Advertisement
ಏನಿದು ಪ್ರಕರಣ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ಮೈದುನನೊಬ್ಬ ತನ್ನ ಅತ್ತಿಗೆಯನ್ನೇ ಕೊಲೆಗೈದಿದ್ದಾನೆ. ಇದಾದ ಬಳಿಕ ಮೃತ ದೇಹವನ್ನು ವಿಲೇವಾರಿ ಮಾಡಲು ವಾಹನ ಬೇಕಾಗಿರುವುದರಿಂದ ಓಲಾ ಕ್ಯಾಬ್ ಬುಕ್ ಮಾಡಿದ್ದಾನೆ. ಕಾರು ಬುಕ್ ಮಾಡಿದ ಜಾಗಕ್ಕೆ ಓಲಾ ಕಾರು ಬಂದಿದೆ ಈ ವೇಳೆ ಆರೋಪಿ ಮೈದುನ ತನ್ನ ಅತ್ತಿಗೆಯ ಮೃತ ದೇಹವನ್ನು ಒಂದು ಗೋಣಿ ಚೀಲದಲ್ಲಿ ತುಂಬಿಸಿ ಕಾರಿನಲ್ಲಿ ಸಾಗಿಸುವ ಯೋಚನೆ ಮಾಡಿದ್ದಾನೆ ಅದರಂತೆ ಕಾರು ಬರುವ ಮೊದಲು ತನ್ನ ಇನ್ನೋರ್ವ ಸಂಬಂಧಿಯ ಜೊತೆಗೂಡಿ ಮೃತದೇಹವನ್ನು ಚೀಲಕ್ಕೆ ತುಂಬಿಸಿ ವಿಲೇವಾರಿಗೆ ತಯಾರು ಮಾಡಿ ಇಟ್ಟಿದ್ದಾರೆ. ಕಾರು ಚಾಲಕ ಬಂದ ವೇಳೆ ಕಾರಿನ ಡಿಕ್ಕಿ ತೆರೆದು ಅದರೊಳಗೆ ಮೃತದೇಹವಿದ್ದ ಚೀಲವನ್ನು ತುಂಬಿಸಿದ್ದಾನೆ ಇದನ್ನು ಕಂಡ ಚಾಲಕನಿಗೆ ಏನೋ ಅನುಮಾನವಾಗಿದೆ ಅಲ್ಲದೆ ಇಬ್ಬರೂ ಯುವಕರ ಮುಖದಲ್ಲಿ ಬೆವರು ಸುರಿಯುತ್ತಿತ್ತು ಅಲ್ಲದೆ ಗಾಬರಿಗೊಂಡಿದ್ದರು, ಅಷ್ಟರಲ್ಲೇ ಚಾಲಕನಿಗೆ ಡಿಕ್ಕಿಗೆ ತುಂಬಿಸಿದ ಚೀಲದಲ್ಲಿ ರಕ್ತದ ಕಲೆ ಕಾಣಿಸಿದೆ. ಇದರಿಂದ ಎಚ್ಚೆತ್ತುಕೊಂಡ ಚಾಲಕ ಬಾಡಿಗೆಯನ್ನು ಆಪ್ ಮೂಲಕ ಕ್ಯಾನ್ಸಲ್ ಮಾಡಿ ಡಿಕ್ಕಿಯಲ್ಲಿದ್ದ ಚೀಲವನ್ನು ತೆಗೆಯುವಂತೆ ಹೇಳಿದ್ದಾನೆ ಇದಕ್ಕೆ ಒಪ್ಪದಿದ್ದ ಯುವಕರು ಹೆಚ್ಚು ದುಡ್ಡು ನೀಡುವುದಾಗಿ ಚಾಲಕನಿಗೆ ಆಮಿಷ ಒಡ್ಡಿದ್ದಾರೆ ಆದರೆ ಇದ್ಯಾವುದಕ್ಕೂ ಜಗ್ಗದ ಚಾಲಕ ಡಿಕ್ಕಿಯಲ್ಲಿದ್ದ ಚೀಲವನ್ನು ತೆಗೆಯುವಂತೆ ಹೇಳಿ ಅಲ್ಲಿಂದ ತೆರಳಿದ್ದಾನೆ. ಅಲ್ಲೇ ಸ್ವಲ್ಪ ಮುಂದೆ ಹೋದ ಚಾಲಕ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾನೆ ಅಷ್ಟು ಮಾತ್ರವಲ್ಲದೆ ಗಸ್ತು ತಿರುಗುತ್ತಿದ್ದ ಪೊಲೀಸರಿಗೂ ಮಾಹಿತಿ ನೀಡಿದ್ದಾನೆ.
Related Articles
Advertisement