Advertisement

ಚುನಾವಣಾ ಪ್ರಣಾಳಿಕೆ ರೂಪಿಸಲು ತಜ್ಞರ ಸಲಹೆ ಕೇಳಿದ ಎಚ್‌ಡಿಕೆ

01:00 PM Jan 09, 2018 | Team Udayavani |

ಮೈಸೂರು: ಮುಂಬರುವ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲು ವಿವಿಧ ಕ್ಷೇತ್ರದ ತಜ್ಞರ ಜತೆಗೆ ಸಂವಾದ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿರುವ ಜೆಡಿಎಸ್‌ ರಾಜಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸೋಮವಾರ ಮೈಸೂರಿನಲ್ಲಿ ವಿಶ್ರಾಂತ ಕುಲಪತಿಗಳು, ಶಿಕ್ಷಣ ತಜ್ಞರು ಹಾಗೂ ಸಂಶೋಧನಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

Advertisement

ಜಮ್ಮು-ಕಾಶ್ಮೀರ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕರೀಂ ಮಾತನಾಡಿ, 15 ರಿಂದ 20ಸಾವಿರ ವಿದ್ಯಾರ್ಥಿಗಳಿಗೊಂದು ವಿಶ್ವವಿದ್ಯಾನಿಲಯ ಇರಬೇಕು.ಆದರೆ, ರಾಜ್ಯದಲ್ಲಿ ಒಂದು ಸಾವಿರ, ಎರಡು ಸಾವಿರ ವಿದ್ಯಾರ್ಥಿಗಳಿಗೂ ಒಂದು ವಿವಿ ಮಾಡಲಾಗುತ್ತಿದೆ. ಇದನ್ನು ತಪ್ಪಿಸಬೇಕು.

ಉನ್ನತ ಶಿಕ್ಷಣ ಸುಧಾರಣಾ ಆಯೋಗ ರಚಿಸಬೇಕು. ಪ್ರಾಥಮಿಕ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿ ಕೊಳಗೇರಿಗಳಲ್ಲಿ ಶಾಲೆಗಳನ್ನು ಆರಂಭಿಸಿ. ಮದರಸಾಗಳಲ್ಲಿ ಕನ್ನಡ, ಇಂಗ್ಲಿಷ್‌, ವಿಜ್ಞಾನ ಬೋಧನೆಗೆ ಅನುದಾನ ಕೊಡಿ ಎಂದು ಸಲಹೆ ನೀಡಿದರು.

ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚುತ್ತಿರುವುದು ಸ್ವಾಗತಾರ್ಹ. ಆದರೆ, ಆ ಕಾಲೇಜುಗಳಲ್ಲಿನ ಶಿಕ್ಷಕರ ಕೊರತೆ ಹೋಗಲಾಡಿಸಲು ಸ್ಥಳೀಯ ವೈದ್ಯರನ್ನು ಬೋಧಕರನ್ನಾಗಿ ನೇಮಿಸಿಕೊಳ್ಳಬೇಕು.
-ಡಾ.ಎಸ್‌.ಪಿ.ಯೋಗಣ್ಣ.

ಕುಸಿಯುತ್ತಿರುವ  ಶಿಕ್ಷಣದ ಮೌಲ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಿ. ನಿವೃತ್ತಿ ವಯಸ್ಸನ್ನು 62ಕ್ಕೆ ಏರಿಸುವುದರಿಂದ ಯುವಜನರು ನಿರುದ್ಯೋಗಿಗಳಾಗುತ್ತಾರೆ. ಈ ಬಗ್ಗೆ ಗಮನಹರಿಸಿ.
-ಹೊಂಗೇಶ್‌ ಗೌಡ, ಎಂಜಿನಿಯರಿಂಗ್‌ ವಿದ್ಯಾರ್ಥಿ

Advertisement

ಮೈಸೂರು ವಿವಿಯ ಕುಲಪತಿ ಸ್ಥಾನ ತೆರವಾಗಿ ಜ.10ಕ್ಕೆ ಒಂದು ವರ್ಷವಾಯಿತು. ರಾಜ್ಯದ ಹಲವು ವಿವಿಗಳಲ್ಲಿ ಕಾಯಂ ಕುಲಪತಿಗಳಿಲ್ಲ. ಬೋಧನಾ ಸಿಬ್ಬಂದಿಗಳಿಲ್ಲ. ಈ ವ್ಯವಸ್ಥೆಯನ್ನು ಸರಿಪಡಿಸಿ.
-ರವಿಕುಮಾರ್‌, ರೀಸರ್ಚ್‌ಸ್ಕಾಲರ್‌, ಮೈಸೂರು ವಿವಿ

ವರ್ಷಕ್ಕೊಮ್ಮೆ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ಕೋಟಿ ಕೋಟಿ ಹಣ ನೀಡುವ ಬದಲು, ಒಂದು ವರ್ಷ ಸಮ್ಮೇಳನ ನಿಲ್ಲಿಸಿ, ಆ ಹಣದಿಂದ ಕನ್ನಡ ಸಾಹಿತ್ಯವನ್ನು ಡಿಜಿಟಲೀಕರಣಗೊಳಿಸಿ, ತಂತ್ರಜ್ಞಾನದ ಜತೆಗೆ ಕನ್ನಡವು ಬೆಳೆದಂತಾಗುತ್ತೆ.
-ರಂಗನಾಥ್‌, ಎಂಜಿನಿಯರಿಂಗ್‌ ವಿದ್ಯಾರ್ಥಿ

