Advertisement

ದೇಶದ ಕಿರಿಯ ಐಪಿಎಸ್‌ ಆಧಿಕಾರಿ ಹಸನ್‌

05:50 PM Jul 22, 2020 | Karthik A |

ನಿಮ್ಮ ಗುರಿಯತ್ತ ದೃಢ ಸಂಕಲ್ಪ ಮತ್ತು ಸಮರ್ಪಿತ ಶ್ರಮ ಇದ್ದರೆ ನಿರೀಕ್ಷಿತ ಫ‌ಲಿತಾಂಶವನ್ನು ಪಡೆಯಬಹುದು ಇದಕ್ಕೆ ಹಸನ್‌ ಸಫಿನ್‌ ಅವರು ಒಂದು ಉತ್ತಮ ಉದಾಹರಣೆ. ಹಸನ್‌ ಸಫಿನ್‌ ಭಾರತದ ಕಿರಿಯ ಐಪಿಎಸ್‌ ಅಧಿಕಾರಿ.

Advertisement

ಸಾಧಿಸುವ ಹಂಬಲ ಎಲ್ಲರಲ್ಲೂ ಇರುತ್ತೆ. ಅದಕ್ಕೆ ಬೇಕಾಗುವ ಪರಿಶ್ರಮ, ಕಠಿನ ಪ್ರಯತ್ನ ಎಲ್ಲರೂ ಮಾಡುವುದಿಲ್ಲ. ಭಾರತದಲ್ಲಿ ಲಕ್ಷಾಂತರ ಮಂದಿ ಲೋಕಾ ಸೇವಾ ಆಯೋಗ ನಡೆಸುವ ಪರೀಕ್ಷೆ ಬರೆಯುತ್ತಾರೆ. ಇದರಲ್ಲಿ ತೇರ್ಗಡೆ ಹೊಂದುವವರು ಕೆಲವೇ ಮಂದಿ. ಅದರಲ್ಲೂ 25 ವಯಸ್ಸಿನ ಮೇಲಿನವರು ಅಧಿಕಾರಿಗಳಾಗುವ ಸಾಧ್ಯತೆ ತೀರಾ ವಿರಳ.

ಆದರೆ ಭಾರತ ಅತೀ ಕಿರಿಯ ಐಪಿಎಸ್‌ ಅಧಿಕಾರಿ ಹಸನ್‌ ಸಫಿನ್‌ ಇವರಿಗೆಲ್ಲ ಸ್ಫೂರ್ತಿ. 2018ರಲ್ಲಿ ನಡೆದ ಲೋಕಾ ಸೇವಾ ಆಯೋಗ ಪರೀಕ್ಷೆಯಲ್ಲಿ 570 ಶ್ರೇಯಾಂಕದೊಂದಿಗೆ ಪಾಸಾಗುವ ಮೂಲಕ 22 ಹರೆಯದ ಹಸನ್‌ ಸಫಿನ್‌ ಭಾರತದ ಅತ್ಯಂತ ಕಿರಿಯ ಅಧಿಕಾರಿ ಎಂದೆನಿಸಿಕೊಳ್ಳುತ್ತಾರೆ.

2019ರ ಡಿಸೆಂಬರ್‌ 23ರಂದು ಗುಜರಾತ್‌ನ ಜಮ್ನಗರ ಜಿಲ್ಲೆಯ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಅಧಿಕಾರಿ ವಹಿಸಿಕೊಳ್ಳುತ್ತಾರೆ. ಹಸನ್‌ ಗುಜರಾತ್‌ನ ಸಣ್ಣ ಹಳ್ಳಿ ಕನೋದರ್‌ ಅವರು ಇವರ ತಂದೆ ಮುಸ್ತಫಾ ಗಣಿಯಲ್ಲಿ ಕೂಲಿಯಾಗಿ ಹಾಗೂ ತಾಯಿ ನಸೀಂ ಬಾನು ಮನೆಕೆಲಸಕ್ಕೆ ಮಾಡಿ ಮಗನ ಜೀವನ ರೂಪಿಸಿದ್ದಾರೆ. ಇಂತಹ ಬಡಕುಟುಂಬದಿಂದ ಬಂದ ಹಸನ್‌ಗೆ ಬಾಲ್ಯದಲ್ಲಿ ನಡೆದ ಘಟನೆ ಐಪಿಎಸ್‌ ಅಧಿಕಾರಿಯಾಗಲು ಸ್ಫೂರ್ತಿ.

ಬಾಲ್ಯದಲ್ಲಿರುವಾಗ ಇವರ ಹಳ್ಳಿಗೆ ಬಂದ ಜಿಲ್ಲಾಧಿಕಾರಿ ಊರಿನವರ ಸಮಸ್ಯೆಗಳನ್ನು ಆಲಿಸುತ್ತಿದನ್ನು ನೋಡಿ ಹಸನ್‌ಗೆ ತಾನು ಅವರಂತೆ ಆಗಬೇಕೆಂಬ ಹಂಬಲ ಉಂಟಾಗಿತ್ತು.

Advertisement

ಹಸನ್‌ ಸಾಧನೆ ಬಗ್ಗೆ ಹೇಳುವಾಗ ತನಗೆ ನೇರವಾದ ಸ್ನೇಹಿತರು, ಶಿಕ್ಷಕರು, ಮನೆಯವರು ಎಲ್ಲರನ್ನೂ ನೆನೆಯುತ್ತಾರೆ. ದಿಲ್ಲಿಯಲ್ಲಿ ಕೋಚಿಂಗ್‌ ಮಾಡುತ್ತಿರುವ ಇವರ ಹೈಸ್ಕೂಲ್‌ ಪ್ರಾಶುಂಪಾಲರು 80 ಸಾವಿರ ಹಣವನ್ನು ನೀಡಿದನ್ನು ಸ್ಮರಿಸುತ್ತಾರೆ. ಬಾಲ್ಯದಲ್ಲೇ ಇವರು ಬುದ್ದಿವಂತ ವಿದ್ಯಾರ್ಥಿಯಾಗಿದ್ದರು. ವಿಶೇಷವೆಂದರೆ ಹಸನ್‌ ಅವರು ತನ್ನ ಎರಡನೇ ಪ್ರಯತ್ನದಲ್ಲಿ ಪಾಸಾಗಿದ್ದಾರೆ. ಇವರಿಗೆ ಐಎಎಸ್‌ ಆಧಿಕಾರಿ ಆಗಬೇಕೆಂಬ ಆಸೆ ಇತ್ತಂತೆ. ಇದಕ್ಕಾಗಿ ಮತ್ತೂಮ್ಮೆ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ.

ಕಡು ಬಡತನದಲ್ಲಿಯೇ ವಿಶ್ವದ ಕಠಿನ ಪರೀಕ್ಷೆಗಳಲ್ಲಿ ಒಂದಾದ ಲೋಕಾಸೇವಾ ಪರೀಕ್ಷೆಯನ್ನು ಎರಡನೆ ಪ್ರಯತ್ನದಲ್ಲಿ ಉತ್ತೀರ್ಣಗೊಳಿಸಿರುವುದು ಸುಲಭ ಮಾತಲ್ಲ. ಇಂತಹ ಸಾಧನೆ ಎಲ್ಲ ಯುವಜನತೆಗೂ ಸ್ಫೂರ್ತಿಯೆ ಸರಿ.

ಧನ್ಯಾಶ್ರೀ ಬೋಳಿಯಾರ್‌

 

 

 

Advertisement

Udayavani is now on Telegram. Click here to join our channel and stay updated with the latest news.

Next