Advertisement
ಜಿಲ್ಲಾ ಮಟ್ಟದಲ್ಲಿ ಕೈದಿಗಳ ಆರೋಗ್ಯವನ್ನು ಜಿಲ್ಲಾಸ್ಪತ್ರೆ ವೈದ್ಯರ ತಂಡ ಮೂಲಕ ಪರಿಶೀಲಿಸಲಿದೆ. ಕೈದಿಗಳ ವೈದ್ಯಕೀಯ ತಪಾಸಣೆ ಕುರಿತು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನೆ ಸಭೆ ನಡೆಸಿ ವರದಿ ಸಲ್ಲಿಸಬೇಕು.ಇನ್ನೂ ಕಾರ್ಯಕ್ರಮಾಧಿಕಾರಿಗಳು ಜೈಲಿನ ಅಡುಗೆ ಮನೆ, ನೀರು ಸರಬರಾಜು, ಕುಡಿಯುವ ನೀರಿನ ಗುಣಮಟ್ಟ, ತ್ಯಾಜ್ಯ ವಿಲೇವಾರಿ, ಶೌಚಾಲಯ, ಸೊಳ್ಳೆಗಳ ಲಾರ್ವ ಉತ್ಪತ್ತಿ ತಾಣಗಳ ನಾಶ ಸಹಿತ ಆರೋಗ್ಯ ಸಂಬಂಧಿಸಿದ ಇತರ ವ್ಯವಸ್ಥೆಯನ್ನು ಕಾಲ ಕಾಲಕ್ಕೆ ಪರಿಶೀಲಿಸಿ ಜೈಲು ನಿರ್ವಹಣಾಧಿಕಾರಿಗಳು, ಕಾರಾಗೃಹ ಆಸ್ಪತ್ರೆ ಸಿಬಂದಿ ಹಾಗೂ ಶುಶ್ರೂಷಕರಿಗೆ ಸೂಚನೆ ನೀಡಲಿದ್ದಾರೆ.