Advertisement

ನನ್ನ ಕಣ್ಣೀರಿಗೆ ಬಣ್ಣವಿಲ್ಲ

06:00 AM Jul 18, 2018 | |

ಬೆಂಗಳೂರು: “”ನಾನೊಬ್ಬ ಭಾವನಾತ್ಮಕ ಜೀವಿ. ಪಕ್ಷ ನನ್ನ ಕುಟುಂಬ. ಕುಟುಂಬದ ಕಾರ್ಯಕ್ರಮದಲ್ಲಿ ನನ್ನಲ್ಲಿರುವ ನೋವುಗಳನ್ನು ಹೇಳಬೇಕಾದರೆ ಭಾವನಾತ್ಮಕವಾಗಿ ಕಣ್ಣಲ್ಲಿ  ನೀರು ಬಂದಿದ್ದು ಸಹಜ ನಡವಳಿಕೆ. ಈ ವೇಳೆ ನಾನು ಕಾಂಗ್ರೆಸ್‌ ನಾಯಕರ ಬಗ್ಗೆಯೂ ಪ್ರಸ್ತಾಪಿಸಿಯೇ
ಇಲ್ಲ. ಆದರೂ ಕಣ್ಣೀರಿನ ವಿಚಾರವನ್ನು ವಿವಾದವಾಗಿ ಮಾಡಲಾಯಿತು.

Advertisement

ನನ್ನ ಕಣ್ಣೀರಿಗೆ ಬಣ್ಣವಿಲ್ಲ
ಎಂದು ಸಿಎಂ ಕುಮಾರಸ್ವಾಮಿ ಬೇಸರಿಸಿದ್ದಾರೆ. “”ನಾನು ರಾಜ್ಯದ ಮುಖ್ಯಮಂತ್ರಿ ಎಂಬುದಕ್ಕಿಂತ ಒಬ್ಬ ಮನುಷ್ಯನಾಗಿ ಮೊದಲಿನಿಂದಲೂ ಜೀವನದಲ್ಲಿ ಮಾನವೀಯತೆ ಅಳವಡಿಸಿಕೊಂಡವನು. ಕುಟುಂಬದ ಮಧ್ಯೆ ನೋವು ಹಂಚಿಕೊಂಡಿದ್ದೇನೆ. ಆದರೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಣ್ಣೀರು ಹಾಕಿದ್ದು ನೋಡಿದ್ದೀರಾ? ಮುಖ್ಯಮಂತ್ರಿ ಸ್ಥಾನದಲ್ಲಿರಬೇಕಾದರೆ ಅಷ್ಟೇ ಗಟ್ಟಿತನದ ಕಾರ್ಯಕ್ರಮಗಳನ್ನು ಕೊಡಲು ಪ್ರಯತ್ನಿಸಿದ್ದೇನೆ” ಎಂದರು. 

ಕೇಂದ್ರ ಸಚಿವರ ಭೇಟಿ ಮತ್ತು ಸಂಸದರೊಂದಿಗಿನ ಸಭೆಗಾಗಿ ದೆಹಲಿಗೆ ತೆರಳಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್‌ ಕಚೇರಿಯಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ ಬಗ್ಗೆ ಉಂಟಾದ ವಿವಾದ ಕುರಿತು ಪ್ರತಿಕ್ರಿಯೆ ನೀಡಿದರು. “”ಇಷ್ಟೆಲ್ಲಾ ಕಷ್ಟದ ಮಧ್ಯೆಯೂ ರೈತರ ಸಾಲ ಮನ್ನಾ ಮಾಡುವಂತಹ ದಿಟ್ಟ ನಿರ್ಧಾರ ಕೈಗೊಂಡಿದ್ದೇನೆ. ಒಳ್ಳೆಯ ಕಾರ್ಯಕ್ರಮ ಕೊಡುತ್ತಿದ್ದೇನೆ. ಆದರೆ, ಯಾವುದೇ ಉತ್ತಮ ಕೆಲಸ ಮಾಡಲು ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ವಿಷಯ ಪ್ರಸ್ತಾಪವಾದಾಗ ಈ ಬಗ್ಗೆ ಮಾತನಾಡಿದ್ದೇನೆ. ಆದರೆ, ಅದನ್ನೇ ದೊಡ್ಡ ವಿಷಯ ಮಾಡಿ ಮಾಧ್ಯಮಗಳು ಚರ್ಚೆಗೆ ಅವಕಾಶ ಮಾಡಿಕೊಟ್ಟವು” ಎಂದು ಬೇಸರ ವ್ಯಕ್ತಪಡಿಸಿದರು.

ಕಣ್ಣೀರು ಸುರಿಸಿದ ಸಿಎಂ ವೀಕ್‌ ಅಲ್ಲ: ಜಾರ್ಜ್‌
ಬೆಳಗಾವಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ವಿಚಾರದಲ್ಲಿ ಕಣ್ಣೀರು ಸುರಿಸಿದ್ದಾರೆ. ಆದರೆ, ಅವರು ವೀಕ್‌ ಅಲ್ಲ ಎಂದು ಸಚಿವ ಕೆ.ಜೆ.ಜಾರ್ಜ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಯಾರೇ ಮುಖ್ಯಮಂತ್ರಿಯಾದರೂ ಸರಕಾರ ನಡೆಸುವುದು ಅಷ್ಟೊಂದು ಸುಲಭವಲ್ಲ. ಮುಖ್ಯಮಂತ್ರಿ ಹುದ್ದೆ ಇರುವುದು ಎಂಜಾಯ್‌ ಮಾಡುವುದಕ್ಕಲ್ಲ. ಸರಕಾರ ನಡೆಸುವುದು ಎಂದರೆ ಹೂವಿನ ಹಾಸಿಗೆಯಲ್ಲ ಎಂದರು.

ಪಕ್ಷದ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿದ್ದೇನೆ ಎಂದರೆ ಅದು ನನ್ನ ಅಸಹಾಯಕತೆ ಅಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಇರಬೇಕಾದರೆ ಅಷ್ಟೇ ಗಟ್ಟಿತನದ ಕಾರ್ಯಕ್ರಮ ಕೊಡಲು ಪ್ರಯತ್ನಿಸಿದ್ದೇನೆ.
● ಎಚ್‌.ಡಿ. ಕುಮಾರಸ್ವಾಮಿ, ಸಿಎಂ

Advertisement

ಕುಮಾರಸ್ವಾಮಿ ತಮ್ಮ ಪಕ್ಷದ ಕಾರ್ಯಕ್ರಮದಲ್ಲಿ ಕಣ್ಣೀರು ಹಾಕಿರುವ ಭಾವನಾತ್ಮಕ ವಿಷಯದಲ್ಲಿ ರಾಜಕೀಯ ಹುಡುಕುವುದು ಬೇಡ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವೆ ಹೊಂದಾಣಿಕೆ ಇದೆ.
● ಶಿವಾನಂದ ಪಾಟೀಲ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next