Advertisement

ವಿಮಾನಗಳಲ್ಲಿ ಒಬ್ಬರಿಗೆ ಒಂದೇ ಬ್ಯಾಗ್‌

12:26 AM Jan 22, 2022 | Team Udayavani |

ಹೊಸದಿಲ್ಲಿ: ಇನ್ನು ಮುಂದೆ ದೇಶೀಯ ವಿಮಾನಗಳಲ್ಲಿ ಪ್ರಯಾಣಿಸುವವರು 1 ಹ್ಯಾಂಡ್‌ ಬ್ಯಾಗ್‌ ಮಾತ್ರ ತೆಗೆದುಕೊಂಡು ಹೋಗಬಹುದು. ನಾಗ ರಿಕ ವಿಮಾನಯಾನ ಸುರಕ್ಷತ ಬ್ಯೂರೋ  (ಬಿಸಿಎಎಸ್‌) ಹೊಸ ನಿಯಮ ಜಾರಿಗೊಳಿಸಿದೆ.

Advertisement

ಒಬ್ಬ ವ್ಯಕ್ತಿ ಒಂದೇ ಹ್ಯಾಂಡ್‌ ಬ್ಯಾಗ್‌ ತರಬಹುದು. ಪ್ರಯಾಣಿಕರು ಒಂದಕ್ಕಿಂತ ಹೆಚ್ಚು ಬ್ಯಾಗ್‌ ತರದಂತೆ ಏರ್‌ಲೈನ್‌ಗಳು ನೋಡಿಕೊಳ್ಳಬೇಕು. ಟಿಕೆಟ್‌ಗಳಲ್ಲಿ ಈ ಬಗ್ಗೆ ಮಾಹಿತಿ ಕೊಡಬೇಕು. ಏರ್‌ಪೋರ್ಟ್‌ ನಲ್ಲೂ ಈ ಬಗ್ಗೆ ಮಾಹಿತಿ ಕೊಡಬೇಕು.

ಏರ್‌ಪೋರ್ಟ್‌ನಲ್ಲಿ ಬ್ಯಾಗ್‌ ಪರಿಶೀಲನೆಗೇ ಹೆಚ್ಚು ಸಮಯ ವ್ಯರ್ಥವಾಗುತ್ತಿರುವ ಹಾಗೂ ಸುರಕ್ಷತ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ:ದೇಶ ಕಟ್ಟುವುದು ದಿಲ್ಲಿಗೆ ಮಾತ್ರ ಸೀಮಿತವಾಗಿತ್ತು: ಪ್ರಧಾನಿ ಮೋದಿ

ಆದರೆ ಈಗಾಗಲೇ ಇರುವ ನಿಯಮಗಳ ಪ್ರಕಾರ, ಮಹಿಳೆಯರ ಹ್ಯಾಂಡ್‌ ಬ್ಯಾಗ್‌, ಲ್ಯಾಪ್‌ಟಾಪ್‌ ಬ್ಯಾಗ್‌ ಸೇರಿ ಹಲವು ರೀತಿಯ ಬ್ಯಾಗ್‌ಗಳಿಗೆ ಅನುಮತಿ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next