ಖಾಸಗಿ ಕ್ಷೇತ್ರದ ಎಚ್‌ಡಿಎಫ್ ಸಿ ಬ್ಯಾಂಕ್ ಲಿಮಿಟೆಡ್‌ನ ಮೂರನೇ ತ್ತೈಮಾಸಿಕದ ಸಾಧನೆ ವರದಿ ಪ್ರಕಟಗೊಂಡಿದೆ.
Advertisement
ಕಳೆದ ವರ್ಷದ 3ನೇ ತ್ತೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ಸಂಸ್ಥೆಯ ನಿವ್ವಳ ಆದಾಯ ಶೇ.18ರಷ್ಟು ಏರಿಕೆಯೊಂದಿಗೆ 12,259 ಕೋಟಿ ರೂ.ಗಳಿಗೆ ವೃದ್ಧಿಸಿದೆ.
ಕಳೆದ ವರ್ಷ 3ನೇ ತ್ತೈಮಾಸಿಕದಲ್ಲಿ ಸಂಸ್ಥೆಯ ನಿವ್ವಳ ಆದಾಯ 10,342.50 ಕೋಟಿ ರೂ.ಗಳಾಗಿತ್ತು. ಸಂಸ್ಥೆಯ ನಿವ್ವಳ ಬಡ್ಡಿ ಆದಾಯದಲ್ಲೂ ಶೇ.25ರಷ್ಟು ಏರಿಕೆ ದಾಖಲಿಸಲಾಗಿತ್ತು.
3ನೇ ತ್ತೈಮಾಸಿಕದ ನಿವ್ವಳ ಬಡ್ಡಿ ಆದಾಯ 22,988 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಇದೇ ತ್ತೈಮಾಸಿಕದಲ್ಲಿ 18,443.50 ಕೋಟಿ ರೂ.ಗಳ ನಿವ್ವಳ ಬಡ್ಡಿ ಆದಾಯ ಸಂಗ್ರಹವಾಗಿತ್ತು.