ಗೋಣಿಕೊಪ್ಪಲು : ಆಯುಷ್ ಇಲಾಖೆ ಮತ್ತು ಮೈಸೂರು ಸರಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಸಂಯುಕ್ತ ಆಶ್ರಯದಲ್ಲಿ ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ನಡೆಸಲಾದ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣಾ ಶಿಬಿರದ ಮೂಲಕ ಸುಮಾರು ರೂ.10 ಲಕ್ಷ ಮೌಲ್ಯದ ಅಯುರ್ವೇದ ಔಷಧಿಯನ್ನು 500ಕ್ಕೂ ಅಧಿಕ ಫಲಾನು ಭವಿಗಳಿಗೆ ವಿತರಿಸಲಾಗಿದೆ ಎಂದು ಮೈಸೂರು ಸರ್ಕಾರಿ ಅಯುರ್ವೇದ ವೈದ್ಯಕೀಯ ಕಾಲೇಜು ಕಾಯ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಮೈತ್ರೇಯಿ ತಿಳಿಸಿದ್ದಾರೆ.
ಸರ್ಕಾರದ ಎಸ್.ಸಿ.ಪಿ/ಟಿ.ಎಸ್.ಪಿ ಯೋಜನೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳೂ ಒಳ ಗೊಂಡಂತೆ ಆರ್ಥಿಕವಾಗಿ ದುರ್ಬ ಲವಾಗಿರುವ ಕುಟುಂಬಗಳಿಗೆ ತಲಾ ರೂ.2,000 ಅಂದಾಜು ವೆಚ್ಚದ ಕಿಟ್ ವಿತರಿಸಲಾಗಿದ್ದು, ಸುಮಾರು 1 ತಿಂಗಳ ಔಷಧಿ ಒಳಗೊಂಡಿದೆ ಎಂದು ಹೇಳಿದರು.
ಕೊಡಗು ಜಿಲ್ಲೆಯ ಪಾಲಿಬೆಟ್ಟ, ನಿಟ್ಟೂರು, ಕಾರ್ಮಾಡು, ಕೊಲ್ಲಿಹಾಡಿ, ತಟ್ಟೆಕೆರೆ, ವಡ್ಡರಮಾಡು, ಮಲ್ಲೂರು, ಪಾಲದಳ್ಳ ಕಟ್ಟೆ ಕಾಲೋನಿ, ಕುಂಬಾರಕಟ್ಟೆ ಕಾಲೋನಿಯ ನಿವಾಸಿಗಳಿಗೆ ಸುಮಾರು 16 ವಿಧದ ಔಷಧಿಯಲ್ಲಿ ಆರೋಗ್ಯ ತಪಾಸಣೆ ನಡೆಸಿ ಅಗತ್ಯವಿರುವ ಔಷಧವನ್ನು ವಿತರಿಸಲಾಯಿತು ಎಂದು ಹೇಳಿದರು.
ವಿವಿಧ ಚರ್ಮ ರೋಗ( ಇಸುಬು ಇತ್ಯಾದಿ)ಗಳಿಗೆ ಬಳಸುವ ಮರೀಚ್ಯಾದಿ ತೈಲ, ಸೊಂಟ ನೋವು, ಸಂಧಿ ನೋವು ಇತ್ಯಾದಿಗಳಿಗೆ ಅಭ್ಯಂಗಕ್ಕೆ ಬಳಸುವ ವಿಷಗರ್ಭ ತೈಲ, ಮುಪ್ಪಿನಲ್ಲಿ ಬರುವ ನೋವುಗಳಿಗೆ ಬಳಸುವ ಕ್ಷೀರಬಲಾ ತೈಲ, ಜ್ವರ, ನೆಗಡಿ, ಅಜೀರ್ಣಕ್ಕೆ ಸಂಬಂದಿಸಿದ ತ್ರಿಭುವನ ಕೀರ್ತಿ ರಸ, ಮಧುಮೇಹ ಬಳಸುವ ಚಂದ್ರಪ್ರಭಾವಟಿ, ವಾತರಕ್ತ ಇತ್ಯಾದಿಗಳಿಗೆ ಬಳಸುವ ಅಮೃತಾದಿ ಗುಗ್ಗುಳು, ಕೆಮ್ಮು, ಉಬ್ಬಸ,ಶ್ವಾಸಕೋಶ ಸಂಬಂದಿ ಕಾಯಿಲೆಗಳಿಗೆ ಬಳಸುವ ವಾಸಾವಲೇಹ, ಮಲಬದ್ಧತೆ, ಹಸಿವು ಹೆಚ್ಚಿಸಲು ದ್ರಾûಾವಲೇಹ, ರಕ್ತ ಹೀನತೆ, ನರ ದೌರ್ಬಲ್ಯಕ್ಕಾಗಿ ನಾವಾಯಸ ಲೋಹ, ಮೈಗ್ರೇನ್ ಹೊಟ್ಟೆ ಉರಿ ಇತ್ಯಾದಿಗಳಿಗೆ ಲಘು ಸೂತಶೇಖರ ರಸ ಒಳಗೊಂಡಂತೆ ಸುಮಾರು 16 ಬಗೆಯ ಔಷಧಿಗಳನ್ನು ವಿತರಿಸಲಾಯಿತು.
ನಿಟ್ಟೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಜರು ಗಿದ ಆರೋಗ್ಯ ಶಿಬಿರವನ್ನು ಅಧ್ಯಕ್ಷೆ ಕಾಡ್ಯಮಾಡ ಅನಿತಾ ಉದ್ಘಾಟಿಸಿದರು. ಡಾ.ಆಶಾ, ಡಾ.ಪ್ರಫುಲ್ಲಾ, ಡಾ. ರಾಮಲಿಂಗ ಊಗಾರ್ ಒಳಗೊಂಡಂತೆ ಸುಮಾರು 10 ಮಂದಿ ವೈದ್ಯರು ಆರೋಗ್ಯ ತಪಾಸಣೆ ನಡೆಸಿದರು. ಕಾರ್ಮಾಡು ಗಿರಿಜನ ಬಾಲಕಿಯರ ನಿಲಯ, ಕಾರ್ಮಾಡು ಸರ್ಕಾರಿ ಪ್ರಾಥಮಿಕ ಶಾಲೆ, ಪರಿಶಿಷ್ಟ ವರ್ಗಗಳ ವಸತಿ ಶಾಲೆ, ತಟ್ಟೆಕೆರೆ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಗೂ ಆರೋಗ್ಯ ತಪಾಸಣೆ ನಡೆಸಿ ಔಷಧ ವಿತರಿಸಲಾಯಿತು.
ನೋಡಲ್ ಅಧಿಕಾರಿ ಡಾ.ರಾಧಾ ಕೃಷ್ಣ ರಾಮರಾವ್ ಮೈಸೂರು ಆಯು ರ್ವೇದ ವೈದ್ಯಕೀಯ ವಿದ್ಯಾಲಯದ ತಂಡದ ಯಶಸ್ಸಿನಲ್ಲಿ ಟಿ.ಎಲ್.ಶ್ರೀನಿವಾಸ್, ಚೆಕ್ಕೇರ ಸೂರ್ಯ ಅಯ್ಯಪ್ಪ, ಕಾಟಿಮಾಡ ಶರೀನ್ ಮುತ್ತಣ್ಣ, ನಿಟ್ಟೂರು ಗ್ರಾ.ಪಂ.ಉಪಾಧ್ಯಕ್ಷ ಪವನ್ ಚಿಟ್ಟಿಯಪ್ಪ ಮುಂತಾದವರು ಸಹಕಾರ ನೀಡಿದರು.