1952ರ ಚುನಾವಣೆಯಿಂದಲೂ ಈ ವ್ಯವಸ್ಥೆಯನ್ನು ನೋಡುತ್ತಾ ಬಂದಿದ್ದೇನೆ, ನಿಮ್ಮ ಅನುಭವ ಹೇಳ್ತೀರಾ ಎಂದು ಕೇಳಿದ್ದು ನೀವೇ ಮೊದಲು.
ಜನತೆಗೆ ಸೂರು, ಪೌಷ್ಟಿಕ ಆಹಾರ, ನೀರು, ಶೌಲಾಯ, ಪ್ರಾಥಮಿಕ ಶಿಕ್ಷಣ, ಸುರಕ್ಷತೆ ಕೊಡಬೇಕು. ಮಾನವಹಕ್ಕುಗಳ ಬಗ್ಗೆ ಗಮನಹರಿಸಬೇಕು. ಅನುಷ್ಠಾನ ಯೋಗ್ಯ ಆಶ್ವಾಸನೆಗಳನ್ನಷ್ಟೆ ಕೊಡಿ.
-ಪ್ರೊ.ಚಂದ್ರಶೇಖರ ಶೆಟ್ಟಿ, ವಿಶ್ರಾಂತ ಕುಲಪತಿ    

ಕೃಷಿಯಲ್ಲಿ ವಿಜ್ಞಾನ-ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಕೃಷಿ ಸಬ್ಸಿಡಿ ತೆಗೆದು ಸಾಮರ್ಥ್ಯ ಹೆಚ್ಚಿಸಿ, ಕೃಷಿ ಪಠ್ಯಕ್ರಮ ಮಾರ್ಪಾಡು ಮಾಡಬೇಕು. ಡಾ.ಸ್ವಾಮಿನಾಥನ್‌ ವರದಿ ಶೀಘ್ರ ಅನುಷ್ಠಾನಕ್ಕೆ ತರಬೇಕು. ಕೃಷಿ ಉತ್ಪ$ನ್ನಗಳ ಮೌಲ್ಯವರ್ಧನೆ ಮಾಡಬೇಕು. 2000ನೇ ಇಸವಿಯಲ್ಲಿನ ಪದ್ಧತಿಯಂತೆ ಕುಲಪತಿಗಳ ನೇಮಕವಾಗಬೇಕು. ಖಾಸಗಿ ವಿವಿಗಳನ್ನು ಸರಿಪಡಿಸಬೇಕು.
-ಪ್ರೊ.ಮಹದೇವಪ್ಪ, ವಿಶ್ರಾಂತ ಕುಲಪತಿ

ವಿ.ಪಿ.ಸಿಂಗ್‌ ಅವರ ಮಂತ್ರಿಮಂಡಲದಲ್ಲಿ ಇಬ್ಬರು ವಿಜ್ಞಾನಿಗಳು ಮಂತ್ರಿಗಳಾಗಿದ್ದರು. ಅದರಂತೆ ನೀವು ಕೂಡ ಮಂತ್ರಿಮಂಡಲ ಮಾಡುವಾಗ ಒತ್ತಡಕ್ಕೆ ಒಳಗಾದರು, ವಿಜ್ಞಾನಿ, ತಜ್ಞರನ್ನು ಸೇರಿಸಿಕೊಳ್ಳಿ.
-ಪ್ರೊ.ಎಸ್‌.ಎನ್‌.ಹೆಗ್ಡೆ, ವಿಶ್ರಾಂತ ಕುಲಪತಿ

ಪ್ರಾಥಮಿಕ ಶಿಕ್ಷಣ, ಉನ್ನತ ಶಿಕ್ಷಣದ ಸಂಪರ್ಕ ಸೇತುವಾಗಬೇಕು. ಇಂದಿನ ವಿದ್ಯಾರ್ಥಿಗಳಿಗೆ ಜನತಂತ್ರ ವ್ಯವಸ್ಥೆಯಲ್ಲಿರುವುದೇ ತಿಳಿದಿಲ್ಲ. ಹೀಗಾಗಿ ಮತದಾನ ಸರಿಯಾಗಿ ಆಗುತ್ತಿಲ್ಲ. ಇದನ್ನು ಹೋಗಲಾಡಿಸಲು ವಿಶ್ವವಿದ್ಯಾನಿಲಯಗಳಲ್ಲಿ ಹಿಂದೆ ಇದ್ದಂತೆ ವಿದ್ಯಾರ್ಥಿ ಸಂಘಟನೆಗಳಿಗೆ ಚುನಾವಣೆಗಳನ್ನು ನಡೆಸಬೇಕು.
-ಎಚ್‌.ವಿಶ್ವನಾಥ್‌, ಮಾಜಿ ಸಂಸದರು

Advertisement

Udayavani is now on Telegram. Click here to join our channel and stay updated with the latest news.

Next