Advertisement

ಮಗಳ ಮದುವೆಗೆ ಬನ್ನಿ: ಪ್ರಧಾನಿಗೆ ಪತ್ರ ಬರೆದು ಆಮಂತ್ರಣ ಕೊಟ್ಟ ತಂದೆ.!

11:02 AM Sep 10, 2019 | Team Udayavani |

ಚನ್ನೈ : ತನ್ನ ಮಗಳ ಮದುವೆ ಸಮಾರಂಭಕ್ಕೆ ಆಗಮಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಆಮಂತ್ರಣ ನೀಡಿದ ಘಟನೆ ತಮಿಳುನಾಡಿನ ವೆಲ್ಲೂರು ನಲ್ಲಿ ನಡೆದಿದೆ.

Advertisement

ತಮಿಳುನಾಡಿನ ಟಿ.ಎಸ್ ರಾಜಶೇಖರನ್ ಎನ್ನುವವರು ಇತ್ತೀಚೆಗಷ್ಟೆ ಸೆಪ್ಟೆಂಬರ್ 11 ರಂದು ನಡೆಯಲಿರುವ ತನ್ನ ಮಗಳು ರಾಜಶ್ರೀ ಮದುವೆ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪತ್ರ ಬರೆದು ಆಮಂತ್ರಣವನ್ನು ನೀಡಿದ್ದಾರೆ.ಇದೀಗ ರಾಜಶೇಖರನ್ ಬರೆದ ಪತ್ರಕ್ಕೆ ಸ್ವತಃ ಪ್ರಧಾನಿಯವರೇ ಪ್ರತಿಕ್ರಿಯೆ ಕೊಟ್ಟಿರುವುದು ವಿಶೇಷ.

ಪ್ರಧಾನಿ ಪತ್ರದಲ್ಲಿ “ ನಿಮ್ಮ ಮಗಳು ಡಾ.ರಾಜಶ್ರೀ ಮದುವೆ ಡಾ.ಸುದರ್ಶನ್ ಜೊತೆ ಆಗುತ್ತಿರುವುದು ಸಂತೋಷದ ವಿಷಯ.ಇಂಥ ಖುಷಿಯ ಸಮಾರಂಭದಲ್ಲಿ ನನ್ನನ್ನು ಆಹ್ವಾನ ಮಾಡಿದ್ದಕ್ಕೆ ಧನ್ಯವಾದಗಳು”. ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಪ್ರಧಾನಿ ಮದುವೆ ಸಮಾರಂಭದಲ್ಲಿ ತಮ್ಮ ಕೆಲಸದ ನಡುವೆ ಬರಲಾರರು ಎಂದು ತಿಳಿದಿರುವ ಕುಟುಂಬಕ್ಕೆ ಈಗ ಬಂದಿರುವ ಈ ಪತ್ರದ ಪ್ರತಿಕ್ರಿಯೆ ಮದುವೆ ಮನೆಯ ಸಂಭ್ರಮವನ್ನು ಹೆಚ್ಚಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next