Advertisement

HD Revanna ಕಾಲವೇ ಎಲ್ಲವನ್ನೂ ಶೀಘ್ರವೇ ನಿರ್ಧಾರ ಮಾಡುತ್ತದೆ

11:23 PM Jun 28, 2024 | Team Udayavani |

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಮತ್ತು ಸೂರಜ್‌ ರೇವಣ್ಣ ಅವರ ಬಂಧನದ ಬಗ್ಗೆ ಈಗ ನಾನೇನೂ ಮಾತನಾಡುವುದಿಲ್ಲ. ಶೀಘ್ರ ಕಾಲವೇ ಎಲ್ಲವನ್ನೂ ನಿರ್ಧರಿ ಸುತ್ತ‌ದೆ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತ ನಾಡಿ, ಅವರಿಬ್ಬರ ಬಂಧನದ ಬಗ್ಗೆ ನಾನು ಈಗ ಏನು ಹೇಳುವುದಿಲ್ಲ. ಯಾರೇ ತಪ್ಪು ಮಾಡಿದ್ದರೂ ಕಾನೂನು ಇದೆ. ನಾನು ಯಾರ ಪರ ವಹಿಸಿಕೊಳ್ಳಲು ಹೋಗುವುದಿಲ್ಲ. ಕಾನೂನಿನ ಬಗ್ಗೆ ನನಗೆ ಗೌರವ ಇದೆ. ನ್ಯಾಯಾಂಗದ ಮೇಲೆ ಗೌರವ ಇದೆ. ದೇವರ ಬಗ್ಗೆ ನನಗೆ ನಂಬಿಕೆ ಇದೆ. ನನ್ನ ಮಗ ತಪ್ಪು ಮಾಡಿದ್ದರೆ ಕ್ರಮ ತೆಗೆದುಕೊಳ್ಳಲಿ ಎಂದರು.

ಮಾಜಿ ಶಾಸಕ ಪ್ರೀತಂ ಗೌಡಗೆ ಎಸ್‌ಐಟಿ ನೋಟಿಸ್‌ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ಅವರೆಲ್ಲ ದೊಡ್ಡವರಿದ್ದಾರೆ. ನಾನು ಅವರ ಬಗ್ಗೆ ಮಾತನಾಡುವುದಿಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next