Advertisement

ಸಿದ್ದರಾಮಯ್ಯ-ಕುಮಾರಸ್ವಾಮಿ ಈಗಲ್‌ಟನ್‌ ಸಮರ

02:33 AM Mar 11, 2022 | Team Udayavani |

ಬೆಂಗಳೂರು: ಈಗಲ್‌ಟನ್‌ ರೆಸಾರ್ಟ್‌ ಗೆ 998 ಕೋಟಿ ರೂ. ದಂಡ ವಿಧಿಸಿರುವ ವಿಚಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ ವೈಯಕ್ತಿಕ ಹಂತಕ್ಕೂ ತಲುಪಿ, ನಾನಾ-ನೀನಾ ಎಂಬ ಪರಿಸ್ಥಿತಿ ಸೃಷ್ಟಿಯಾಗಿತ್ತು. ಇವರಿಬ್ಬರ  ಜಗಳದ ನಡುವೆ ಬಿಜೆಪಿ ಜಾಣಮೌನಕ್ಕೆ ಜಾರಿತ್ತು!

Advertisement

ಸಿದ್ದರಾಮಯ್ಯ:  ಸದನದಲ್ಲಿ ನೀವು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡು ರಾಜಕೀಯ ಮಾಡಿದರೆ ವಿ ಡೋಂಟ್‌ ಕೇರ್‌, ಇದಕ್ಕೆಲ್ಲ ಹೆದರುವುದಿಲ್ಲ.

ಕುಮಾರಸ್ವಾಮಿ: ಬೇರೇನು ಹೇಳಲು ಸಾಧ್ಯ. ಇದೇ ಹೇಳಿಕೊಂಡಿರಿ.

ಸಿದ್ದರಾಮಯ್ಯ: ನೀವೇ ಮುಖ್ಯಮಂತ್ರಿಯಾಗಿದ್ದಿರಿ, ವಿಪಕ್ಷದಲ್ಲೂ ಇದ್ದಿರಿ. ಆಗ ಯಾಕೆ ಇತ್ಯರ್ಥ ಮಾಡಲಿಲ್ಲ.

ಕುಮಾರಸ್ವಾಮಿ: ನನ್ನ ಗಮನಕ್ಕೆ ಬಂದಿದ್ದು  ಈಗ. ಹಾಗಾಗಿ ಮಾತನಾಡುತ್ತಿದ್ದೇನೆ. ಯಾವಾಗ ಏನು ಮಾತನಾಡಬೇಕೆಂದು ನಿಮ್ಮಿಂದ ಕಲಿಯಬೇಕಿಲ್ಲ.

Advertisement

ಸಿದ್ದರಾಮಯ್ಯ: ಬಜೆಟ್‌ಗೂ  ಈ ವಿಚಾರಕ್ಕೂ ಏನ್ರಿ ಸಂಬಂಧ? ಇದಕ್ಕೆ ನಾವು ಉತ್ತರಿಸಲು ಆಗುತ್ತದಾ?

ಕುಮಾರಸ್ವಾಮಿ: ಸಂಬಂಧ ಇದೆ, ಇದೂ ಬಜೆಟ್‌ ವಿಚಾರವೇ, ಸರಕಾರ ಉತ್ತರಿಸಲಿ.

ಸಿದ್ದರಾಮಯ್ಯ: ಈಗಲ್‌ಟನ್‌ ಪರ ನೀವು ಯಾಕೆ ವಕಾಲತ್ತು ವಹಿಸಿಕೊಳ್ಳುತ್ತಿದ್ದೀರಿ?

ಕುಮಾರಸ್ವಾಮಿ: ನಾನು ಮಾನವೀಯತೆ ಪರ.

ಸಿದ್ದರಾಮಯ್ಯ: ಮುಖ್ಯಮಂತ್ರಿಯವರೇ ತನಿಖೆಗೆ ವಹಿಸಿ, ಯಾರು ಯಾರ ಪರ, ಯಾರಿಗೆಷ್ಟು ಪರ್ಸೆಂಟೇಜ್‌ ಎಲ್ಲವೂ ಬಯಲಾಗಲಿ.

 ಕುಮಾರಸ್ವಾಮಿ: ಅದನ್ನೇ ನಾನು ಆಗ್ರಹಿಸುತ್ತಿದ್ದೇನೆ.

ಪ್ರಕರಣ ಸುಪ್ರೀಂ ಕೋರ್ಟ್‌ವರೆಗೂ ಹೋಗಿದೆ.  ಈ ಹಂತದಲ್ಲಿ ತನಿಖೆಗೆ ವಹಿಸಲು ಸಾಧ್ಯವೋ ಇಲ್ಲವೋ ಪರಿಶೀಲಿಸಬೇಕಾಗಿದೆ. ನನ್ನ ಬಳಿ ದಾಖಲೆಗಳೂ ಇಲ್ಲ. ಎಲ್ಲವನ್ನೂ ತರಿಸಿಕೊಂಡು ಕಾನೂನು ಸಚಿವರ ಜತೆ ಚರ್ಚಿಸಿ ಏನು ಮಾಡಬಹುದು ಎಂಬ ಬಗ್ಗೆ  ಆಲೋಚಿಸಿ ಕ್ರಮ ಕೈಗೊಳ್ಳಲಾಗುವುದು.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next