ಉಡುಪಿ: ಜಿಲ್ಲೆಯಲ್ಲಿ ಅವಧಿಗೂ ಮುನ್ನವೇ ಮಳೆಗಾಲ ಶುರುವಾಗಿದ್ದು, ರೋಗರುಜಿನಗಳು ಹರಡುವ ಭೀತಿಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಜನ ಸಾಮಾನ್ಯರಿಗೆ ಅಗತ್ಯ ಅರಿವು ಮೂಡಿಸಲು ಮುಂದಾಗಿದೆ.
ಮಳೆಯ ನಡುವೆಯೂ ಆರೋಗ್ಯ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ರಬ್ಬರ್ ಪ್ಲಾಂಟ್ ಹೆಚ್ಚಿರುವ ಭಾಗದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ವರದಿ ಯಾಗುತ್ತಿದ್ದು, ಈ ಭಾಗಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಡೆಂಗ್ಯೂ ಹೆಚ್ಚಿರುವ ಪ್ರದೇಶದಲ್ಲಿ ಆರೋಗ್ಯ ತಪಾಸಣೆ ತೀವ್ರಗೊಳಿಸಲಾಗಿದೆ.
ಲಾರ್ವ ಸರ್ವೇ
ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬಂದಿ ಲಾರ್ವ ಸರ್ವೇ ಮಾಡು ತ್ತಿದ್ದಾರೆ. ರೋಗಲಕ್ಷಣ ಇರುವವರು ಪರೀಕ್ಷಿಸಿಕೊಳ್ಳಲು ಆರೋಗ್ಯ ಕೇಂದ್ರ ಗಳಲ್ಲಿಯೇ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ಲೆಟ್‌ಲೆಟ್ ಕಡಿಮೆ ಇದ್ದವರಿಗೆ ಹೆಚ್ಚಿನ ಚಿಕಿತ್ಸೆ ನೀಡಲೂ, ಮನೆ ಔಷಧ ಪಡೆ ಯಲು, ಬಿಸಿನೀರು ಬಳಸಲು. ಮನೆ ಪರಿಸರದಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರ ವಹಿಸಲು ಕ್ರಮ ಕೈಗೊಳ್ಳಲಾಗಿದೆ.
Related Articles
ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ನೀರು ಹೆಚ್ಚು ದಿನಗಳಕಾಲ ನಿಲ್ಲ ದಂತೆ ಎಚ್ಚರವಹಿಸಬೇಕು. 7ರಿಂದ 10 ದಿನಗಳ ಅಂತರದಲ್ಲಿ ಸೊಳ್ಳೆಗಳ ಮೊಟ್ಟೆ ಗಳು ಬೆಳೆಯತೊಡಗುತ್ತವೆ. ಕೆಲವು ದಿನ ಗಳಕಾಲ ಉಷ್ಣತೆ 37ರಿಂದ 40 ಡಿಗ್ರಿ ಹೆಚ್ಚಳ ವಾದರೆ ಇದರ ಬೆಳವಣಿಗೆ ತಪ್ಪಲಿದೆ.
ಗ್ರಾಮಾಂತರ ಭಾಗದಲ್ಲಿ ನಿಗಾ
ಗುಡ್ಡಗಾಡು ಪ್ರದೇಶ, ಜನವಸತಿ ಇರುವ ಗ್ರಾಮಾಂತರ ಭಾಗದಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಕಂಡುಬರುತ್ತಿವೆ. ಈ ಬಗ್ಗೆ ಆರೋಗ್ಯ ಇಲಾಖೆ ಸೊಳ್ಳೆ ನಾಶಕಗಳನ್ನು ಸಿಂಪಡಿಸಿದರೂ ಮಳೆಗೆ ನೀರು ನಿಂತ ಪರಿಣಾಮ ಮತ್ತೆ ಸೊಳ್ಳೆಗಳ ಉತ್ಪತ್ತಿ ತಾಣವಾಗುವ ಸಾಧ್ಯತೆಗಳೂ ಇರುತ್ತವೆ. ಈ ಕಾರಣಕ್ಕಾಗಿ ಆರೋಗ್ಯ ಇಲಾಖೆ ಗ್ರಾಮಾಂತರ ಭಾಗದಲ್ಲಿ ಹೆಚ್ಚಿನ ನಿಗಾ ಇರಿಸಿಕೊಂಡು ಕಾರ್ಯಚಟುವಟಿಕೆ ಮಾಡುತ್ತಿದೆ.
ನಿಯಂತ್ರಣ ಹೇಗೆ?
ನೀರಿನ ಟ್ಯಾಂಕ್, ಎಳನೀರು, ಪ್ಲಾಸ್ಟಿಕ್ ಗ್ಲಾಸ್, ಟೈರ್ ಹಾಗೂ ಮರದ ಪೊಟರೆಗಳಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುತ್ತವೆ. ನಗರ ಪ್ರದೇಶಗಳಲ್ಲಿ ನೀರಿನ ಟ್ಯಾಂಕ್, ಕೊಡಗಳಲ್ಲಿ ಸೊಳ್ಳೆಗಳು ಬೆಳೆಯುತ್ತವೆ. ನೀರಿನ ಟ್ಯಾಂಕ್‌ಗಳ ಮೇಲೆ ಮುಚ್ಚಳ ಹಾಕಿ ಸೊಳ್ಳೆಗಳನ್ನು ನಿಯಂತ್ರಿದರೆ ಉತ್ತಮ ಎನ್ನುತ್ತಾರೆ ವೈದ್ಯಾಧಿಕಾರಿಗಳು.
ಸ್ವಯಂ ಜಾಗೃತಿ ಅಗತ್ಯ
ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವತಿಯಿಂದ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದು ಕೊಳ್ಳಲಾಗುತ್ತಿದೆ. ನೀರುನಿಲ್ಲುವ ಸ್ಥಳಗಳೇ ಸೊಳ್ಳೆ ಉತ್ಪತ್ತಿ ತಾಣಗಳಾಗುತ್ತಿದ್ದು, ಸಾರ್ವ ಜನಿಕರು ಈ ಬಗ್ಗೆ ಸ್ವಯಂ ಜಾಗೃತಿ ಮಾಡಿಕೊಳ್ಳಬೇಕಿದೆ. -ಡಾ| ಪ್ರಶಾಂತ್ ಭಟ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ
ಪುನೀತ್ ಸಾಲ್ಯಾನ್