Advertisement

ಕುಷ್ಟಗಿ: ತನ್ನ ಒಂದು ತಿಂಗಳ ವೇತನವನ್ನು ಶಾಲೆಯ ಅಭಿವೃದ್ಧಿಗೆ ನೀಡಿ ಮಾದರಿಯಾದ ಮುಖ್ಯ ಶಿಕ್ಷಕ

04:43 PM Jul 18, 2022 | Team Udayavani |

ಕುಷ್ಟಗಿ: ತಾಲೂಕಿನ ಮದ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶರಣಪ್ಪ ತುಮರಿಕೊಪ್ಪ ಅವರು ತಾವು ಸೇವೆಯಲ್ಲಿರುವ ಶಾಲೆಯ ಅಭಿವೃದ್ಧಿಗೆ ಗ್ರಾಮಸ್ಥರ ಸಮ್ಮುಖದಲ್ಲಿ  ತಮ್ಮ ಒಂದು ತಿಂಗಳ ವೇತನ 32 ಸಾವಿರ ರೂ. ಮೊತ್ತದ ಚಕ್ ನ್ನು ಶಾಲೆಯ ಸುಣ್ಣ ಬಣ್ಣ ಮತ್ತು ಸ್ಮಾರ್ಟ್ ಕ್ಲಾಸ್ ನಿರ್ಮಾಣಕ್ಕಾಗಿ ಸ್ವಯಂ ಪ್ರೇರಣೆಯಿಂದ  ನೀಡಿರುವುದು ಮಾದರಿಯಾಗಿದೆ.

Advertisement

ಅವರು ಸಿಆರ್ ಪಿ ಸೇವೆಯಲ್ಲಿ ಲಿಂಗದಳ್ಳಿ, ಹುಲಿಯಾಪುರ, ಮೆಣೆದಾಳ, ಎಂ. ರಾಂಪೂರ, ಹಿರೇಮುಕರ್ತಿನಾಳ, ಸಂಗನಾಳ, ವೀರಾಪೂರ,  ಹಿರೇತೆಮ್ಮಿನಾಳ, ಸಿದ್ದಾಪುರ, ಶಾಲೆಗಳಿಗೆ ಗ್ರಾಮಸ್ಥರ ವಂತಿಗೆ ಹಾಗೂ ಶಿಕ್ಷಕರ ವಂತಿಗೆಯ ಸಹಕಾರದಿಂದ ಸದರಿ ಶಾಲೆಗಳು ಸ್ವಂತ ಸ್ಮಾರ್ಟ್ ಕ್ಲಾಸ್‌ ಹೊಂದಲು ಪ್ರೇರಣೆಯಾಗಿದ್ದು ಹೊಮ್ಮಿನಾಳ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕಾರ್ಯ ಪ್ರಗತಿಯಲ್ಲಿದೆ.

ಮುಖ್ಯ ಶಿಕ್ಷಕ ಶರಣಪ್ಪ ತುಮರಿಕೊಪ್ಪ ಪ್ರತಿಕ್ರಿಯಿಸಿ, ಗ್ರಾಮೀಣ ಪ್ರದೇಶದ ಶಾಲೆಗಳ ಮಕ್ಕಳಿಗೆ ಈಗಿನ ಅಧುನಿಕ ಶಿಕ್ಷಣ ಕಾಲ್ಪನಿಕ ಆಗದೇ ಪ್ರಾಯೋಗಿಕ ಕಾರ್ಯರೂಪವೇ ಸ್ಮಾರ್ಟ್ ಕ್ಲಾಸ್‌ ಆಗಿದೆ. ಮಕ್ಕಳು ಸುಲಭವಾಗಿ ಗ್ರಹಿಸಲು ಸಾಧ್ಯವಿದ್ದು ಶಾಲೆಗೆ ಗೈರು ಆಗುವುದನ್ನು ತಪ್ಪಿಸುವ ಸಾದ್ಯತೆಗಳಿವೆ.ಸ್ಮಾರ್ಟ್ ಕ್ಲಾಸ್ ನಲ್ಲಿ ಪರದೆಯ ಮೇಲೆ ನೋಡಿರುವುದನ್ನು ಸುಲಭವಾಗಿ ನೆನಪಿಟ್ಟುಕೊಳ್ಳಬಹುದಾಗಿದೆ. ಗ್ರಾಮಸ್ಥರ ಸಹಕಾರದಿಂದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಯಶಸ್ವಿಯಾಗಿ ರಚಿಸಲು ಸಾಧ್ಯವಾಗಿದೆ ಎಂದರು.

