ಚಿಕ್ಕಮಗಳೂರು: ನಾನು ಜಾತ್ಯಾತೀತ ವ್ಯಕ್ತಿ, ಜಾತ್ಯಾತೀತ ಶಾಸಕ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ನನಗೆ ಶಿಸ್ತು ಕಲಿಸಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿಕೊಂಡಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್ ಪಕ್ಷ ಸೇರಿ ಗೆದ್ದು ಶಾಸಕರಾದ ಸಂತಸದಲ್ಲಿ ಮಾತನಾಡಿದ ಹೆಚ್.ಡಿ ತಮ್ಮಯ್ಯ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ನನಗೆ ಶಿಸ್ತು ಕಲಿಸಿದೆ, ನಾನು ಸಂಘದ ಸ್ವಯಂ ಸೇವಕ, ನಾನು ಜಾತ್ಯಾತೀತ ವ್ಯಕ್ತಿ ಈ ನಿಟ್ಟಿನಲ್ಲೇ ಪ್ರಮಾಣವಚನವನ್ನು ಸ್ವೀಕರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿಯೇ ನನ್ನ ಕೆಲಸ ಮುಂದುವರೆಯಲಿದೆ ಎಂದು ಹೇಳಿದರು.
ಇದನ್ನೂ ಓದಿ: MLA- MLC ಅಲ್ಲದಿದ್ದರೂ ಸಚಿವ ಸ್ಥಾನ: ಪಕ್ಷನಿಷ್ಠೆಯಿಂದ ಬೋಸರಾಜ್ ಗೆ ಮಂತ್ರಿ ಭಾಗ್ಯ