Advertisement
ಟೆಕ್ ಸೈಟ್ ಆಗಿರುವ ಟೆಲಿಕಾಮ್ ಟಾಕ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಡಿಶ್ ಟಿವಿ ತನ್ನ D2H ಗ್ರಾಹಕರಿಗಾಗಿ ಒಂದು ನೂತನ ಪ್ಲಾನ್ ಬಿಡುಗಡೆ ಮಾಡಿದೆ. ಕಂಪನಿಯ ಪ್ರಕಾರ D2H ಗ್ರಾಹಕರಿಗೆ ಪೂರ್ಣ ಐದು ವರ್ಷ ಸೆಟಪ್ ಬಾಕ್ಸ್ ಮೇಲೆ ವಾರಂಟಿ ನೀಡಲಾಗುವುದು ಎಂದಿದೆ. ಇದಕ್ಕೂ ಮೊದಲು ಗ್ರಾಹಕರಿಗೆ ಕೇವಲ ಮೂರು ವರ್ಷಗಳ ವಾರಂಟಿ ಮಾತ್ರ ಸಿಗುತ್ತಿತ್ತು.
Related Articles
Advertisement
ಬ್ರಾಡ್ಬ್ಯಾಂಡ್ ಸಂಪರ್ಕಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆ ಇತ್ತೀಚಿನ ದಿನಗಳಲ್ಲಿ ಡೈರೆಕ್ಟ್ ಟು ಹೋಮ್ ಸೇವೆಗಳು ಪ್ರಭಾವಿತಗೊಂಡಿವೆ ಎಂಬುದು ಇಲ್ಲಿ ಉಲ್ಲೇಖನೀಯ.
ಕೆಲವು ಸಮಯದ ಹಿಂದೆ ಡಿಶ್ ಟಿವಿ ತನ್ನ ಡಿ 2 ಹೆಚ್ ಗ್ರಾಹಕರಿಗೆ 99 ರೂಗಳಿಗೆ ವಿಸ್ತೃತ ಖಾತರಿ ಯೋಜನೆಯನ್ನು ಘೋಷಿಸಿತ್ತು. ಈ ವಿಸ್ತೃತ ಖಾತರಿ ಯೋಜನೆಯಲ್ಲಿ ಜಿ ಎಸ್ ಟಿಯಿಂದ ಆವೃತವಾದ ಸೆಟ್-ಟಾಪ್ ಬಾಕ್ಸ್ (STB) ಸೇರಿದೆ.
ಓದಿ : ಭಗವದ್ಗೀತೆಯ ಎಲೆಕ್ಟ್ರಾನಿಕ್ ಪ್ರತಿಯೊಂದಿಗೆ ಬಾಹ್ಯಾಕಾಶಕ್ಕೆ ಜಿಗಿದ ಇಸ್ರೋ ರಾಕೆಟ್..!