Advertisement

ರೋಗಲಕ್ಷಣ ಇದ್ದರೆ, ದಯವಿಟ್ಟು ಪರೀಕ್ಷಿಸಿಕೊಳ್ಳಿ; ಸಾರ್ವಜನಿಕರಿಗೆ ಆರೋಗ್ಯ ಸಚಿವಾಲಯ ಕೋರಿಕೆ

09:42 AM May 13, 2020 | Hari Prasad |

ಹೊಸದಿಲ್ಲಿ: ಕೋವಿಡ್ ವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದರೆ, ಕೂಡಲೇ ಮುಂದೆ ಬಂದು ಪರೀಕ್ಷೆ ಮಾಡಿಸಿಕೊಳ್ಳಿ.

Advertisement

ನಿಮ್ಮಿಂದ ಇತರರಿಗೆ ಸೋಂಕು ಹರಡುವುದನ್ನು ಆ ಮೂಲಕ ತಪ್ಪಿಸಿ’ ಎಂದು ಎಂದು ಆರೋಗ್ಯ ಸಚಿವಾಲಯ ಮನವಿ ಮಾಡಿದೆ.

ಕೋವಿಡ್ ಪರೀಕ್ಷೆಗೆ ಒಳಗಾಗಲು ಯಾರೂ ಹಿಂಜರಿಯಬಾರದು. ರೋಗ ಲಕ್ಷಣ ಮುಚ್ಚಿಟ್ಟಷ್ಟು ಎಲ್ಲರಿಗೂ ಸಮಸ್ಯೆ ಎಂದು ಅವರು ಹೇಳಿದ್ದಾರೆ.

ಸರಕಾರವು ಕೋವಿಡ್ ರೋಗಿಗಳ ಡಿಸ್ಚಾರ್ಜ್‌ ನೀತಿ ಪರಿಷ್ಕರಿಸಿರುವ ಕುರಿತು ಸ್ಪಷ್ಟನೆ ನೀಡಿರುವ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್, ಹಲವು ದೇಶಗಳು ಡಿಸ್ಚಾರ್ಜ್‌ ನೀತಿಯನ್ನು ಪರೀಕ್ಷೆ ಆಧಾರಿತ ಕಾರ್ಯತಂತ್ರದಿಂದ ರೋಗಲಕ್ಷಣ ಹಾಗೂ ಸಮಯಾಧಾರಿತ ಕಾರ್ಯತಂತ್ರಕ್ಕೆ ಬದಲಾಯಿಸಿಕೊಂಡಿವೆ. ಅದೇ ರೀತಿ ನಾವೂ ಬದಲಾಯಿಸಿದ್ದೇವೆ ಎಂದಿದ್ದಾರೆ.

ಇದೇ ವೇಳೆ, ಧರ್ಮಾಧಾರಿತವಾಗಿ ಕೋವಿಡ್ ಮ್ಯಾಪಿಂಗ್‌ ಮಾಡಲಾಗುತ್ತಿದೆ ಎಂಬ ವರದಿಗಳನ್ನು ಗೃಹ ಸಚಿವಾಲಯ ತಳ್ಳಿಹಾಕಿದೆ. ಕೋವಿಡ್ ವ್ಯಾಪಿಸುವಿಕೆಗೆ ಜನಾಂಗ, ಧರ್ಮ, ಜಾತಿ, ಪ್ರದೇಶದ ಹಂಗಿಲ್ಲ.

Advertisement

ಮುಂಜಾಗ್ರತಾ ಕ್ರಮಗಳ ಕೊರತೆಯಿಂದಾಗಿ ಅದು ವ್ಯಾಪಿಸುತ್ತದೆ. ರೋಗಿಗಳನ್ನು ಧರ್ಮಾಧಾರಿತವಾಗಿ ನೋಡಲಾಗುತ್ತಿದೆ ಎಂಬ ಆರೋಪ ಶುದ್ಧ ಸುಳ್ಳು ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಂದೇ ದಿನ 4231 ಪ್ರಕರಣ: 24 ಗಂಟೆಗಳ ಅವಧಿಯಲ್ಲಿ ಭಾರತವು ಗರಿಷ್ಠ ಪ್ರಕರಣಗಳನ್ನು ಕಂಡಿದ್ದು, ಒಂದೇ ದಿನ 4,231 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ ಒಟ್ಟು 97 ಮಂದಿ ಸಾವಿಗೀಡಾಗಿದ್ದಾರೆ ಎಂದು ಸಚಿವಾಲಯದ ಮಾಹಿತಿಗಳು ತಿಳಿಸಿವೆ.

ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ, ಗುಣಮುಖ ಪ್ರಮಾಣವೂ ಹೆಚ್ಚಾಗುತ್ತಿದ್ದು, ಪ್ರಸ್ತುತ ಅದು ಶೇ.31.55ಕ್ಕೇರಿದೆ. ದೇಶಾದ್ಯಂತ 20,916 ಮಂದಿ ಗುಣಮುಖರಾಗಿದ್ದಾರೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next