿನ್ ಎಂಬ ಅಂಶವು ಡಯಾಬೆಟಿಕ್ ರೆಟಿನೋಪತಿಯನ್ನು ಒಳಗೊಂಡಿರುವುದರಿಂದ, ಅನೇಕ ಕಣ್ಣಿನ ರೋಗಗಳನ್ನು ನಿವಾರಿಸುತ್ತದೆ.
ಡಯಾಬಿಟಿಸ್ ನಿಯಂತ್ರಣ: ನಿಂಬೆ ಹಣ್ಣಿನಲ್ಲಿರುವ ಹೆಸ್ಪರ್‌ಟೈನ್ ಎಂಬ ರಾಸಾಯನಿಕವು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ಕಡಿಮೆ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಹಕರಿಸುತ್ತದೆ.
ಕಿಡ್ನಿಯಲ್ಲಿನ ಕಲ್ಲುಗಳು: ನಿಂಬೆ ಹಣ್ಣಿನಲ್ಲಿರುವ ಸಿಟ್ರಿಕ್ ಆಮ್ಲವು ಕಿಡ್ನಿಯಲ್ಲಿರುವ ಕಲ್ಲುಗಳನ್ನು ಕರಗಿಸಿ ಕಿಡ್ನಿಸ್ಟೋನ್ ನಿವಾರಿಸುವಲ್ಲಿ ಸಹಕರಿಸುತ್ತದೆ.
ತಾರುಣ್ಯವನ್ನು ಕಾಪಾಡುತ್ತದೆ: ನಿಂಬೆ ಹಣ್ಣಿನಲ್ಲಿರುವ ವಿಟಮಿನ್ ಸಿ ದೇಹದಲ್ಲಿ ರಾಡಿಕಲ್ಸ್‌ಗಳನ್ನು ತಟಸ್ಥಗೊಳಿಸುತ್ತದೆ. ಇದರಿಂದ ನಮ್ಮ ತಾರುಣ್ಯ ಇನ್ನಷ್ಟು ಹೆಚ್ಚುತ್ತದೆ.
ಸಿಟ್ರಿಕ್ ಆ್ಯಸಿಡ್ ಇರುವುದರಿಂದ ದೇಹದಲ್ಲಿನ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ನಿಂಬೆ ರಸವನ್ನು ದಿನನಿತ್ಯ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
ಮೊಡವೆಯಿಂದ ಮುಕ್ತಿ: ಪ್ರತಿ ದಿನ ನಿಂಬೆ ರಸ ಮುಖಕ್ಕೆ ಹಚ್ಚಿ 5 ನಿಮಿಷದ ಬಳಿಕ ಮುಖ ತೊಳೆಯುವುದರಿಮದ ಮೊಡವೆ ಸಮಸ್ಯೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.