Advertisement
ಜುಲೈ 21 ರಂದು ಬೆಳ್ಳಾರೆ ಪಟ್ಟಣದಲ್ಲಿ ಹತ್ಯೆಗೀಡಾದ ವಲಸೆ ಕಾರ್ಮಿಕ 19 ವರ್ಷದ ಮಸೂದ್ ಅವರ ಕುಟುಂಬ, ಬಿಜೆಪಿ ಯುವ ಮುಖಂಡ 31 ವರ್ಷದ ಪ್ರವೀಣ್ ಕುಮಾರ್ ನೆಟ್ಟಾರು ಮತ್ತು ಸುರತ್ಕಲ್ ನ ಮಂಗಲಪೇಟೆಯ 23 ವರ್ಷದ ಮೊಹಮ್ಮದ್ ಫಾಜಿಲ್ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಮಸೂದ್ ಕುಟುಂಬದವರು ತಮ್ಮ ಮಗ ಬಲಿಪಶುವಾಗಿದ್ದು, ತಮಗೆ ನ್ಯಾಯ ನೀಡಲಿಲ್ಲ ಎಂದು ನೋವು ತೋಡಿಕೊಂಡರು. ಪ್ರವೀಣ್ ನೆಟ್ಟಾರು ಅವರ ಪತ್ನಿ ಮತ್ತು ಪೋಷಕರನ್ನು ಸಮಾಧಾನಪಡಿಸಿದರು ಮತ್ತು ನ್ಯಾಯಕ್ಕಾಗಿ ಹೋರಾಟದಲ್ಲಿ ತಮ್ಮ ಬೆಂಬಲವನ್ನು ನೀಡುವುದಾಗಿ ವಾಗ್ದಾನ ಮಾಡಿ, ಮೊಬೈಲ್ ಸಂಖ್ಯೆಯನ್ನು ಸಹ ನೀಡಿ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರನ್ನು ಸಂಪರ್ಕಿಸಲು ಹೇಳಿದರು.
Related Articles
Advertisement
ಜೆಡಿಎಸ್ ನಾಯಕರಾದ ಬಿ.ಎಂ ಫಾರೂಕ್,ಬೋಜೇಗೌಡ,ಸಿಎಂ ಇಬ್ರಾಹಿಂ,ಹಾಗೂ ಮುಖಂಡರು ಹಾಜರಿದ್ದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ನೇತೃತ್ವದ ನಿಯೋಗ ಭಾನುವಾರ ಸಂತ್ರಸ್ತ ಮೂವರ ಮನೆಗಳಿಗೆ ಭೇಟಿ ನೀಡಿದ್ದರು. ಬಿಜೆಪಿ ಕಾರ್ಯಕರ್ತ ಪ್ರವೀಣ್ ಅವರ ಕುಟುಂಬವನ್ನು ಭೇಟಿ ಮಾಡಿದಾಗ ಜನರು ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿ”ಪ್ರವೀಣ್ ಹಂತಕರಿಗೆ ಜಾಮೀನು ಸಿಗುವಂತೆ ಕಾಂಗ್ರೆಸ್ ನಾಯಕರು ಖಾತ್ರಿ ಪಡಿಸುತ್ತಾರೆ” ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.