Advertisement
ಆದ ಕಾರಣವೇ ಹಲವು ರೋಗ ರುಜಿನಗಳಿಗೆ ಮದ್ದಾಗಿ ಬಳಸಲಾಗುತ್ತದೆ ಹಾಗಲಕಾಯಿ. ಕುಕುರ್ಬಿಟಿ ಏಸಿಯಾ ಎನ್ನುವ ಬೊಟಾನಿಕಲ್ ಕುಟುಂಬಕ್ಕೆ ಸೇರಿದ ಈ ತರಕಾರಿ ಕಲ್ಲಂಗಡಿ ಹಣ್ಣಿನ ಜಾತಿಗೆ ಸೇರುವಂಥದ್ದು. ಇದರ ವೈಜ್ಞಾನಿಕ ಹೆಸರು ಮೊಮರ್ಡಿಕಾ ಚರಂಟಿಯ . ಕಲ್ಲಂಗಡಿ ಎಷ್ಟು ಸಿಹಿಯಲ್ಲವೇ, ಅಷ್ಟೇ ಕಹಿ ಈ ಹಾಗಲಕಾಯಿ. ಒಂದೇ ಕುಟುಂಬದವರಾಗಿದ್ದರೂ ತದ್ವಿರುದ್ಧವಾದ ಗುಣ. ಇದರ ಆರೋಗ್ಯಕರ ಗುಣಗಳು ಹಾಗಲಕಾಯಿಯಲ್ಲಿ ಕ್ಯಾಲರಿ ಅಂಶ ಕಡಿಮೆ ಪ್ರಮಾಣದಲ್ಲಿದ್ದು, ನಾರಿನಂಶ , ಖನಿಜಾಂಶ , ವಿಟಮಿನ್ ಮತ್ತು ಆ್ಯಂಟಿಆಕ್ಸಿಡೆಂಟ್ ಅಪಾರ ಪ್ರಮಾಣದಲ್ಲಿ ಲಭ್ಯವಿದೆ.
Related Articles
Advertisement
ಇಂಥ ಸಂದರ್ಭದಲ್ಲಿ ಹಾಗಲಕಾಯಿಯ ಎಲೆಗಳನ್ನು ಸ್ವಲ್ಪ ಹಸಿಮೆಣಸಿನೊಂದಿಗೆ ಅರೆದು ಬೆಟ್ಟದ ನೆಲ್ಲಿಕಾಯಿಯಷ್ಟು ಉಂಡೆ ಮಾಡಿ ಸೇವಿಸಿದರೆ ಹೊಟ್ಟೆಯಲ್ಲಿರುವ ಹುಳುಗಳೆಲ್ಲ ಸಾಯುತ್ತವೆ. ಇತ್ತೀಚೆಗೆ ನಡೆದ ಇದರ ಬಗೆಗಿನ ಪ್ರಾಥಮಿಕ ಸಂಶೋಧನೆಯಲ್ಲಿ ಇದರಲ್ಲಿರುವ ಪೈಟೋ ಕೆಮಿಕಲ್ ಕಂಪೌಂಡ್ ಎನ್ನವ ಅಂಶ ಎಚ್. ಐ. ವಿ. ಕಾಯಿಲೆಗೂ ಮದ್ದಾಗುತ್ತದೆ ಎಂದು ತಿಳಿದು ಬಂದಿದೆ. ಹಾಗಲಕಾಯಿ ರಸವನ್ನು ಸೇವಿಸುವುದರಿಂದ ರಕ್ತ ಶುದ್ಧಿಗೊಂಡು ತುರಿಕೆಯಂಥ ತೊಂದರೆ ನಿವಾರಣೆಯಾಗುತ್ತದೆ.
ಇದರಲ್ಲಿರುವ ಕಿಣ್ವಗಳು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವುದರಿಂದ, ಕ್ಯಾನ್ಸರ್ ಸೆಲ್ ಗಳ ಬೆಳವಣಿಗೆಯನ್ನು ತಡೆಯಬಲ್ಲದು. ಕಾಲರಾ ಆರಂಭದ ಹಂತದಲ್ಲಿದ್ದರೆ, ಹಾಗಲಕಾಯಿ ಎಲೆಯ ರಸವನ್ನು (ಎರಡು ಚಮಚ) ಎರಡು ಚಮಚ ಬಿಳಿ ಈರುಳ್ಳಿ ರಸ ಹಾಗೂ ಒಂದು ಚಮಚ ನಿಂಬೆ ರಸದೊಂದಿಗೆ ಸೇವಿಸುವ ಪದ್ಧತಿ ಇದೆ. ನಿತ್ಯವೂ ಹಾಗಲಕಾಯಿ ರಸವನ್ನು ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಮತ್ತು ಸಾಮರ್ಥ್ಯ ಹೆಚ್ಚಲಿದೆ. ಕಣ್ಣಿನ ದೃಷ್ಟಿ ದೋಷಕ್ಕೆ ಸಂಬಂಧಿಸಿದ ಕೆಲವು ತೊಂದರೆಗಳಿಗೂ ಇದು ಔಷಧವಾಗಬಲ್ಲದು. ಇದಲ್ಲದೇ, ಇನ್ನೂ ಹತ್ತು ಹಲವು ಕಾಯಿಲೆಗಳಿಗೆ ಹಾಗಲಕಾಯಿ ರಾಮಬಾಣ. ಅದರ ಎಲೆಯಿಂದ ಹಿಡಿದು ಕಾಯಿಯವರೆಗೂ ಬಳಕೆಗೆ ಬರುವಂಥದ್ದು.