ಶಿವಮೊಗ್ಗ : ಆರ್ ಎಸ್ ಎಸ್ ಪ್ರಮುಖರಿಗೆ ಶಾಸಕರು, ಸಚಿವರಿಂದ ಕಮಿಷನ್ ಹೋಗ್ತಾ ಇದೆ, ಮುಂಬರುವ ಚುನಾವಣೆಗೆ ಹಣ ಸಂಗ್ರಹವನ್ನು ಆರ್ ಎಸ್ ಎಸ್ ನಿಂದಲೇ ಆರಂಭವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ
ಶಿವಮೊಗ್ಗದಲ್ಲಿ ಮಾತನಾಡಿದ ಅವರು ಸರ್ಕಾರದಲ್ಲಿ ಕಮಿಷನ್ ಲೆಕ್ಕ ಇಲ್ಲ. ಆರ್ ಎಸ್ ಎಸ್ ನ 2-3 ಜನ ಪ್ರಮುಖರಿಗೆ ಕಮಿಷನ್ ಹಣ ಕೊಡಲೇಬೇಕು. ಕಮಿಷನ್ ವ್ಯವಹಾರ ನೇರವಾಗಿ ಆರ್ ಎಸ್ ನಿಂದ ನಡೆಯುತ್ತಿದ್ದು ಇದರಲ್ಲಿ ಯಾವುದೇ ಸಂಶಯವಿಲ್ಲ ಶಾಸಕರು, ಮಂತ್ರಿಗಳು ಎಲ್ಲರೂ ಪ್ರತಿ ಕೆಲಸದ ಕಮಿಷನ್ ನೇರವಾಗಿ ಹಿಂದಿರುವ ಮುಖಂಡರಿಗೆ ಕೊಡಲೇಬೇಕು, ಅಲ್ಲದೆ ಪ್ರತಿ ಕ್ಷೇತ್ರದಲ್ಲಿ 20 ರಿಂದ 30 ಕೋಟಿ ಖರ್ಚು ಮಾಡಲು ಹಣ ಸಂಗ್ರಹ ಆಗ್ತಾ ಇದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸಾವಿರಾರು ಕೋಟಿ ರೂ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಶಾಸಕರು, ಸಚಿವರಿಗೆ ಎಷ್ಟು ಕಮಿಷನ್ ಕೊಟ್ಟಿದ್ದಾರೆ ಎಂದು ಕೇಳಿ ನೋಡಿ.. ಸ್ವೇಚ್ಛಾಚಾರವಾಗಿ ಲೂಟಿ ಮಾಡುವಂತಹ ವ್ಯವಸ್ಥೆ ರಾಜ್ಯದಲ್ಲಿ ನಡೆದಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಅಗ್ನಿಪಥ್ ಯುವಜನತೆಯ ಆಕಾಂಕ್ಷೆಯ ನಡುವೆ ಚೆಲ್ಲಾಟ ನಡೆಸುವ ಯೋಜನೆ: ಮಾಜಿ ಸಚಿವ ಪಲ್ಲಂ ರಾಜು
Related Articles
2023ಕ್ಕೆ ಹೆಚ್.ಡಿ.ಕೆ ಮತ್ತೆ ಸಿಎಂ :
ರಾಜ್ಯದಲ್ಲಿ ನೊಂದವರನ್ನು ರಕ್ಷಿಸಲು ಮತ್ತೊಮ್ಮೆ ಸಿಎಂ ಆಗುವ ವಿಶ್ವಾಸ ಇದೆ. ಬಡವರಿಗಾಗಿ ಮತ್ತೊಂದು ಬಾರಿ ಸಿಎಂ ಆಗಲು ದೇವರ ಅಶಿರ್ವಾದ ಇದೆ. ಬಡವರಿಗಾಗಿ ಅಧಿಕಾರ ಹಿಡಿಯುವ ಇಚ್ಛೆಯಿದೆ ಎಂದು ಹೇಳಿದ ಕುಮಾರಸ್ವಾಮಿ, ಯಾರೇ ಏನೇ ಹೇಳಲಿ. ಜೆಡಿಎಸ್ ಪಕ್ಷ ಮುಗಿಸಿದ್ದೇವೆ. ತಲೆ ಎತ್ತಲು ಬಿಡಲ್ಲ ಅಂತ ಯಾರು ಬೇಕಾದರೂ ಹೇಳಲಿ ಆದರೆ ಯಾರೇ ಹೇಳಿದ್ರೂ ಮೇಲೋಬ್ಬ ಇದ್ದಾನೆ. ಅವನ ಆಶೀರ್ವಾದ ನನ್ನ ಮೇಲೆ ಇದ್ದೇ ಇರುತ್ತೆ. ಅಲ್ಲಿಯವರೆಗೂ ಜೆಡಿಎಸ್ ಪಕ್ಷ ಇರುತ್ತೆ ಎಂದರು. ನಮ್ಮ ಪಕ್ಷದ ವೈಖರಿ ಬಗ್ಗೆ ವೈ ಎಸ್ ವಿ ದತ್ತರವರಿಗೆ ಸಮಾಧಾನ ಇದ್ದಂತಿಲ್ಲ. ಎಂಎಲ್ಸಿ ಆಗಲು ಎಲ್ಲಾ ರೀತಿಯ ಸಹಕಾರ ಕೊಟ್ಟರೂ ಅವರು ಹೋಗಲು ಎನು ಕಾರಣ ಎಂದು ಜನರಿಗೆ ಉತ್ತರ ಕೊಡಲಿ ಎಂದರು.
ಅಧಿಕಾರಕ್ಕಾಗಿ ಮಿಷನ್ 123 :
ರಾಜ್ಯದಲ್ಲಿ ಸ್ವತಂತ್ರ ಸರ್ಕಾರ ತರುವ ಗುರಿ ಇಟ್ಟುಕೊಂಡು ಜನರಿಗೆ ಮನವಿ ಮಾಡಿದ್ದೇನೆ. ಆಗಸ್ಟ್ ತಿಂಗಳಿನಿಂದ ಪಂಚರತ್ನ ರಥಯಾತ್ರೆ ಮಾಡ್ತಾ ಇದ್ದೇನೆ. ಸಮಿಶ್ರ ಸರ್ಕಾರದಲ್ಲಿ ಸಿಎಂ ಆಗುವ ಆಸೆ ನನಗಿಲ್ಲ, ಜನರ ಬದುಕಿಗೆ ಶಾಶ್ವತ ಪರಿಹಾರ ನೀಡಲು ಯಾತ್ರೆ ಹೊರಟಿದ್ದೇನೆ. ಏಳೆಂಟು ತಿಂಗಳು ಸಮಯ ಇದೆ. ಜನರ ಪರಿವರ್ತನೆ ಮಾಡುತ್ತೆನೆ ಎಂದರು.