ಮಂಗಳೂರು: ಅಪರಾಧ ಪ್ರಕರಣಗಳಲ್ಲಿ ವಿಚಾರಣೆಗೆ ಬೇಕಾಗಿದ್ದ ಕೇರಳದ ಕಣ್ಣೂರು ಜಿಲ್ಲೆ ಅಲಿಕೋಡೆ, ಪ್ಪಿನಿಸ್ಸೇರಿ, ಬೋಟ್ ಜಟ್ಟಿ ಹತ್ತಿರದ ಕೆ.ಕೆ. ಹೌಸ್ ನಿವಾಸಿ ಮಹಮ್ಮದ್ ಅಸ್ಗರ್ ಕರಿನ್ಕಲ್ಲನ್ (26)ನನ್ನು ಬುಧವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಎಚ್.ಎಂ. ಅವರ ನೇತೃತ್ವದ ತಂಡ ಕಲ್ಲಿಕೋಟೆ ವಿಮಾನ ನಿಲ್ದಾಣದಿಂದ ಅಪರಾಹ್ನ 3.30ಕ್ಕೆ ವಶಕ್ಕೆ ಪಡೆದು, ರಾತ್ರಿ ಮಂಗಳೂರಿಗೆ ಕರೆತಂದಿದ್ದಾರೆ. ಮಾದಕ ವಸ್ತು ಗಾಂಜಾ ವಸ್ತುವಿನ ಸಾಗಾಟ, ಮಾರಾಟ ಹಾಗೂ ಸೇವನೆ ಬಗ್ಗೆ ವಿಚಾರಿಸಿದಾಗ ಮಾ. 6ರಂದು ಮಂಗಳೂರು ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದ ಬಳಿಯಲ್ಲಿ ಗಾಂಜಾ ಪಡೆದು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದವ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ.