Advertisement

Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್‌

02:02 AM Nov 19, 2024 | Team Udayavani |

ಬೆಂಗಳೂರು: ರಾಜ್ಯದ ಸರಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಔಷಧ ಕೊರತೆಯಿಲ್ಲ. ಆದರೆ ತಾಂತ್ರಿಕ ಕಾರಣದಿಂದ ಟೆಂಡರ್‌ ವಿಳಂಬವಾಗಿದೆ. ಈ ವರ್ಷವೂ ಇಂಡೆಂಟ್‌ ಪ್ರಕಾರವೇ ಔಷಧ ಖರೀದಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸುದ್ದಿಗಾರರಿಗೆ ತಿಳಿಸಿದರು.

Advertisement

ನಮ್ಮ ಸರಕಾರ ಬಂದ ಆರಂಭದಲ್ಲಿ ಕೇವಲ ಶೇ. 40ರಷ್ಟು ಔಷಧ ಮಾತ್ರ ಸಿಗುತ್ತಿತ್ತು. ಉಳಿದ ಔಷಧಗಳನ್ನು ಆಸ್ಪತ್ರೆಗಳಲ್ಲೇ ಖರೀದಿ ಮಾಡಲಾಗುತ್ತಿತ್ತು. ಈಗ ಶೇ. 75ರಷ್ಟು ಔಷಧ ವೈದ್ಯಕೀಯ ಸರಬರಾಜು ನಿಗಮದಿಂದಲೇ ಪೂರೈಕೆಯಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಯಾವ ಔಷಧ ಇಲ್ಲವೋ ಅಂತಹವನ್ನು ಸ್ಥಳೀಯವಾಗಿ ಖರೀದಿಸಲು ಸೂಚನೆ ನೀಡಲಾಗಿದೆ. ಈ ಮೂಲಕ ಔಷಧ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next