ಇದನ್ನೂ ಓದಿ: ಟಾಟಾ ಮಾರ್ಕೊಪೋಲೊ ಮೋಟಾರ್ಸ್ ಬಿಕ್ಕಟ್ಟು ಬಹುತೇಕ ಇತ್ಯರ್ಥ

ಈ ಸಂದರ್ಭದಲ್ಲಿ ಬಿ ಆರ್ ಪಿ ಜೀವನ್ ಸಾಬ್ ವಾಲಿಕಾರ್ ಮಾತನಾಡಿ, ಶಾಲೆಯು ಇಡೀ ಗ್ರಾಮದ ಬಹು ಅಮೂಲ್ಯವಾದ ಆಸ್ತಿ , ಜೀವಂತ ದೇವರುಗಳು ಇರುವ ಪೂಜ್ಯನೀಯ ಸ್ಥಳ  ಅಂತ ಶಾಲೆಯ  ಅಭಿವೃದ್ಧಿಪಡಿಸುವುದು, ಶಾಲಾ ವಸ್ತುಗಳನ್ನು ಸಂರಕ್ಷಿಸುವುದು ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಶಾಲಾ ಬಿಟ್ಟ ಮಕ್ಕಳನ್ನು ಶಾಲೆಗೆ ಮರಳಿ ಕರೆತಂದು ಸರ್ವರಿಗೂ ಗುಣಮಟ್ಟದ  ಶಿಕ್ಷಣ ದೊರಕಿಸುವಲ್ಲಿ ಎಸ್ಡಿಎಂಸಿ ಮತ್ತು ಗ್ರಾಮದ ಗುರುಹಿರಿಯರ ಪಾತ್ರ ಸ್ಮರಣೆ ಎಂದರು.

Advertisement

ಈ ಹಿನ್ನೆಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿಗಾಗಿ ಒಂದು ತಿಂಗಳ ವೇತನ ನೀಡಿದ   ಮುಖ್ಯ ಶಿಕ್ಷಕರಾದ  ಶರಣಪ್ಪ ತುಮರಿಕೊಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ  ಅಧ್ಯಕ್ಷರಾದ ಮಿನಾಕ್ಷಿ ಉಮೇಶ್ ರಾಠೋಡ್ ಸದಸ್ಯರಾದ  ಬಂಗಾರಪ್ಪ ಶಿವಲಿಂಗಪ್ಪ ಪೂಜಾರ್, ದೇವೇಂದ್ರಪ್ಪ ಕಾರೆ , ನಿರ್ಮಲ ಚಿದಾನಂದಪ್ಪ ಹೂಗಾರ್ , ಗ್ರಾಮದ ಹಿರಿಯರಾದ ಮಾಸಪ್ಪ ಕಬ್ಬರಗಿ ,ಶಿವನಗೌಡ ಪೊಲೀಸ್ ಪಾಟೀಲ್, ವಿರುಪಾಕ್ಷಪ್ಪ ಹುನಗುಂದ, ಹನುಮಪ್ಪ ಹರಿಜನ್, ಪಾಲಕ ಪೋಷಕರು ಶಾಲಾ ಶಿಕ್ಷಕರಾದ  ರಾಮಣ್ಣ ಮೇಟಿ, ಅಶೋಕ ಕಟ್ಟಿಮನಿ ಶಿವ ಲೀಲಾ ಹೂಗಾರ ಇದ್ದರು.

ಸದ್ದಿಲ್ಲದ ಸ್ಮಾರ್ಟ್ ಕ್ರಾಂತಿ‌ :

ಈ ಬೆಳವಣಿಗೆ ಹಿನ್ನೆಲೆಯಲ್ಲಿ ತಾಲೂಕಿನ ಪ್ರತಿ ಶಾಲೆ ಸ್ಮಾರ್ಟ್ ಕ್ಲಾಸ್‌ ಹೊಂದಬೇಕೆನ್ನುವ ಸದ್ದಿಲ್ಲದ ಕ್ರಾಂತಿ ಕುಷ್ಟಗಿಯಲ್ಲಿ ಶುರುವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ಉಳಿದ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‌ ಕೊಠಡಿ ಹೊಂದುವ ಯೋಜನೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಇಚ್ಛಾಶಕ್ತಿ ‌ಮೇರೆಗೆ ಚಾಲನೆ ಸಿಕ್ಕಿರುವುದು ಮಹತ್ವದ ಬೆಳವಣಿಗೆ ಆಗಿದೆ ಎನ್ನುವುದು ಇಲ್ಲಿ ಸ್ಮರಿಸಬಹುದಾಗಿದೆ

ಮಂಜುನಾಥ ಮಹಾಲಿಂಗಪುರ ಕುಷ್ಟಗಿ

Advertisement

Udayavani is now on Telegram. Click here to join our channel and stay updated with the latest news.

Next