Advertisement

ಕ್ರೀಡೆಯಿಂದ ಆರೋಗ್ಯ ವೃದಿ ಸಾಧ್ಯ: ಶಕುಂತಳಾ ಟಿ. ಶೆಟ್ಟಿ 

04:26 PM Nov 04, 2017 | Team Udayavani |

ಕೊಂಬೆಟ್ಟು: ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿಯಿಂದ ತೊಡಗಿದರೆ ಸಾಧನೆಯ ಜತೆಗೆ ಆರೋಗ್ಯ ಹಾಗೂ ಮಾನಸಿಕ ವೃದ್ಧಿ ಸಾಧ್ಯವಿದೆ ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.

Advertisement

ಕಬಕ ಪ.ಪೂ.ಕಾಲೇಜು ಆಶ್ರಯದಲ್ಲಿ ನಗರದ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆದ ತಾ| ಮಟ್ಟದ ಪ.ಪೂ.ಕಾಲೇಜು ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಕ್ರೀಡೆಯ ಆಸಕ್ತಿ ಅಗತ್ಯ
ಪ್ರತಿ ಸ್ಪರ್ಧೆಯಲ್ಲಿ ಸ್ಪರ್ಧೆಯ ಮನೋಭಾವನೆ ಇರುತ್ತದೆ. ಸೋಲು- ಗೆಲ್ಲುವುದಕ್ಕಿಂತಲೂ ಜೀವನಕ್ಕೆ ಪೂರಕ ವಾಗುವ ಅನೇಕ ವಿಚಾರಗಳು ಕ್ರೀಡೆಯಲ್ಲಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಜತೆಗೆ ಕ್ರೀಡೆಯಲ್ಲೂ ಸಾಧನೆ ತೋರಬೇಕು ಎಂದು ಅವರು ಹೇಳಿದರು.

 ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ಉದ್ಘಾಟಿಸಿ, ಮಾತನಾಡಿ‌ ಕ್ರೀಡೆಯಲ್ಲಿ ಆಸಕ್ತಿ, ಏಕಾಗ್ರತೆ ಮಹತ್ವದಾಗಿದೆ. ಸತತ ಅಭ್ಯಾಸದಿಂದ ಕ್ರೀಡಾಪಟುವಿನಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಆಟಗಾರ ಯೋಚನ ಶಕ್ತಿ, ಸಮಯ ಪ್ರಜ್ಞೆ ಮತ್ತು ಎದೆಗುಂದದೆ ಪರಿಸ್ಥಿತಿಯನ್ನು ಎದುರಿಸುವ ಮನೋಭಾವ ಇದ್ದರೆ ಯಶಸ್ಸು ಪಡೆಯಬಹುದು.

ಗೆಲುವಿಗಿಂತ ಮೇಲು
ಸೋಲು ಮತ್ತು ಗೆಲುವು ಕಟ್ಟಿಟ್ಟ ಬುತ್ತಿ ಎನ್ನುವುದು ಆಟಗಾರನಿಗೆ ತಿಳಿದಿರುವ ಸಂಗತಿ. ಪ್ರಾಮಾಣಿಕತೆಯಿಂದ ಆಡಿದರೆ ಸಿಗುವ ಗೌರವ, ಮನ್ನಣೆ, ಗೆಲುವಿಗಿಂತ ಮೇಲು ಎನ್ನುವುದನ್ನು ಪ್ರತಿಯೊಬ್ಬರು, ಮಾರ್ಗದರ್ಶನ ಸಿಕ್ಕಿದರೆ ಉತ್ತಮ ಕ್ರೀಡಾಪಟುಗಳಾಗುವುದರಲ್ಲಿ ಸಂಶಯವಿಲ್ಲ ಎಂದರು.

Advertisement

 ತಾಲೂಕು ಪಂಚಾಯತ್‌ ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ, ಸರಿಯಾದ ಕ್ರೀಡಾಂಗಣ ವ್ಯವಸ್ಥೆಯ ಕ್ರೀಡಾ ಪ್ರತಿಭೆಗಳಿಗೆ ಸಿಗಬೇಕು. ಪುತ್ತೂರಿನ ಅಭಿವೃದ್ಧಿಯಲ್ಲಿ ತಾಲೂಕು ಕ್ರೀಡಾಂಗಣವೂ ಸೇರಿಕೊಂಡಿದೆ. ಉತ್ತಮ ಕ್ರೀಡಾಂಗಣ ದೊರಕಿದರೆ ಅದರಿಂದ ಕ್ರೀಡಾಪಟುವಿಗೆ ಯಶಸ್ಸು ದೊರೆಯಲು ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ತಾ| ದೈಹಿಕ ಶಿಕ್ಷಣ ಪರಿವೀಕ್ಷಾಣ ಅಧಿಕಾರಿ ಸುಂದರ ಗೌಡ, ಕಬಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೇಮಲತಾ ಎಂ. ಉಪಸ್ಥಿತರಿದ್ದರು. ಕಬಕ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳಾದ ಶ್ರೀನಿಧಿ, ರಂಸೀನಾ, ಸುಮಯ್ನಾ ಪ್ರಾರ್ಥಿಸಿದರು. ಧರ್ಣಪ್ಪ ಗೌಡ ಸ್ವಾಗತಿಸಿ, ವೆಂಕಟರಮಣ ಭಟ್‌ ವಂದಿಸಿದರು. ಉಪನ್ಯಾಸಕ ಗೋಪಾಲ ಗೌಡ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next